ಇದು ಮಳೆಗಾಲ. ಮೋಡ ಕವಿದ ವಾತಾವರಣ, ಸದಾ ಜಿನುಗುವ ಮಳೆಯಿಂದ ನಿಮ್ಮ ಸೌಂದರ್ಯಕ್ಕೆ ಯಾವುದೇ ತೊಡಕಾಗದಂತೆ ನೋಡಿಕೊಳ್ಳುವುದು ಅವಶ್ಯಕ. ಮಳೆಗಾಲ ಸರಳ, ಸಹಜ ಮತ್ತು ರೈನ್ಫ್ರೂಪ್ ಉಡುಪುಗಳ ಸಂಗ್ರಹಕ್ಕೆ ಸಜ್ಜಾಗುವಂತೆ ಪ್ರೇರೇಪಿಸುತ್ತದೆ. ಆರೋಗ್ಯ ಕಾಳಜಿಯಂತೆ ಹೊರಗೆ ಹೋಗುವಾಗ ಧಿರಿಸಿನ ವಿಚಾರದಲ್ಲೂ ಗಮನ ಹರಿಸಬೇಕಿದೆ. ಸದಾ ಸುರಿಯುವ ಮಳೆ ನೀರು ನಿಮ್ಮ ಉಡುಪಿನ ಶೈಲಿಗೆ ಯಾವುದೇ ಭಂಗ ತರದಂತೆ ನೋಡಿಕೊಳ್ಳಬೇಕು. ಅದಕ್ಕೆ ಇಲ್ಲಿದೆ ಕೆಲವು ಸರಳ ಸಲಹೆಗಳು..
ಮಳೆಗಾಲದಲ್ಲಿ ಆದಷ್ಟು ಹೀಲ್ಸ್ ಚಪ್ಪಲಿಗಳಿಗೆ ಒತ್ತು ನೀಡಿ. ಇದು ನಿಮ್ಮನ್ನು ಕೇವಲ ಸ್ಟೈಲಿಶ್ ಆಗಿ ಇಡುವುದಲ್ಲದೇ, ಮಳೆ ನೀರಿನಿಂದ ರಕ್ಷಿಸುತ್ತದೆ. ಬೇಸಿಗೆಯಲ್ಲಿನ ಪ್ಲಿಪ್ ಪ್ಲಾಪ್ ಚಪ್ಪಲಿಯಂತಹ ಬೋರಿಂಗ್ ಫ್ಯಾಷನ್ ಬದಲಾವಣೆಗೂ ಮಳೆಗಾಲ ನಿಮಗೆ ಅವಕಾಶ ನೀಡುತ್ತದೆ. ಇದರಿಂದ ಮಳೆ ನೀರಿನಲ್ಲಿ ಯಾವುದೇ ಅಡೆತಡೆ ಇಲ್ಲದೇ ನಡೆಯಬಹುದು. ಇದು ನಿಮ್ಮ ಎತ್ತರವನ್ನು ಮಾತ್ರವಲ್ಲ, ನಿಮ್ಮ ಸ್ಟೈಲ್ ಅನ್ನು ಕೂಡಾ ಹೆಚ್ಚಿಸುತ್ತದೆ.
ಆರಾಮದಾಯಕ ಉಡುಪು: ಆದಷ್ಟು ಸರಳ ಉಡುಪಿಗೆ ಆದ್ಯತೆ ಇರಲಿ. ಆರಾಮದಾಯಕವಾಗುವ ಜೊತೆಗೆ ನಿಮ್ಮ ಸ್ಟೈಲ್ ಹೆಚ್ಚಿಸಬೇಕು. ಇವು ನಿಮ್ಮನ್ನು ಬೆಚ್ಚಗಿರುವಂತೆ ನೋಡಿಕೊಳ್ಳಲು ಸಹಾಯ ಮಾಡಬೇಕು. ಸ್ಕಾರ್ಫ್, ಶ್ರಗ್ಗಳು ರಕ್ಷಿಸುವ ಜೊತೆಗೆ ಸ್ಟೈಲಿಶ್ ಆಗಿ ಕಾಣುವಂತೆಯೂ ಮಾಡುತ್ತದೆ. ಅಧಿಕ ಸಾಂಪ್ರದಾಯಿಕ ಉಡುಗೆಯ ಬದಲಿಗೆ ಮಳೆಯಲ್ಲಿ ನಡೆದಾಡುವಾಗ ನಿರ್ವಹಣೆ ಮಾಡಬಹುದಾದ ಉಡುಪಿಗೆ ಆದ್ಯತೆ ನೀಡಿ.