ಕರ್ನಾಟಕ

karnataka

ETV Bharat / sukhibhava

ಪ್ರತಿದಿನ ಒಂದೇ ಸಮಯಕ್ಕೆ ವ್ಯಾಯಾಮ ಮಾಡಿ: ಲಾಭವೇನು ಗೊತ್ತೇ? - ಬೆನ್ನು ಮೂಳೆಯೊಂದಿಗಿನ ಸ್ಥಳೀಯ ಗಡಿಯಾರ

Exercising daily at same time: ಪ್ರತಿನಿತ್ಯ ಒಂದೇ ಸಮಯಕ್ಕೆ ವ್ಯಾಯಾಮ ಮಾಡುವುದರಿಂದ ಅಂಗಾಂಗಗಳ ಗಡಿಯಾರ ಮಿದುಳಿನ ಗಡಿಯಾರದೊಂದಿಗೆ ಸಿಂಕ್ರನೈಜ್​ ಆಗುತ್ತದೆ. ಇದರಿಂದ ಆರೋಗ್ಯ ಪ್ರಯೋಜನ ಹೆಚ್ಚು ಎನ್ನುತ್ತದೆ ಅಧ್ಯಯನ ವರದಿ.

Do Exercising daily at same time
Do Exercising daily at same time

By ETV Bharat Karnataka Team

Published : Nov 16, 2023, 11:01 AM IST

ಲಂಡನ್​: ಅನೇಕರು ಪ್ರತಿನಿತ್ಯ ತಮಗೆ ಅನುಕೂಲವಾಗುವ ಸಮಯಕ್ಕೆ ವ್ಯಾಯಾಮ ಮಾಡುವುದು ಸಾಮಾನ್ಯ. ಆದರೆ ಪ್ರತಿನಿತ್ಯವೂ ನಿಯಮಿತ ಸಮಯಕ್ಕೆ ವ್ಯಾಯಾಮ ಮಾಡುವುದರಿಂದ ದೇಹದ ಕೀಲು, ಬೆನ್ನು ಮೂಳೆಯೊಂದಿಗಿನ ಸ್ಥಳೀಯ ಗಡಿಯಾರವನ್ನು ಮಿದುಳಿನ ಗಡಿಯಾರದೊಂದಿಗೆ ಸಿಂಕ್ರನೈಜ್​ ಮಾಡಬಹುದು. ಹೀಗೆ ಮಾಡುವುದರಿಂದ ಅಸ್ಥಿಪಂಜರದ ಆರೋಗ್ಯದ ಸಾಮರ್ಥ್ಯವನ್ನು ಕಾಪಾಡಬಹುದು. ಗಾಯಗಳನ್ನು ತಪ್ಪಿಸುವ ಮೂಲಕ ಅಥ್ಲೆಟಿಕ್​ ಪ್ರದರ್ಶನವನ್ನು ಸುಧಾರಿಸಿಕೊಳ್ಳಬಹುದು ಎಂದು ಹೊಸ ಸಂಶೋಧನೆ ತಿಳಿಸಿದೆ.

ನೇಚರ್​ ಕಮ್ಯೂನಿಕೇಷನ್​ನಲ್ಲಿ ಈ ಕುರಿತು ವರದಿ ಪ್ರಕಟಿಸಲಾಗಿದೆ. ಇಲಿಗಳ ಮೇಲೆ ಅಧ್ಯಯನ ನಡೆಸಲಾಗಿದೆ. ಮಾನವ ಮತ್ತು ಇಲಿಗಳ ಕಾರ್ಟಿಲೆಜ್​ ಮತ್ತು ಇಂಟರ್ವರ್ಟೆಬಲ್​ ಡಿಸ್ಕ್​ಗಳು ಒಂದೇ ರೀತಿಯ ಶಾರೀರಿಕ ಗುಣಲಕ್ಷಣಗಳನ್ನು ಹೊಂದಿರುವ ಹಿನ್ನೆಲೆಯಲ್ಲಿ ಇದನ್ನು ಹೋಲಿಕೆ ಮಾಡಬಹುದು.

ಮಿದುಳಿನಲ್ಲಿರುವ ದೇಹದ ಕೇಂದ್ರದ ಗಡಿಯಾರ ಮತ್ತು ಇತರೆ ಅಂಗಗಳು ತಮ್ಮದೇ ಆದ ಗಡಿಯಾರ ಹೊಂದಿದೆ. ಇದರ ನಡುವಿನ ತಪ್ಪು ನಿರ್ವಹಣೆಯು ಮಧುಮೇಹ ಮತ್ತು ಹೃದಯರಕ್ತನಾಳದಂತಹ ಸಮಸ್ಯೆಗೆ ಕಾರಣವಾಗುತ್ತದೆ. ಆದಾಗ್ಯೂ ಇಲ್ಲಿಯವರೆಗೆ ಜಂಟಿ ಕಾರ್ಟಿಲೆಜ್‌ನಲ್ಲಿನ ಗಡಿಯಾರಗಳ ನಡುವಿನ ಸಂಬಂಧದ ಬಗ್ಗೆ ಬಹಳ ಕಡಿಮೆ ಅರ್ಥೈಸಿಕೊಳ್ಳಲಾಗಿದೆ. ಇದು ಮಿದುಳು ಮತ್ತು ನರಕ್ಕೆ ರಕ್ತ ಪೂರೈಕೆ ಹೊಂದಿಲ್ಲ.

ಹೊಸ ಯಾಂತ್ರೀಕತೆಯ ಮೂಲಕ ನಮ್ಮ ದೇಹದ ಗಡಿಯಾರದ ಹೊರಗಿನ ವಾತಾವರಣದೊಂದಿಗೆ ಹೇಗೆ ಹೊಂದಿಕೊಳ್ಳುತ್ತದೆ ಎಂಬುದನ್ನು ಗುರುತಿಸಿದ್ದೇವೆ. ಗಡಿಯಾರವು ತಮ್ಮದೇ ಆದ ಲಯಬದ್ದ ಬದಲಾವಣೆಯನ್ನು ಪರಿಸರದಲ್ಲಿ ಹೊಂದಲು ಅಭಿವೃದ್ಧಿಯಾಗಿದೆ ಎಂದು ಪ್ರೊಫೆಸರ್​ ಕ್ವಿಂಗ್​ ಜುನ್​ ಮೆಂಗ್​ ತಿಳಿಸಿದರು.

ಬೆಳಗಿನ ಹೊತ್ತು ದೈಹಿಕ ಚಟುವಟಿಕೆಗಳು ದೈನಂದಿನ ನಿದ್ರೆ ಮತ್ತು ಎಚ್ಚರಗೊಳ್ಳುವ ಸೈಕಲ್​ನೊಂದಿಗೆ ಸಂಬಂಧ ಹೊಂದಿದೆ ಎಂದು ನಮ್ಮ ಫಲಿತಾಂಶದಲ್ಲಿ ತೋರಿಸಿದ್ದೇವೆ. ಈ ಜೋಡಣೆಯು ಮಿದುಳಿನೊಂದಿಗೆ ಸಂಯೋಜಿಸಿದಾಗ ಇತರ ಅಂಗಗಳಿಗೆ ಹೆಚ್ಚಿನ ಆರೋಗ್ಯಕ್ಕೆ ಪ್ರಯೋಜನ ನೀಡುತ್ತದೆ. ಅದೂ ಅಲ್ಲದೇ ವ್ಯಾಯಾಮದ ಸಮಯವನ್ನು ದಿನನಿತ್ಯ ಬದಲಾವಣೆ ಮಾಡುವುದರಿಂದ ಡಿಸಿಂಕ್ರೊನೈಸೇಶನ್​ಗೆ ಒಳಗಾಗಬಹುದು ಎಂದು ತಂಡ ಹೇಳಿದೆ.

ಒಂದು ವೇಳೆ ಸಮಯದ ಬದಲಾವಣೆ ಮಾಡಲು ಮುಂದಾದ ಕೆಲವು ಕಾಲದ ಬಳಿಕ ಅದು ದೇಹದ ಗಡಿಯಾರದೊಂದಿಗೆ ಪರಸ್ಪರ ಮರುಜೋಡಣೆ ಆಗುತ್ತದೆ ಎಂದು ತಿಳಿಸಿದ್ದಾರೆ. ನಮ್ಮ ಫಲಿತಾಂಶವು ಪ್ರಾಣಿಗಳ ಅಸ್ಥಿಪಂಜರದ ಅಂಗಾಂಶಗಳಲ್ಲಿನ ಗಡಿಯಾರಗಳು ದೈನಂದಿನ ವ್ಯಾಯಾಮದ ಮಾದರಿಗಳಿಗೆ ಸ್ಪಂದಿಸುತ್ತವೆ ಎಂದು ತೋರಿಸಿದೆ ಎಂದಿದ್ದಾರೆ ಲೇಖಕರು. (ಐಎಎನ್​ಎಸ್​)

ಇದನ್ನೂ ಓದಿ: ಉಪ್ಪಿನ ಕಡಿಮೆ ಸೇವನೆಯಿಂದ ತಗ್ಗುತ್ತಾ ಬಿಪಿ? ವಾರದಲ್ಲಿ ಸಿಗುತ್ತೆ ಅಚ್ಚರಿಯ ಫಲಿತಾಂಶ!

ABOUT THE AUTHOR

...view details