ತಂಗಳು ಪೆಟ್ಟಿಗೆ ಅಥವಾ ರೆಫ್ರಿಜರೇಟರ್ ಇಂದು ಬಹುತೇಕ ಮನೆಯಲ್ಲಿ ಸಾಮಾನ್ಯ ಮತ್ತು ಅವಶ್ಯಕ ವಸ್ತುವಾಗಿದೆ. ತರಕಾರಿಯಿಂದ ಮಿಕ್ಕಿದ ಅಡುಗೆಗಳನ್ನು ಸಂಗ್ರಹಿಸುವ ಈ ರೆಫ್ರಿಜೇಟರ್ ಅನ್ನು ಕಾಲ ಕಾಲಕ್ಕೆ ಶುಚಿಗೊಳಿಸುವುದು ಕೂಡ ಅತಿಮುಖ್ಯ ಅಷ್ಟೆ ಅಲ್ಲದೇ ಅವಶ್ಯ ಕೂಡ. ಇಲ್ಲದೇ ಹೋದರೆ ಇದರಲ್ಲಿನ ವಸ್ತುಗಳು ಎಲ್ಲ ಹಾಳಾಗುವುದು ಮಾತ್ರವಲ್ಲ, ಬ್ಯಾಕ್ಟೀರಿಯಾಗಳ ಆಗರವಾಗಿ ಅವು ಅನೇಕ ರೋಗಕ್ಕೆ ಕಾರಣವಾಗುತ್ತದೆ. ಈ ಹಿನ್ನೆಲೆ ಇದನ್ನು ನಿಯಮಿತವಾಗಿ ಶುಚಿಗೊಳಿಸುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಿದೆ. ಹಾಗಾದರೆ ಈ ಫ್ರಿಡ್ಜ್ ಅನ್ನು ಹೇಗೆ ಶುಚಿಗೊಳಿಸುವುದು ಎಂಬ ಚಿಂತೆ ಇದ್ರೆ ಈ ಸಿಂಪಲ್ ಸಲಹೆ ಪಾಲಿಸಿ
ಫ್ರಿಡ್ಜ್ ಶುಚಿಗೊಳಿಸುವಾಗ ಅದರಲ್ಲಿನ ಎಲ್ಲಾ ತರಕಾರಿ ಮತ್ತು ಹಣ್ಣುಗಳು ಮತ್ತು ವಸ್ತುಗಳನ್ನು ಇಟ್ಟ ಡಬ್ಬಿಗಳನ್ನು ಹೊರ ತೆಗೆದು ನೀಟಾಗಿ ಒರೆಸಿ ಇಡಬೇಕು. ಇಲ್ಲದೇ ಹೋದರೆ ಬ್ಯಾಕ್ಟೀರಿಯಾಗಳು ಸಂಪೂರ್ಣವಾಗಿ ಹೊರ ಹೋಗುವುದಿಲ್ಲ. ಇದರಿಂದ ಅವು ಇತರ ವಸ್ತುಗಳನ್ನು ಹಾನಿ ಮಾಡುತ್ತದೆ. ಇವು ಇತರ ವಸ್ತುಗಳನ್ನು ಹಾನಿ ಮಾಡುವ ಸಾಧ್ಯತೆ ಇದೆ.
ಫ್ರಿಡ್ಜ್ ಅನ್ನು ಒರೆಸಿದ ಬಳಿಕ ಇದರ ಬಾಗಿಲನ್ನು ಕೆಲಕಾಲ ಸಂಪೂರ್ಣವಾಗಿ ತೆಗೆದಿರುವುದು ಉತ್ತಮ. ವಸ್ತುಗಳು ಸಂಪೂರ್ಣವಾಗಿ ಒಣಗಿದ ಬಳಿಕವೇ ಅದರೊಳಗೆ ಇಡಬೇಕು. ಜೊತೆಗೆ ವಸ್ತುಗಳನ್ನು ಒಟ್ಟ ಡಬ್ಬಗಳ ಮುಚ್ಚಳವನ್ನು ಹಾಕದೇ ಇರಲು ಮರೆಯಬಾರದು. ಈ ರೀತಿ ಮಾಡುವುದರಿಂದ ಒಂದು ವೇಳೆ ಫ್ರಿಡ್ಜ್ನಲ್ಲಿ ಯಾವುದಾದರೂ ವಸ್ತುಗಳು ಕೆಟ್ಟರೂ ಅದು ಬೇರೆ ವಸ್ತುಗಳಿಗೆ ಹಾನಿ ಮಾಡುವುದಿಲ್ಲ.