ಹೈದರಾಬಾದ್:ಔಷಧ ಮತ್ತು ಚಿಕಿತ್ಸೆಯ ಜೊತೆಗೆ, ಕೋವಿಡ್-19ನಿಂದ ಚೇತರಿಕೆಯಾಗುವ ಸಮಯದಲ್ಲಿ ಮತ್ತು ಚೇತರಿಕೆಯ ನಂತರದ (14 ದಿನಗಳ ಅವಧಿಯ ನಂತರ) ಆಹಾರವು ಪ್ರಮುಖ ಪಾತ್ರ ವಹಿಸುತ್ತದೆ. ಆರೋಗ್ಯಕರ ಆಹಾರ ಸೇವಿಸುವುದ ಮತ್ತು ಕೆಲವು ನಿರ್ದಿಷ್ಟ ಆಹಾರಗಳನ್ನು ಸೇವಿಸುವುದು ಉತ್ತಮವಾಗಿ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ.
ಅಲ್ಲದೇ, ಉತ್ತಮ ಪೋಷಣೆ ಮತ್ತು ಸರಿಯಾದ ಪ್ರಮಾಣದಲ್ಲಿ ನೀರು ಕುಡಿಯುವುದು ಅತ್ಯವಶ್ಯಕ. ಈ ಕುರಿತು ಈ ಟಿವಿ ಭಾರತ ಸುಖಿಭವ ತಂಡವು ಮೆಡಿಸಿನ್ ಇತಿಹಾಸದ ಕುರಿತು ಪಿಎಚ್ಡಿ ಮಾಡಿರುವ ಡಾ.ಪಿ.ವಿ.ರಂಗನಾಯಕುಲು ಅವರೊಂದಿಗೆ ಮಾತುಕತೆ ನಡೆಸಿದೆ.
ಜ್ವರದಂತೆಯೇ, ಕೋವಿಡ್-19ನಲ್ಲಿಯೂ ವ್ಯಕ್ತಿ ಸೋಂಕಿಗೆ ಒಳಗಾದರೆ ಅದು ಅವನ/ಅವಳ ಹಸಿವಿನ ಮೇಲೆ ಪರಿಣಾಮ ಬೀರುತ್ತದೆ ಎಂದು ಡಾ.ರಂಗನಾಯಕುಲು ತಿಳಿಸಿದ್ದಾರೆ. ಸೋಂಕಿತರಿಗೆ ಏನೂ ತಿನ್ನಬೇಕೆಂದು ಅನಿಸುವುದಿಲ್ಲ. ಆದ್ದರಿಂದ ಹೆಚ್ಚಿನ ಜೀವಸತ್ವಗಳು ಮತ್ತು ಖನಿಜಗಳನ್ನು ದ್ರವ ರೂಪದಲ್ಲಿ ನೀಡಲಾಗುತ್ತದೆ. ಸಾಮಾನ್ಯವಾಗಿ ವಿಟಮಿನ್ ಸಿ, ಡಿ ಮತ್ತು ಸತು ಅಂಶಗಳು ವೈರಸ್ ವಿರುದ್ಧ ಹೋರಾಡಲು ಅತ್ಯಗತ್ಯ. ಚಿಕಿತ್ಸೆಯ ಸಮಯದಲ್ಲಿ ವೈದ್ಯರು ಇವುಗಳನ್ನೇ ಹೆಚ್ಚಾಗಿ ಶಿಫಾರಸು ಮಾಡುತ್ತಾರೆ. ಆದರೆ, ಕೆಲವು ನೈಸರ್ಗಿಕ ಆಹಾರ ಮೂಲಗಳು ಈ ಸೂಕ್ಷ್ಮ ಪೋಷಕಾಂಶಗಳನ್ನು ನೀಡುತ್ತದೆ.
ಕೋವಿಡ್-19 ಸೋಂಕಿಗೆ ಒಳಗಾದ ವ್ಯಕ್ತಿಗೆ ಆಹಾರ:
ಕೋವಿಡ್-19ನಿಂದ ಬಳಲುತ್ತಿರುವಾಗ ವ್ಯಕ್ತಿಯ ಹಸಿವು ಕಡಿಮೆಯಾಗುತ್ತದೆ. ಆದ್ದರಿಂದ ದ್ರವ ಆಹಾರದ ಬಗ್ಗೆ ಹೆಚ್ಚು ಗಮನಹರಿಸಿ. ಇದಲ್ಲದೇ, ಸೋರೆಕಾಯಿ, ಬಟಾಣಿ, ತರಕಾರಿ, ಬೇಳೆ, ರೊಟ್ಟಿ / ಚಪಾತಿಯಂತಹ ಹಗುರವಾದ ಮತ್ತು ಸುಲಭವಾಗಿ ಜೀರ್ಣಿಸಿಕೊಳ್ಳಲು ಸುಲಭವಾದ ಆಹಾರವನ್ನು ಅವರಿಗೆ ನೀಡಬಹುದು.
ನಿಮ್ಮ ಸ್ಥಿತಿಗೆ ಅನುಗುಣವಾಗಿ ಆಹಾರ ಯೋಜನೆ ನೀಡಲು ನಿಮ್ಮ ವೈದ್ಯರನ್ನು ಅಥವಾ ಆಹಾರ ತಜ್ಞರನ್ನು ಸಂಪರ್ಕಿಸಬಹುದು. ಇದಲ್ಲದೆ, ತಾಜಾ ಆಹಾರ ಸೇವಿಸಿ. ಉಳಿದ ಅಥವಾ ಹಳೆಯ ಆಹಾರವನ್ನು ಕಟ್ಟುನಿಟ್ಟಾಗಿ ತಪ್ಪಿಸಬೇಕು. ಕಚ್ಚಾ ತರಕಾರಿಗಳು ಅಥವಾ ಸಿಹಿತಿಂಡಿಗಳ ಸೇವನೆಯನ್ನು ತಪ್ಪಿಸಲು ತಜ್ಞರು ಸಲಹೆ ನೀಡುತ್ತಾರೆ. ಸೀಮಿತ ಪ್ರಮಾಣದಲ್ಲಿ ಸಿಹಿ ಸೇವನೆ ಉತ್ತಮ.
ಕೋವಿಡ್-19ನಿಂದ ಚೇತರಿಸಿಕೊಂಡ ಬಳಿಕ ಆಹಾರ: (14 ದಿನಗಳ ಅವಧಿಯ ನಂತರ)