ಕರ್ನಾಟಕ

karnataka

ETV Bharat / sukhibhava

ಮಕ್ಕಳ ಮಿದುಳಿನ ಮೇಲೆ ಟೆಕ್​ ಸಾಧನಗಳ ಪರಿಣಾಮವೇನು?: ಅಧ್ಯಯನದಲ್ಲಿ ಕುತೂಹಲದ ಮಾಹಿತಿ ಬಹಿರಂಗ - ಮಿದುಳಿನ ಕಾರ್ಯಚಟುವಟಿಕೆ ಮೇಲೆ ಮಾಪನ

Tech devices impact kids brain functioning: ಡಿಜಿಟಲ್​ ಸಾಧನಗಳ ಅತಿ ಹೆಚ್ಚಿನ ಬಳಕೆಗೆ ನಿರ್ಬಂಧ ಹೇರುವುದು ಅವಶ್ಯಕ. ಆದರೆ, ಯಾವ ವಿಷಯ ಅವರ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ ಎಂಬ ಮೇಲ್ವಿಚಾರಣೆಯೂ ಬೇಕು ಎನ್ನುತ್ತಾರೆ ತಜ್ಞರು.

http://10.10.50.85:6060/reg-lowres/21-November-2023/mobile-child_2111newsroom_1700540475_838.jpg
http://10.10.50.85:6060/reg-lowres/21-November-2023/mobile-child_2111newsroom_1700540475_838.jpg

By ETV Bharat Karnataka Team

Published : Nov 21, 2023, 11:01 AM IST

ಹಾಂಕಾಂಗ್‌​​:ಟಿವಿ ವೀಕ್ಷಣೆ ಅಥವಾ ಕಂಪ್ಯೂಟರ್​ ಗೇಮ್​ಗಳಲ್ಲಿ ಕಳೆಯುವ ಸಮಯ ಕೂಡಾ ಮಕ್ಕಳ ಮಿದುಳಿನ ಕಾರ್ಯ ಚಟುವಟಿಕೆಯ ಮೇಲೆ ಮಾಪನ ಮಾಡಬಹುದಾದ ಮತ್ತು ದೀರ್ಘ ಅವಧಿಯ ಪರಿಣಾಮ ಬೀರುತ್ತದೆ ಎಂದು ಹೊಸ ಅಧ್ಯಯನ ತಿಳಿಸಿದೆ. 23 ವರ್ಷಗಳ ನ್ಯೂರೋಇಮೇಜಿಂಗ್​ ಸಂಶೋಧನೆ ರಿವ್ಯೂ ಅನುಸಾರ, ಕೆಲವು ನಕಾರಾತ್ಮಕ ಪರಿಣಾಮ ತೋರಿಸುವಾಗ ಕೆಲವು ಸಕಾರಾತ್ಮಕ ಪರಿಣಾಮ ಪ್ರದರ್ಶಿಸಲಾಗಿದೆ.

ಆದಾಗ್ಯೂ ಸಂಶೋಧನೆ, ಸ್ಕ್ರೀನ್​ ಮುಂದೆ ಸಮಯ ಕಳೆಯುವುದಕ್ಕೆ ಮಿತಿ ಹೇರುವುದನ್ನು ಸಲಹೆ ನೀಡುವುದಿಲ್ಲ. ಇದರ ಬದಲಾಗಿ ಮಕ್ಕಳ ಮಿದುಳಿನ ಕಾರ್ಯಾಚರಣೆ ಮೇಲೆ ಧನಾತ್ಮಕ ಪರಿಣಾಮ ಬೀರುವ ಕಾರ್ಯಕ್ರಮಗಳನ್ನು ಒತ್ತೇಜಿಸಲು ಡಿಜಿಟಲ್​ ಜಗತ್ತನ್ನು ಪೋಷಕರಿಗೆ ತಿಳಿಸಿ ಹೇಳಿಕೊಡುವ ಕಾರ್ಯಕ್ಕೆ ನೀತಿ ನಿರೂಪಕರು ಮುಂದಾಗಬೇಕೆಂದು ಒತ್ತಾಯಿಸಿದ್ದಾರೆ.

ಸ್ಕ್ರೀನ್​ ಟೈಂ ಮಿದುಳಿನ ಪೂರ್ವ ಮುಂಭಾಗದ ಕಾರ್ಟೆಕ್ಸ್​​ ಬದಲಾವಣೆಗೆ ಕಾರಣವಾಗುತ್ತದೆ. ಇದು ಸ್ಮರಣೆ ಮತ್ತು ಯೋಜನೆ ಸಾಮರ್ಥ್ಯ ಅಥವಾ ಸ್ಥಿತಿಗೆ ಹೊಂದಿಕೊಳ್ಳುವಂತೆ ಕಾರ್ಯ ನಿರ್ವಹಣೆ ಮಾಡಲು ಆಧಾರವಾಗಿದೆ.

ಇದು ಸ್ಪರ್ಶ, ಒತ್ತಡ, ಉಷ್ಣತೆ, ಶೀತ ಮತ್ತು ನೋವಿನಂತಹ ಪ್ರಕ್ರಿಯೆ ಸಹಾಯ ಮಾಡುವ ಕಪಾಲಭಿತ್ತಿ ಹಾಳೆ ಮೇಲೆ ಪರಿಣಾಮ ಹೊಂದಿದೆ. ತಾತ್ಕಾಲಿಕ ಹಾಳೆಯು ಸ್ಮರಣೆ, ಕೇಳುವಿಕೆ ಮತ್ತು ಭಾಷೆಗೆ ಪ್ರಮುಖವಾಗಿದೆ. ಆಕ್ಸಿಪಿಟಲ್ ಲೋಬ್ ದೃಶ್ಯ ಮಾಹಿತಿಯನ್ನು ಅರ್ಥೈಸಲು ನಮಗೆ ನೆರವಾಗುತ್ತದೆ.

ಮಕ್ಕಳ ಅರಿವಿನ ಅಭಿವೃದ್ಧಿಯು ಅವರ ಡಿಜಿಟಲ್​ ಅನುಭವದ ಮೇಲೆ ಪ್ರಭಾವ ಬೀರುತ್ತದೆ ಎಂಬುದನ್ನು ಶಿಕ್ಷಣ ತಜ್ಞರು ಮತ್ತು ಆರೈಕೆದಾರರು ಗುರುತಿಸಬೇಕು ಎಂದು ಹಾಂಕಾಂಗ್‌ನ ದಿ ಎಜುಕೇಷನ್​ ಯುನಿವರ್ಸಿಟಿಯ ಶಿಕ್ಷಣದ ಸಿಬ್ಬಂದಿ ಮುಖ್ಯಸ್ಥ ಹುಯಿ ಲಿ ತಿಳಿಸಿದ್ದಾರೆ.

ಮಕ್ಕಳ ಸ್ಕ್ರೀನ್​ ಟೈಂ ಮೇಲೆ ಮಿತಿ ಹೇರುವುದು ಪರಿಣಾಮಕಾರಿ. ಆದರೆ, ಇದನ್ನು ಎದುರಿಸಲು ಮತ್ತಷ್ಟು ಹೊಸ, ಸ್ನೇಹಿ ಮತ್ತು ಪ್ರಾಯೋಗಿಕ ತಂತ್ರವನ್ನು ಅಭಿವೃದ್ಧಿಪಡಿಸಬಹುದು. ಮಕ್ಕಳ ಡಿಜಿಟಲ್​ ಬಳಕೆ ಸೂಕ್ತ ಮಾರ್ಗದರ್ಶನ ಒಳಗೊಳ್ಳುವಿಕೆ ಮತ್ತು ಬೆಂಬಲವನ್ನು ನೀತಿ ನಿರೂಪಕರು ಮಾಡಬೇಕಿದೆ.

ಈ ಅಧ್ಯಯನ ವರದಿಯನ್ನು ಅರ್ಲಿ ಎಜುಕೇಷನ್​ ಮತ್ತು ಡೆವೆಲಪ್ಮೆಂಟ್​​ನಲ್ಲಿ ಪ್ರಕಟಿಸಲಾಗಿದೆ. ಅಧ್ಯಯನದಲ್ಲಿ 12 ವರ್ಷದ ಸುಮಾರು 30 ಸಾವಿರ ಮಕ್ಕಳು ಭಾಗಿಯಾಗಿದ್ದಾರೆ. ಮಕ್ಕಳ ಮೆದುಳಿನ ಮೇಲೆ ಡಿಜಿಟಲ್​ ತಂತ್ರಜ್ಞಾನ ಪ್ರಭಾವ ಅಳೆಯಲು ನ್ಯೂರೋಇಮೇಜಿಂಗ್ ತಂತ್ರಜ್ಞಾನ ಬಳಕೆ ಮಾಡಿದ್ದು, 33 ಅಧ್ಯಯನಗಳನ್ನು ವಿಶ್ಲೇಷಣೆ ಮಾಡಲಾಗಿದೆ. (ಐಎಎನ್​ಎಸ್​)

ಇದನ್ನೂ ಓದಿ: ಕೃತಕ ಬೆಳಕಿಗೆ ಹೆಚ್ಚು ಒಗ್ಗಿಕೊಳ್ಳಬೇಡಿ... ಖಿನ್ನತೆಗೆ ಇದೇ ಪ್ರಮುಖ ಕಾರಣವಂತೆ!

ABOUT THE AUTHOR

...view details