ಜೀನ್ಸ್ ಎಂಬುದು ಇಂದು ಯುವ ಜನತೆ ಮಾತ್ರವಲ್ಲದೇ, ಅನೇಕ ವಯೋಮಾನದವರ ನೆಚ್ಚಿನ ಧಿರಿಸಾಗಿದೆ. ಮನೆಯಿಂದ ಹೊರಡುವಾಗ ತೊಡುವ ಈ ಜೀನ್ಸ್ಗಳು ಸಂಜೆ ಬಳಲಿ ಮನೆಗೆ ಬಂದಾಗ ತಕ್ಷಣಕ್ಕೆ ಬದಲಾಯಿಸುತ್ತೇವೆ. ಬಿಗಿಯಾದ ಜೀನ್ಸ್ಗಳ ಬದಲಾಗಿ ಸಡಿಲವಾದ ಪ್ಯಾಂಟ್ಗಳನ್ನು ಹಾಕುವುದು ಸಾಮಾನ್ಯ. ಆದರೆ, ಕೆಲಸದ ಒತ್ತಡ, ಸುಸ್ತು, ಆಯಾಸದಿಂದಾಗಿ ಕೆಲವೊಮ್ಮೆ ಇದೇ ಜೀನ್ಸ್ಗಳಲ್ಲೇ ಮಲಗುವುದು ಇದೆ.
ಈ ರೀತಿ ಜೀನ್ಸ್ನಲ್ಲಿ ಮಲಗುವುದು ಉತ್ತಮ ಅಭ್ಯಾಸ ಅಲ್ಲ ಎಂಬ ಮಾತಿದೆ. ಕಾರಣ ಇದು ಅನೇಕ ಆರೋಗ್ಯ ಸಮಸ್ಯೆಗೆ ಗುರಿಯಾಗಿಸುತ್ತದೆ. ಒಂದು ವೇಳೆ ಇದರಿಂದ ಮಹಾನ್ ಆರೋಗ್ಯ ಸಮಸ್ಯೆ ಏನಾಗುತ್ತದೆ ಎಂಬ ವಾದ ಮಂಡಿಸುವ ಮುನ್ನ ಈ ಅಂಶಗಳು ನೆನಪಿರಲಿ. ಕಾರಣ ಈ ಜೀನ್ಸ್ನಲ್ಲೂ ಸಂತೋನಾತ್ಪತ್ತಿಯ ವ್ಯವಸ್ಥೆ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ
ಫಂಗಲ್ ಸೋಂಕು: ಜೀನ್ಸ್ಗಳನ್ನು ಡೆನಿಮ್ ಬಟ್ಟೆಗಳಿಂದ ಮಾಡಲಾಗುತ್ತಿದೆ. ಇದು ಎಷ್ಟು ದಪ್ಪ ಇರುತ್ತದೆ ಎಂದರೆ, ಇದರೊಳಗೆ ಗಾಳಿ ಸಂಚಾರ ಅಸಾಧ್ಯ. ಈ ಉತ್ಪನ್ನ ಬೆವರನ್ನು ಕೂರ ಹೀರಿಕೊಳ್ಳುವುದಿಲ್ಲ. ಪರಿಣಾಮ ಬೆವರುಗಳು ಅಲ್ಲೇ ಶೇಖರಣೆಯಾಗುತ್ತದೆ. ಇದರಿಂದ ಬ್ಯಾಕ್ಟೀರಿಯಾ, ಫಂಗಸ್ ಉತ್ಪತ್ತಿಗೆ ಕಾರಣವಾಗುತ್ತದೆ. ಗಂಟೆಗಟ್ಟಲೇ ರಾತ್ರಿ ಸಮಯದಲ್ಲಿ ಗಾಳಿಯಾಳಡದಿದ್ದಾಗ ಬೆವರುಗಳಿಂದ ಇವು ಸುಲಭವಾಗಿ ಬೆಳೆಯುತ್ತದೆ. ಫಲಿತಾಂಶ ಫಂಗಸ್ನಿಂದ ಸೋಂಕುಂಟಾಗುತ್ತದೆ. ಇದು ಆರೋಗ್ಯಕರ ಸಂತಾನ್ಫೋತಿ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ. ಈ ಹಿನ್ನೆಲೆಯಲ್ಲಿ ತಜ್ಞರು ಜೀನ್ಸ್ಗಳನ್ನು ಸಾಧ್ಯವಾದಷ್ಟು ಕಡಿಮೆ ಬಳಕೆ ಮಾಡುವುದು ಉತ್ತಮ ಎನ್ನುತ್ತಾರೆ. ವಿಶೇಷವಾಗಿ ಋತುಮಾನಗಳಲ್ಲಿ ಹೆಚ್ಚು ಬೆವರು ಉಂಟಾದಾಗ ಇದನ್ನು ಧರಿಸದಿರುವುದು ಉತ್ತಮ ಎಂದು ಆರೋಗ್ಯ ತಜ್ಞರು ಸಲಹೆ ನೀಡಿದ್ದಾರೆ.
ನಿದ್ರೆಗೆ ಭಂಗ: ಸಾಮಾನ್ಯವಾಗಿ ನಿದ್ರೆಗೆ ಜಾರಿದ ಕೆಲವೇ ಗಂಟೆಗಳಲ್ಲಿ ನಮ್ಮ ದೇಹದ ಉಷ್ಣಾಂಶ ಕಡಿಮೆಯಾಗುತ್ತದೆ. ಅದೇ, ಜೀನ್ಸ್ನಲ್ಲಿ ಮಲಗಿದಾಗ ಗಾಳಿಯಾಡದ ಹಿನ್ನೆಲೆ ದೇಶದ ಉಷ್ಣಾಂಶ ಹೆಚ್ಚಾಗುತ್ತದೆ. ಇದು ನಿದ್ದೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಅಧ್ಯಯನ ಕೂಡ ತಿಳಿಸಿದೆ. ಆದಾಗ್ಯೂ, ಬಿಗಿಯಾದ ಜೀನ್ಸ್ಗಳು ಆರಾಮದಾಯಕ ನಿದ್ದೆಗೆ ತೊಡಕುಂಟು ಮಾಡುತ್ತದೆ ಎಂದು ತಜ್ಞರು ತಿಳಿಸಿದ್ದಾರೆ.