ಕರ್ನಾಟಕ

karnataka

ETV Bharat / sukhibhava

ದಾನಗಳಲ್ಲಿ ಶ್ರೇಷ್ಠ ನೇತ್ರದಾನ .. ಕಣ್ಣು ಕೊಡುವುದರ ಬಗ್ಗೆ ಇಲ್ಲೊಂದಿಷ್ಟು ಮಾಹಿತಿ - ಕಣ್ಣು ದಾನ

ಎಲ್ಲಾ ಪ್ರಮುಖ ಆಸ್ಪತ್ರೆಗಳು ಮತ್ತು ಕಣ್ಣಿನ ಬ್ಯಾಂಕ್​ಗಳಲ್ಲಿ ಲಭ್ಯವಿರುವ ಫಾರ್ಮ್ ಅನ್ನು ಭರ್ತಿ ಮಾಡುವ ಮೂಲಕ ನಿಮ್ಮ ಕಣ್ಣುಗಳನ್ನು ದಾನ ಮಾಡಬಹುದು. ಇದಕ್ಕಾಗಿ ನೀವು ಆನ್‌ಲೈನ್‌ನಲ್ಲಿಯೂ ನೋಂದಾಯಿಸಿಕೊಳ್ಳಬಹುದು. https://www.ebai.org/donator-registration/

ದಾನಗಳಲ್ಲಿ ಶ್ರೇಷ್ಠ ದಾನ ನೇತ್ರದಾನ:
ದಾನಗಳಲ್ಲಿ ಶ್ರೇಷ್ಠ ದಾನ ನೇತ್ರದಾನ:

By

Published : Aug 29, 2020, 11:01 PM IST

ಪ್ರತಿ ವರ್ಷ ಆಗಸ್ಟ್ 25 ರಿಂದ ಸೆಪ್ಟೆಂಬರ್ 8 ರವರೆಗೆ ರಾಷ್ಟ್ರೀಯ ನೇತ್ರದಾನ ಪಾಕ್ಷಿಕ ಆಚರಿಸಲಾಗುತ್ತದೆ. ನೇತ್ರ ದಾನದ ಮಹತ್ವದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಮತ್ತು ಅವರ ನಿಧನದ ನಂತರ ತಮ್ಮ ಕಣ್ಣುಗಳನ್ನು ದಾನ ಮಾಡುವ ಪ್ರತಿಜ್ಞೆ ಮಾಡಲು ಮುಂದಾಗಲು ಪ್ರೇರೇಪಿಸುವುದು ಇದರ ಉದ್ದೇಶ.

ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಹೆಚ್‌ಒ) ಪ್ರಕಾರ, ಕಣ್ಣಿನ ಪೊರೆ ಮತ್ತು ಗ್ಲುಕೋಮಾದ ನಂತರ ಕಾರ್ನಿಯಲ್ ಕಾಯಿಲೆಗಳು ದೃಷ್ಟಿ ನಷ್ಟ ಮತ್ತು ಕುರುಡುತನಕ್ಕೆ ಒಂದು ಪ್ರಮುಖ ಕಾರಣವಾಗಿದೆ. ದಾನ ಮಾಡಿದ ಕಣ್ಣುಗಳು ದೃಷ್ಟಿ ವಂಚಿತರಿಗೆ ಸಹಾಯ ಮಾಡುತ್ತದೆ. ಭಾರತದಲ್ಲಿ ಸುಮಾರು 3 ಮಿಲಿಯನ್ ಜನರು, ಅವರಲ್ಲಿ ಹೆಚ್ಚಿನವರು 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಕಣ್ಣು ದಾನದಿಂದ ತಮ್ಮ ದೃಷ್ಟಿಯನ್ನು ಮರಳಿ ಪಡೆಯಬಹುದು.

ಕಣ್ಣುಗಳನ್ನು ಯಾರು ದಾನ ಮಾಡಬಹುದು?

ಎಲ್ಲಾ ವಯಸ್ಸಿನ ಜನರು, ಲಿಂಗ, ಜನಾಂಗ, ರಕ್ತ ಗುಂಪು ಅಥವಾ ಧರ್ಮ ಭೇದವಿಲ್ಲದೆ ಎಲ್ಲರೂ ದಾನ ಮಾಡಬಹುದು

ಸಣ್ಣ ಅಥವಾ ದೀರ್ಘ ದೃಷ್ಟಿಗೆ ಕನ್ನಡಕ ಅಥವಾ ಮಸೂರಗಳನ್ನು ಧರಿಸುವ ಜನರು ಅಥವಾ ಕಣ್ಣುಗಳನ್ನು ಪಡೆದವರು ಸಹ ದಾನ ಮಾಡಬಹುದು

ಮಧುಮೇಹ, ಅಧಿಕ ರಕ್ತದೊತ್ತಡ, ಆಸ್ತಮಾ ಮತ್ತು ಯಾವುದೇ ಸಾಂಕ್ರಾಮಿಕ ಕಾಯಿಲೆಗಳಿಲ್ಲದವರು

ಕಣ್ಣುಗಳನ್ನು ಯಾರು ದಾನ ಮಾಡಲು ಸಾಧ್ಯವಿಲ್ಲ?

ಏಡ್ಸ್, ಹೆಪಟೈಟಿಸ್ ಬಿ ಅಥವಾ ಸಿ, ರೇಬೀಸ್, ಕಾಲರಾ, ಟೆಟನಸ್, ತೀವ್ರ ರಕ್ತ ಕ್ಯಾನ್ಸರ್, ಸೆಪ್ಟಿಸೆಮಿಯಾ, ಮೆನಿಂಜೈಟಿಸ್ ಅಥವಾ ಎನ್ಸೆಫಾಲಿಟಿಸ್ ಸೋಂಕಿಗೆ ಒಳಗಾದ ಜನರು.

ಹೇಗೆ ಮಾಡಲಾಗುತ್ತದೆ?

ಎಲ್ಲಾ ಪ್ರಮುಖ ಆಸ್ಪತ್ರೆಗಳು ಮತ್ತು ಕಣ್ಣಿನ ಬ್ಯಾಂಕ್​ಗಳಲ್ಲಿ ಲಭ್ಯವಿರುವ ಫಾರ್ಮ್ ಅನ್ನು ಭರ್ತಿ ಮಾಡುವ ಮೂಲಕ ನಿಮ್ಮ ಕಣ್ಣುಗಳನ್ನು ದಾನ ಮಾಡಬಹುದು. ಇದಕ್ಕಾಗಿ ನೀವು ಆನ್‌ಲೈನ್‌ನಲ್ಲಿಯೂ ನೋಂದಾಯಿಸಿಕೊಳ್ಳಬಹುದು. https://www.ebai.org/donator-registration/

ನಿಮ್ಮ ಕುಟುಂಬದ ಒಪ್ಪಿಗೆಯೊಂದಿಗೆ ಇದನ್ನು ಮಾಡಿ, ಏಕೆಂದರೆ ಅವರು ಮರಣದ ಬಳಿಕ ಕಣ್ಣುಗಳನ್ನು ಪಡೆಯಲು ಅಧಿಕಾರಿಗಳಿಗೆ ತಿಳಿಸಬೇಕಾಗುತ್ತದೆ. ನೀವು ಪ್ರತಿಜ್ಞೆ ಮಾಡಿದರೆ, ವೈಯಕ್ತಿಕ ಕಣ್ಣಿನ ದಾನಿ ಕಾರ್ಡ್ ನಿಮಗೆ ಒದಗಿಸಲಾಗುವುದು.

ಸತ್ತವರು ಔಪಚಾರಿಕವಾಗಿ ಪ್ರತಿಜ್ಞೆ ಮಾಡದಿದ್ದರೂ ಸಹ, ಕುಟುಂಬದ ಸದಸ್ಯರು ಸ್ವಯಂಸೇವಕರಾಗಿ ಮತ್ತು ಮರಣದ ನಂತರ ಕಣ್ಣುಗಳನ್ನು ದಾನ ಮಾಡಬಹುದು.

ವ್ಯಕ್ತಿಯ ನಿಧನದ ನಂತರ, ದಾನಿಗಳ ಕುಟುಂಬವು ಹತ್ತಿರದ ಮತ್ತು ಅಧಿಕೃತ ಕಣ್ಣಿನ ಬ್ಯಾಂಕ್​ಗೆ ತಕ್ಷಣವೇ ತಿಳಿಸಬೇಕಾಗುತ್ತದೆ. ನೀವು ಟೋಲ್-ಫ್ರೀ ಸಂಖ್ಯೆ 1919 ಗೆ ಕರೆ ಮಾಡಬಹುದು. ಇದು ಭಾರತದ ಎಲ್ಲಾ ರಾಜ್ಯಗಳಲ್ಲಿ 24x7 ಲಭ್ಯವಿದೆ.

ದಾನಿ ಸಾವನ್ನಪ್ಪಿದ 6-8 ಗಂಟೆಗಳ ಒಳಗೆ ಕಣ್ಣುಗಳನ್ನು ನೀಡಬೇಕು. ಈ ಪ್ರಕ್ರಿಯೆಯನ್ನು ಮನೆಯಲ್ಲಿ ಅಥವಾ ಆಸ್ಪತ್ರೆಯಲ್ಲಿ ನಡೆಸಬಹುದು. ಈ ಪ್ರಕ್ರಿಯೆಯನ್ನು ತರಬೇತಿ ಪಡೆದ ವೈದ್ಯರು ನಡೆಸುತ್ತಾರೆ ಮತ್ತು ಕಣ್ಣು ತೆಗೆಯುವ ಪ್ರಕ್ರಿಯೆಯು ಕೇವಲ 10-15 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ.

ABOUT THE AUTHOR

...view details