ನವದೆಹಲಿ: ಪ್ರಪಂಚದಲ್ಲಿಯೇ ಅತ್ಯಂತ ದೊಡ್ಡದಾದ ರೈಲ್ವೆ ಸಂಪರ್ಕಹೊಂದಿರುವ ದೇಶ ಭಾರತವಾಗಿದೆ. ಭಾರತೀಯ ರೈಲ್ವೆಗೆ 177 ವರ್ಷದ ಇತಿಹಾಸವಿದೆ. ಭಾರತದಾದ್ಯಂತ ಸಂಪರ್ಕ ಹೊಂದಿರುವ ಈ ರೈಲ್ವೆ ಉದ್ದ 68 ಸಾವಿರ ಕಿ.ಮೀ ಎಂದು ಅಂದಾಜಿಸಲಾಗಿದೆ. ಸುಲಭ ಮತ್ತು ರಿಯಾಯಿತಿ ದರದ ಪ್ರಯಾಣವನ್ನು ಈ ರೈಲ್ವೆ ಒದಗಿಸುತ್ತಿದ್ದು, ಭಾರತೀಯರ ಮೆಚ್ಚಿನ ಸಾರಿಗೆ ಸೇವೆ ಇದಾಗಿದೆ.
ಪ್ರತಿ ನಿತ್ಯ ಸುಮಾರು 23 ಲಕ್ಷ ಮಂದಿ ಭಾರತೀಯ ರೈಲ್ವೆಯಲ್ಲಿ ಪ್ರಯಾಣ ನಡೆಸುತ್ತಾರೆ. ಸಂಪರ್ಕ ಸಾಧನೆಗೆ ಪ್ರಮುಖವಾಗಿ ಈ ರೈಲ್ವೆ ಬಳಕೆ ಮಾಡುತ್ತಾರೆ. ಈ ಪ್ರಯಾಣದವನ್ನು ಇನ್ನಷ್ಟು ಸುಗುಮಗೊಳಸಬೇಕಾದರೆ ಭಾರತೀಯ ರೈಲ್ವೆ ಬಗ್ಗೆ ಇರುವ ಕೆಲವು ನಿಯಮಗಳನ್ನು ತಿಳಿಯುವುದು ಅವಶ್ಯವಾಗಿದೆ ಎಂದಿದ್ದಾರೆ ಕನ್ಫರ್ಮ್ ಟಿಕೆಟಿ ಸಹ ಸಂಸ್ಥಾಪಕ ಮತ್ತು ಸಿಒಒ ಶ್ರೀಪಾದ್ ವೈದ್ಯ.
ಓಡುವ ರೈಲಿನಲ್ಲಿ ಆಲರಾಂ ಎಳೆಯುವುದು: ಭಾರತದಲ್ಲಿ ರೈಲಿನಲ್ಲಿ ನೀವು ಪ್ರಯಾಣ ಮಾಡುವಾಗ ಪ್ರತಿ ಕೋಚ್ನಲ್ಲಿ ಈ ಆಲರಾಂ ಅನ್ನು ಕಾಣಬಹುದು. ಯಾವುದೇ ತುರ್ತು ಪರಿಸ್ಥಿತಿಯಲ್ಲಿ ರೈಲ್ವೆ ಆಲರಾಂ ಅನ್ನು ಯಾರು ಬೇಕಾದರೂ ಎಳೆಯಬಹುದಾಗಿದೆ. ವೈದ್ಯಕೀಯ ತುರ್ತ ಸ್ಥಿತಿ ಅಥವಾ ಪ್ರಯಾಣಿಕರ ಸುರಕ್ಷೆ, ಅಪಘಾತ ಸೇರಿದಂತೆ ಇನ್ನಿತರ ಸಕಾರಣಗಳಿಂದ ಓಡುವ ರೈಲನ್ನು ನಿಲ್ಲಿಸಬಹುದಾಗಿದೆ.
ಪ್ರಯಾಣದ ವೇಳೆಯೇ ನಿಮ್ಮ ಪ್ರಯಾಣ ವಿಸ್ತರಿಸಬಹುದು: ಕೆಲವು ಪ್ರಯಾಣದ ಋತುಮಾನದಲ್ಲಿ ನೀವು ತಲುಪುವ ಸ್ಥಳಕ್ಕೆ ಕಾಯ್ದಿರಿಸುವ ಟಿಕೆಟ್ ಸಿಗುವುದಿಲ್ಲ. ಇದರಿಂದ ನಿಮ್ಮ ಪ್ರಯಾಣಕ್ಕೆ ಅಡಚಣೆ ಆಗಬಾರದು ಎಂಬ ಕಾರಣಕ್ಕೆ ವಿಶೇಷ ನಿಯಮವನ್ನು ರೈಲ್ವೆ ಹೊಂದಿದೆ. ನೀವು ತಲುಪುವ ಸ್ಥಳಕ್ಕೆ ಮುನ್ನದ ಸ್ಥಳಕ್ಕೆ ಬೇಕಾದಲ್ಲಿ ನೀವು ಟಿಕೆಟ್ ಕಾಯ್ದರಿಸಿ ಪ್ರಯಾಣಿಸಬಹುದು. ಈ ಪ್ರಯಾಣದಲ್ಲಿ ಟಿಟಿಇ ಸಂಪರ್ಕಿಸಿ, ಮುಂದಿನ ನಿಲ್ದಾನದ ಟಿಕೆಟ್ ಪಡೆಯುವ ಮೂಲಕ ಪ್ರಯಾಣ ಮುಂದುವರೆಸಬಹುದು. ಆದರೆ, ಈ ವೇಳೆ ನಿಮಗೆ ಬೇರೆ ಆಸನ ಲಭ್ಯವಾಗುತ್ತದೆ.
ಮಿಡಲ್ ಬರ್ತ್ ನಿಯಮ: ಭಾರತೀಯ ರೈಲ್ವೆಯ ಮಧ್ಯದ ಕುಳಿತು ಕೊಳ್ಳುವ ಆಸನದ ಕುರಿತು ವಿಶೇಷ ನಿಯಮವಿದೆ. ಬೋಗಿಗಳಲ್ಲಿರುವ ಮಧ್ಯದ ಬರ್ತ್ನ್ನು ರಾತ್ರಿ 10ರಿಂದ ಬೆಳಗ್ಗೆ 6ವರೆಗೆ ಮಾತ್ರ ಮಲಗಲು ಸಾಧ್ಯ. ದಿನದ ಪ್ರಯಾಣದಲ್ಲಿ ಈ ಬರ್ತನ್ ಅನ್ನು ಮಡಚಿಟ್ಟು ಕುಳಿತು ಪ್ರಯಾಣಿಸುವ ಪ್ರಯಾಣಿಕರಿಗೆ ಅವಕಾಶ ಮಾಡಬೇಕು. ಒಂದು ವೇಳೆ ಮಧ್ಯದ ಬರ್ತ್ ಅನ್ನು ಬಳಕೆ ಮಾಡಿದಲ್ಲಿ ಅದನ್ನು ಪ್ರಶ್ನಿಸುವ ಅಧಿಕಾರ ಪ್ರಯಾಣಿಕರಿಗಿದೆ.