ಕರ್ನಾಟಕ

karnataka

ETV Bharat / sukhibhava

ಆಹಾರದ ರುಚಿ ಹೆಚ್ಚಿಸಲು ಈ ಕೆಲಸ ಮಾಡುವ ಮುನ್ನ ಒಮ್ಮೆ ಯೋಚಿಸಿ!

ಅಧಿಕ ಮಟ್ಟದಲ್ಲಿ ಉಪ್ಪು ಸೇವನೆ ದೀರ್ಘಾವಧಿಯ ಕಿಡ್ನಿ ರೋಗ (ಸಿಕೆಡಿ) ಸಮಸ್ಯೆಗೆ ಕಾರಣವಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.

do not add extra salt to food it increases CKD risk
do not add extra salt to food it increases CKD risk

By ETV Bharat Karnataka Team

Published : Dec 29, 2023, 7:42 PM IST

ನ್ಯೂಯಾರ್ಕ್​​: ಕೆಲವರು ಅಡುಗೆಯಲ್ಲಿ ಸಾಮಾನ್ಯ ಉಪ್ಪು ರುಚಿಗಿಂತ ಕೊಂಚ ಹೆಚ್ಚಾಗಿಯೇ ಇರಬೇಕು ಎಂದು ಮತ್ತೆ ಟೇಬಲ್​ ಸಾಲ್ಟ್‌ಗೆ (ಮೇಜಿನ ಮೇಲಿಡುವ ಉಪ್ಪಿನ ಬಾಟಲ್​) ಕೈ ಹಾಕುತ್ತಾರೆ. ಈ ರೀತಿ ಮಾಡುವ ಮುನ್ನ ಎಚ್ಚರ ವಹಿಸಿ. ಇದು ದೀರ್ಘಾವಧಿಯ ಕಿಡ್ನಿ ರೋಗ (ಸಿಕೆಡಿ) ಸಮಸ್ಯೆಗೆ ಕಾರಣವಾಗಬಹುದು ಎಂದು ಎಚ್ಚರಿಸಿದೆ ಹೊಸ ಅಧ್ಯಯನ.

ಮೂತ್ರಪಿಂಡದಲ್ಲಿನ ಹೆಚ್ಚಿನ ಗ್ಲೋಮೆರುಲರ್ ಫಿಲ್ಟರೇಷನ್​ ದರ ಮತ್ತು ಕಡಿಮೆ ಬಾಡಿ ಮಾಸ್ ಇಂಡೆಕ್ಸ್ (ಬಿಎಂಐ) ಅಥವಾ ದೈಹಿಕ ಚಟುವಟಿಕೆಯ ಮಟ್ಟವನ್ನು ಹೊಂದಿರುವ ಜನರಲ್ಲಿ ಈ ರೋಗದ ಅಪಾಯ ಹೆಚ್ಚು. ಈ ಅಧ್ಯಯನದಲ್ಲಿ 4,65,288 ಭಾಗಿದಾರರು ಪಾಲ್ಗೊಂಡಿದ್ದರು. ಆಹಾರದಲ್ಲಿ ಸಾಮಾನ್ಯ ಉಪ್ಪಿಗಿಂತ ಹೆಚ್ಚಿನ ಉಪ್ಪು ಸೇವನೆಯ ಅಭ್ಯಾಸ ಸಿಕೆಡಿ ಅಪಾಯವನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ ಎಂದು ಅಧ್ಯಯನ ವರದಿ ತಿಳಿಸಿದೆ.

ಜಮಾ ನೆಟ್​​ವರ್ಕ್​ನಲ್ಲಿ ಈ ಅಧ್ಯಯನ ವರದಿಯನ್ನು ಪ್ರಕಟವಾಗಿದೆ. ಆಹಾರದಲ್ಲಿ ಸಾಮಾನ್ಯ ಉಪ್ಪು ಸೇವನೆ ಮಾಡದವರಿಗಿಂತ ಹೆಚ್ಚು ಉಪ್ಪು ಸೇವನೆ ಮಾಡುವವರಲ್ಲಿ ಮಧುಮೇಹ ಅಥವಾ ಸಿಕೆಡಿ ಬೇಸ್​ಲೈನ್​ನಲ್ಲಿ ಕಂಡುಬಂದಿದೆ.

ಅಧ್ಯಯನ ಫಲಿತಾಂಶ ಕಂಡುಕೊಂಡಂತೆ ಆಹಾರದಲ್ಲಿ ಹೆಚ್ಚುವರಿಯಾಗಿ ಉಪ್ಪು ಸೇರಿಸುವುದನ್ನು ನಿಲ್ಲಿಸುವುದರಿಂದ ಕಡಿಮೆ ಸಿಕೆಡಿ ಅಪಾಯ ಹೊಂದಬಹುದು ಎಂದು ಯುಎಸ್​ನ ತುಲೇನ್ ವಿಶ್ವವಿದ್ಯಾಲಯದ ಎಪಿಡೆಮಿಯಲೊಜಿ ವಿಭಾಗದ ರುಯಿ ಟ್ಯಾಂಗ್​ ತಿಳಿಸಿದ್ದಾರೆ.

ಈ ಹಿಂದಿನ ಅಧ್ಯಯನದಲ್ಲಿ ಆಹಾರದಲ್ಲಿ ಉಪ್ಪಿನ ಹೆಚ್ಚಿನ ಬಳಕೆಯುವ ಹೃದಯ ರಕ್ತನಾಳ ಸಮಸ್ಯೆ, ಅಕಾಲಿಕ ಸಾವು ಮತ್ತು ಟೈಪ್​ 2 ಮಧುಮೇಹದ ಅಪಾಯ ಹೆಚ್ಚಿಸುವುದರೊಂದಿಗೆ ಸಂಬಂಧ ಹೊಂದಿತ್ತು. ಹೊಸ ಅಧ್ಯಯನವೂ ಸ್ವಯಂ ಇಚ್ಛೆಯಿಂದ ಆಹಾರಕ್ಕೆ ಹೆಚ್ಚಿನ ಉಪ್ಪಿನ ಬಳಕೆ ಮಾಡುವವರಲ್ಲಿ ಸಿಕೆಡಿ ಅಪಾಯದೊಂದಿಗೆ ಅಧಿಕ ಬಿಎಂಐ ದುರ್ಬಲತೆ ಕಂಡುಬಂದಿದೆ.

ಉಪ್ಪಿನ ಬಳಕೆಯೊಂದಿಗಿನ ಸಿಕೆಡಿ ಅಪಾಯ ದೈಹಿಕ ಚಟುವಟಿಕೆ ಮಾಡದವರಿಗಿಂತ ದೈಹಿಕ ಚಟುವಟಿಕೆ ನಡೆಸುವವರಲ್ಲಿ ಕಡಿಮೆ ಅಡ್ಡ ಪರಿಣಾಮ ಹೊಂದಿದೆ ಎಂದು ಅಧ್ಯಯನಕಾರರು ಗಮನಿಸಿದ್ದಾರೆ. ಹೆಚ್ಚಿನ ಉಪ್ಪು ಸೇವನೆ ಮಾಡಲಿಚ್ಛಿಸುವವರು ಸಿಕೆಡಿ ಅಡ್ಡ ಪರಿಣಾಮವನ್ನು ಕಡಿಮೆ ಮಾಡಲು ದೈಹಿಕ ಚಟುವಟಿಕೆ ಪರಿಹಾರ ಎಂದು ಸಲಹೆ ನೀಡಿದ್ದಾರೆ. ಈ ಅಧ್ಯಯನವೂ ಹೆಚ್ಚಿನ ದೈಹಿಕ ಚಟುವಟಿಕೆಯು ಸಿಕೆಡಿ ಅಪಾಯವನ್ನು ಸುಧಾರಿಸುವಲ್ಲಿ ಸಹಾಯ ಮಾಡುತ್ತದೆ ಎಂದು ಸಂಶೋಧಕರು ಸಲಹೆ ನೀಡಿದ್ದಾರೆ.(ಐಎಎನ್​ಎಸ್​)

ಇದನ್ನೂ ಓದಿ: ಶ್ವಾಸಕೋಶ ರೋಗಿಗಳಿಗೆ ಬೀಟ್​ರೂಟ್​ ಜ್ಯೂಸ್​ನ ಪೂರಕಗಳು ಪ್ರಯೋಜನಕಾರಿ: ಅಧ್ಯಯನ

ABOUT THE AUTHOR

...view details