ನವಜಾತ ಶಿಶುವಿಗೆ ಎದೆ ಹಾಲು ಅನೇಕ ರೀತಿಯಲ್ಲಿ ಪ್ರಯೋಜನಕಾರಿಯಾಗಿದೆ. ಮಗುವಿನ ಒಟ್ಟಾರೆ ಬೆಳವಣಿಗೆಗೆ ಮತ್ತು ರೋಗನಿರೋಧಕ ಶಕ್ತಿಯನ್ನು ಅಭಿವೃದ್ಧಿಪಡಿಸಲು ಎದೆ ಹಾಲು ಉತ್ತಮವಾಗಿದೆ. ಹಾಲಿನ ಗುಣಮಟ್ಟವು ತಾಯಿ ತೆಗೆದುಕೊಳ್ಳುವ ಆಹಾರದ ಮೇಲೆ ಅವಲಂಬಿತವಾಗಿರುತ್ತದೆ. ತಾಯಂದಿರು ಸೇವಿಸುವ ಆಹಾರವು ಎದೆ ಹಾಲಿನ ಗುಣಮಟ್ಟ ಮತ್ತು ಪ್ರಮಾಣವನ್ನು ಬದಲಾಯಿಸಬಹುದು. ಆದ್ದರಿಂದ ತಜ್ಞರು ಹಾಲುಣಿಸುವ ತಾಯಂದಿರಿಗೆ ಕೆಲವು ಆಹಾರ ಸಲಹೆಗಳನ್ನು ನೀಡಿದ್ದಾರೆ.
ದಿನಕ್ಕೆ 74 ಗ್ರಾಂ ಪ್ರೋಟೀನ್ ಅಗತ್ಯ : ರೆಕಮೆಂಡೆಡ್ ಡಯಟರಿ ಅಲೋಯನ್ಸ್ (RDA) ಪ್ರಕಾರ ಹಾಲುಣಿಸುವ ತಾಯಂದಿರಿಗೆ ದಿನಕ್ಕೆ 74 ಗ್ರಾಂ ಪ್ರೋಟೀನ್ ಅಗತ್ಯವಿರುತ್ತದೆ. ಪ್ರೋಟೀನ್ ಭರಿತ ಆಹಾರಗಳಲ್ಲಿ ಧಾನ್ಯಗಳು, ಕಾಳುಗಳು, ತಾಜಾ ಹಣ್ಣುಗಳು, ತರಕಾರಿಗಳು, ಮೊಟ್ಟೆಗಳು, ಸೋಯಾ ಉತ್ಪನ್ನಗಳು, ಚಿಕನ್ ಮತ್ತು ಡೈರಿ ಉತ್ಪನ್ನಗಳು ಸೇರಿವೆ ಅಂತಾರೆ ಪೌಷ್ಟಿಕತಜ್ಞೆ ದಿವ್ಯಾ ಗುಪ್ತಾ.
ದ್ರವರೂಪದ ಆಹಾರ :ಹಾಲಿನ ಉತ್ಪಾದನೆಯ ಪ್ರಮಾಣವು ದ್ರವರೂಪದ ಆಹಾರ ಸೇವನೆಯ ಪ್ರಮಾಣವನ್ನು ಅವಲಂಬಿಸಿರುತ್ತದೆ. ಹೀಗಾಯಿ, ಹಾಲುಣಿಸುವ ತಾಯಂದಿರು ದಿನಕ್ಕೆ 10-15 ಗ್ಲಾಸ್ನಷ್ಟು ದ್ರವರೂಪದ ಆಹಾರವನ್ನು ಸೇವಿಸಬೇಕು. ಒಂದೇ ಬಾರಿಗೆ ದೊಡ್ಡ ಪ್ರಮಾಣದಲ್ಲಿ ಕುಡಿಯುವ ಬದಲು ದಿನವಿಡೀ ಸ್ವಲ್ಪ ಸ್ವಲ್ಪ ನೀರು ಕುಡಿಯಲು ಹೈದರಾಬಾದ್‌ನ ಎಎಮ್‌ಡಿ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನ ಪ್ರಾಧ್ಯಾಪಕರಾದ ಡಾ.ರಾಜ್ಯಲಕ್ಷ್ಮಿ ಮಾಧವಂ ಅವರು ಶಿಫಾರಸು ಮಾಡುತ್ತಾರೆ. ತಾಯಂದಿರು ಎಳನೀರನ್ನು ಸಹ ಸೇವಿಸಬಹುದು, ಇದು ಎದೆ ಹಾಲು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ಪೋಷಕಾಂಶಗಳಿಂದ ತುಂಬಿರುತ್ತದೆ ಮತ್ತು ಚೆನ್ನಾಗಿ ಹೈಡ್ರೇಟ್ ಮಾಡುತ್ತದೆ.
ಇದನ್ನೂ ಓದಿ:ನಿಮ್ಮ ತುಟಿಗಳು ಸುಂದರ ಹಾಗೂ ಆರೋಗ್ಯಕರವಾಗಿರಲು ಹೀಗೆ ಮಾಡಿ ನೋಡಿ..
ನೀರು ಮತ್ತು ಎಳನೀರನ್ನು ಹೊರತುಪಡಿಸಿ, ಸಾಮಾನ್ಯ ಡೈರಿಗಳ ಹಾಲು ಕೂಡ ಅನೇಕ ಪ್ರಯೋಜನಗಳಿಂದ ತುಂಬಿರುತ್ತದೆ ಮತ್ತು ವಿಶೇಷವಾಗಿ ಅದು ಕ್ಯಾಲ್ಸಿಯಂನಲ್ಲಿ ಸಮೃದ್ಧವಾಗಿರುತ್ತದೆ. ಆದ್ದರಿಂದ, ಹಾಲುಣಿಸುವ ತಾಯಂದಿರು ಸಹ ಡೈರಿ ಹಾಲನ್ನು ಸೇವಿಸಬಹುದು. ಹಾಲಿನ ಹೊರತಾಗಿ, ಡೈರಿ ಉತ್ಪನ್ನಗಳು ಮತ್ತು ಕಡು ಹಸಿರು ತರಕಾರಿಗಳು ಸಹ ಕ್ಯಾಲ್ಸಿಯಂನ ಉತ್ತಮ ಮೂಲವಾಗಿದೆ.
ಶುಂಠಿ ಹಾಗೂ ಮಸಾಲೆ ಪದಾರ್ಥ : ಶುಂಠಿಯು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದು ಮಾತ್ರವಲ್ಲದೆ ಆಂಟಿಫಂಗಲ್ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಇದನ್ನು ದೈನಂದಿನ ಅಡುಗೆಗೆ ಸೇರಿಸಬಹುದು. ಇದಲ್ಲದೆ, ಕರಿಮೆಣಸು, ಜೀರಿಗೆ, ದಾಲ್ಚಿನ್ನಿ, ಕೇರಂ ಬೀಜಗಳು ಮುಂತಾದ ಇತರ ಮಸಾಲೆ ಪದಾರ್ಥಗಳು ದೈನಂದಿನ ಅಡುಗೆಗೆ ಸೇರಿಸಬಹುದಾದ ಕೆಲವು ಮಸಾಲೆಗಳಾಗಿವೆ. ಇವುಗಳನ್ನು ಬಳಸಿ ನೀವು ಕೆಂಪು ಮೆಣಸಿನ ಪುಡಿ ಅಥವಾ ಹಸಿ ಮೆಣಸಿನಕಾಯಿಯ ಬಳಕೆಯನ್ನು ತಪ್ಪಿಸಬಹುದಾಗಿದೆ.
ಕಬ್ಬಿಣ ಮತ್ತು ಕ್ಯಾಲ್ಸಿಯಂ :ಕಬ್ಬಿಣ ಮತ್ತು ಕ್ಯಾಲ್ಸಿಯಂ ಸಮೃದ್ಧವಾಗಿರುವ ಆಹಾರವನ್ನು ಹೆಚ್ಚು ಸೇವಿಸಿ. ಮಸೂರ ಅವರೆ, ಧಾನ್ಯಗಳು, ಹಸಿರು ಎಲೆಗಳ ತರಕಾರಿಗಳು, ಒಣದ್ರಾಕ್ಷಿ ಇತ್ಯಾದಿ ಪದಾರ್ಥಗಳು ಕಬ್ಬಿಣದ ಮೂಲಗಳಾಗಿವೆ. ಇನ್ನು ಕಬ್ಬಿಣದ ಅಂಶಗಳ ಜೊತೆ ವಿಟಮಿನ್ ಸಿ ಅಂಶವನ್ನೂ ಒಳಗೊಂಡ ಸಿಟ್ರಸ್ ಹಣ್ಣುಗಳ ಸೇವನೆ ಹಾಲುಣಿಸುವ ತಾಯಂದಿರಿಗೆ ಬಹು ಉಪಕಾರಿಯಾಗಿದೆ.
ಒಮೆಗಾ -3:ಮೆಂತ್ಯ ಬೀಜಗಳಲ್ಲಿ ಒಮೆಗಾ -3 ಕೊಬ್ಬಿನಾಮ್ಲ ಸಮೃದ್ಧವಾಗಿರುತ್ತದೆ. ಇದು ಮಗುವಿನ ಮೆದುಳಿನ ಬೆಳವಣಿಗೆಗೆ ಮುಖ್ಯವಾಗಿದೆ. ಮೆಂತ್ಯ ಬೀಜಗಳಲ್ಲಿ ನೀವು ದೈನಂದಿನ ಅಡುಗೆಯಲ್ಲಿ ಬಳಸಬಹುದು ಅಥವಾ ನೀರಿನಲ್ಲಿ ಮೆಂತೆ ನೆನೆ ಹಾಕಿ ಅಥವಾ ಕೆಲವು ಮೆಂತ್ಯ ಬೀಜಗಳನ್ನು ಹಾಗೆಯೇ ನೀರಿನೊಂದಿಗೆ ಸೇವಿಸಬಹುದಾಗಿದೆ.