ಕರ್ನಾಟಕ

karnataka

ETV Bharat / sukhibhava

ಆರೋಗ್ಯ ಸೇವೆಗಳಿಗೆ ಅಡ್ಡಿಪಡಿಸಿದ ಕೋವಿಡ್-19 ಮತ್ತು ಲಾಕ್‌ಡೌನ್! - ಆರೋಗ್ಯ ಸೇವೆಗಳಿಗೆ ಅಡ್ಡಿ

ಕಡಿಮೆ ಸಂಖ್ಯೆಯ ಜನರಿಗೆ ಚಿಕಿತ್ಸೆ ನೀಡಲಾಯಿತು ಮತ್ತು ಶಸ್ತ್ರಚಿಕಿತ್ಸೆಗಳಿಗೆ ಹಾಜರಾದರು. ಲಾಕ್‌ಡೌನ್ ಸಮಯದಲ್ಲಿ ಒಳರೋಗಿ ಮತ್ತು ಹೊರರೋಗಿ ಆರೋಗ್ಯ ಸೇವೆಗಳನ್ನು ಮೊಟಕುಗೊಳಿಸಲಾಯಿತು. ಹಿಂದಿನ ವರ್ಷಕ್ಕೆ ಹೋಲಿಸಿದರೆ, ದಂತ ಸೇವೆಗಳಿಗಾಗಿ ಆಸ್ಪತ್ರೆಗಳಿಗೆ ಭೇಟಿ ನೀಡುವ ಜನರ ಸಂಖ್ಯೆಯಲ್ಲಿ 2020ರಲ್ಲಿ ಶೇ.71ರಷ್ಟು ಕುಸಿತ ಕಂಡು ಬಂದಿದೆ..

family
family

By

Published : Apr 2, 2021, 3:42 PM IST

ಹೈದರಾಬಾದ್ :ಕೋವಿಡ್-19 ಸಾಂಕ್ರಾಮಿಕವು ಅನೇಕ ಸಮಸ್ಯೆಗಳನ್ನು ತಂದೊಡ್ಡಿದೆ. ಜನರ ಜೀವನ ಮಾತ್ರವಲ್ಲ ಆರೋಗ್ಯ ರಕ್ಷಣೆಯಂತಹ ಅನೇಕ ಅಗತ್ಯ ಸೇವೆಗಳ ಮೇಲೆಯೂ ಹೆಚ್ಚು ಪರಿಣಾಮ ಬೀರಿದೆ.

ಪ್ರಕರಣಗಳಲ್ಲಿ ಹಠಾತ್ ಉಲ್ಬಣ ಮತ್ತು ಕಳೆದ ವರ್ಷದ ಲಾಕ್​ಡೌನ್ ಕಾರಣ ಕೊರೊನಾ ವೈರಸ್ ಸೋಂಕಿತ ಜನರಿಗೆ ಚಿಕಿತ್ಸೆ ನೀಡಲು ಆದ್ಯತೆ ನೀಡಲಾಯಿತು ಮತ್ತು ಜನ ಕೂಡಾ ತಮ್ಮ ಅಗತ್ಯಗಳನ್ನು ಪೂರೈಸಲು ಕ್ಲಿನಿಕ್ ಅಥವಾ ಆಸ್ಪತ್ರೆಗಳಿಗೆ ಭೇಟಿ ನೀಡಲು ಭಯಭೀತರಾಗಿದ್ದರು. ಪರಿಣಾಮವಾಗಿ ಅನೇಕರಿಗೆ ಆರೋಗ್ಯ ಸೇವೆ ದೊರೆತಿಲ್ಲ.

ಆದರೆ, ಕೋವಿಡ್-19 ಸಾಂಕ್ರಾಮಿಕ ರೋಗಕ್ಕೆ ಮುಂಚೆಯೇ ವಿಶ್ವ ಆರೋಗ್ಯ ಸಂಸ್ಥೆ ತನ್ನ ಸುದ್ದಿ ಪ್ರಕಟಣೆಯಲ್ಲಿ, "ವಿಶ್ವ ಜನಸಂಖ್ಯೆಯ ಅರ್ಧದಷ್ಟು ಜನ ಅಗತ್ಯ ಆರೋಗ್ಯ ಸೇವೆಗಳನ್ನು ಪಡೆಯಲು ಸಾಧ್ಯವಿಲ್ಲ. ವಿಶ್ವಬ್ಯಾಂಕ್ ಮತ್ತು ವಿಶ್ವ ಆರೋಗ್ಯ ಸಂಸ್ಥೆಯ ಹೊಸ ವರದಿಯ ಪ್ರಕಾರ ಪ್ರತಿ ವರ್ಷ ಹಲವು ಮನೆಗಳು ಬಡತನಕ್ಕೆ ತಳ್ಳಲ್ಪಡುತ್ತಿವೆ. ಆದ್ದರಿಂದ, ಆರೋಗ್ಯ ಸೇವೆಗಳು ಅವರ ಕೈಗೆಟುಕುವಂತಿಲ್ಲ. ಇದು ಬಹಳ ಆತಂಕಕಾರಿ" ಎಂದು ಹೇಳಿತ್ತು.

ಕೊರೊನಾ ಸಂದರ್ಭದಲ್ಲಿ ಪ್ರಪಂಚದಾದ್ಯಂತ ಜನ ರೋಗನಿರೋಧಕ ಶಕ್ತಿ, ಸಾಂಕ್ರಾಮಿಕವಲ್ಲದ ರೋಗಗಳಿಗೆ ಚಿಕಿತ್ಸೆ, ಮಾನಸಿಕ ಆರೋಗ್ಯ ಸೇವೆಗಳು, ಕುಟುಂಬ ಯೋಜನೆ ಮತ್ತು ಗರ್ಭನಿರೋಧಕ ಇತ್ಯಾದಿಗಳಿಂದ ವಂಚಿತರಾಗಿದ್ದರು.

ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿಯ ಮೇಲೆ ಪರಿಣಾಮ :2020ರಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಮೂಲಕ ಬಂದ ಮತ್ತೊಂದು ಆತಂಕಕಾರಿ ಸುದ್ದಿ ಅಂದರೆ ಮಕ್ಕಳ ಸಾವಿನ ಅಂಕಿ- ಅಂಶಗಳು ಹಾಗೂ ಸಮಯಕ್ಕೆ ಸರಿಯಾದ ಚಿಕಿತ್ಸೆ ಪಡೆಯಲು ಅವರಿಗೆ ಸಾಧ್ಯವಾಗದೇ ಇರುವುದು. 2019ರಲ್ಲಿ ಅಂದಾಜು 5 ವರ್ಷಕ್ಕಿಂತ ಕಡಿಮೆ ವಯಸ್ಸಿನ 5.2 ಮಿಲಿಯನ್ ಮಕ್ಕಳು ಹೆಚ್ಚಾಗಿ ತಡೆಗಟ್ಟಬಹುದಾದ ಮತ್ತು ಚಿಕಿತ್ಸೆ ನೀಡಬಹುದಾದ ರೋಗಗಳಿಂದಲೇ ಸಾವನ್ನಪ್ಪಿದ್ದಾರೆ.

5 ವರ್ಷದೊಳಗಿನ ಮಕ್ಕಳಲ್ಲಿ ಸಾವಿಗೆ ಪ್ರಮುಖ ಕಾರಣಗಳೆಂದರೆ, ಅಕಾಲಿಕ ಜನನ ತೊಂದರೆಗಳು, ಜನನ ಉಸಿರುಕಟ್ಟುವಿಕೆ/ಆಘಾತ, ನ್ಯುಮೋನಿಯಾ, ಜನ್ಮಜಾತ ವೈಪರೀತ್ಯಗಳು, ಅತಿಸಾರ ಮತ್ತು ಮಲೇರಿಯಾ. ಇವೆಲ್ಲವನ್ನೂ ರೋಗನಿರೋಧಕ ಶಕ್ತಿ, ಸಾಕಷ್ಟು ಪೋಷಣೆ ಸೇರಿದಂತೆ ಸರಳ, ಕೈಗೆಟುಕುವ ಚಿಕಿತ್ಸೆಯ ಮೂಲಕ ಗುಣಪಡಿಸಬಹುದಾಗಿದೆ. ಆದರೆ, ಚಿಕಿತ್ಸೆ ಸಿಗದೇ ಮಕ್ಕಳು ಸಾವನ್ನುಪ್ಪುತ್ತಿದ್ದಾರೆ.

ದಡಾರ, ಡಿಪಿಟಿ, ರುಬೆಲ್ಲಾ ಮುಂತಾದ ನಿರ್ದಿಷ್ಟ ವಯಸ್ಸಿನ ಮಕ್ಕಳು ಪಡೆಯಬೇಕಾದ ಹಲವು ಪ್ರಮುಖ ಲಸಿಕೆಗಳಿವೆ. ಆದರೆ, ವಿಶ್ವದಾದ್ಯಂತ ಜೀವ ಉಳಿಸುವ ಲಸಿಕೆಗಳನ್ನು ಪಡೆಯುವ ಮಕ್ಕಳ ಸಂಖ್ಯೆಯು ಆತಂಕಕಾರಿ ಕುಸಿತ ಕಂಡಿದೆ. ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಉಂಟಾಗುವ ರೋಗನಿರೋಧಕ ಸೇವೆಗಳ ವಿತರಣೆಯಲ್ಲಿನ ಅಡೆತಡೆಗಳು ಇದಕ್ಕೆ ಕಾರಣ. ವ್ಯಾಕ್ಸಿನೇಷನ್‌ ವಿಳಂಬಗೊಳಿಸುವುದು ಅಥವಾ ತಪ್ಪಿಸುವುದು ಮಗುವಿನ ಆರೋಗ್ಯವನ್ನು ಹಾನಿಗೊಳಿಸುತ್ತದೆ.

2019ಕ್ಕೆ ಹೋಲಿಸಿದರೆ 2020ರ ಮೊದಲಾರ್ಧದಲ್ಲಿ ಬಿಸಿಜಿ ರೋಗನಿರೋಧಕ ಲಸಿಕೆ ಪಡೆದ ಮಕ್ಕಳ ಸಂಖ್ಯೆ ಸುಮಾರು 12.8 ಲಕ್ಷಕ್ಕೆ ಇಳಿಕೆಯಾಗಿದೆ. ಪೆಂಟಾವಲೆಂಟ್ ಲಸಿಕೆಯ ಜನನ ಪ್ರಮಾಣವನ್ನು ಪಡೆದ ಶಿಶುಗಳ ಸಂಖ್ಯೆಯೂ 14 ಲಕ್ಷದಷ್ಟು ಕಡಿಮೆಯಾಗಿದೆ. ಇದಲ್ಲದೆ, ದಡಾರ ಮತ್ತು ರುಬೆಲ್ಲಾ ವಿರುದ್ಧ ರೋಗನಿರೋಧಕ ಚುಚ್ಚುಮದ್ದು ಪಡೆದ ಮಕ್ಕಳ ಸಂಖ್ಯೆಯಲ್ಲಿ ಶೇ.44ರಷ್ಟು ಕುಸಿತ ಕಂಡು ಬಂದಿದೆ. ಜೊತೆಗೆ ಹೆಪಟೈಟಿಸ್ ಬಿ ಮತ್ತು ಪೋಲಿಯೊ ಲಸಿಕೆ ಪಡೆದ ಮಕ್ಕಳ ಸಂಖ್ಯೆಯೂ ಕಡಿಮೆಯಾಗಿದೆ.

ಗರ್ಭಿಣಿಯರು, ತಾಯಂದಿರು:ನಮ್ಮ ದೇಶದಲ್ಲಿ 2020ರಲ್ಲಿ ಲಾಕ್‌ಡೌನ್ ಆಗಿದ್ದರಿಂದ, ಹಿಂದಿನ ವರ್ಷದ ಅಂಕಿ-ಅಂಶಗಳಿಗೆ ಹೋಲಿಸಿದರೆ, ಆಂಟೆನಾಟಲ್ ಚೆಕ್ ಅಪ್‌ಗಳು ಪಡೆದ ಗರ್ಭಿಣಿಯರ ಸಂಖ್ಯೆ ಜನವರಿಯಿಂದ ಜೂನ್‌ವರೆಗೆ 7.7 ರಷ್ಟು ಕುಸಿದಿದೆ. 2019ರ ಅಂಕಿ-ಅಂಶಗಳಿಗೆ ಹೋಲಿಸಿದರೆ ಚೆಕ್‌ಅಪ್‌ ಪಡೆದ ಮಹಿಳೆಯರ ಸಂಖ್ಯೆ 7.15 ಲಕ್ಷ ಕಡಿಮೆಯಿದೆ.

ಇತರ ಆರೋಗ್ಯ ಸೇವೆಗಳು :ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ಜನ ಮಾರಣಾಂತಿಕ ವೈರಸ್ ಸೋಂಕಿಗೆ ಒಳಗಾಗುತ್ತಾರೆ ಎಂಬ ಭಯದಲ್ಲಿದ್ದರು. ಅದಕ್ಕಾಗಿಯೇ ಅವರು ಚಿಕಿತ್ಸೆಗೆ ಕ್ಲಿನಿಕ್ ಮತ್ತು ಆಸ್ಪತ್ರೆಗಳಿಗೆ ಹೋಗುವ ಬದಲು ಮನೆಯಲ್ಲೇ ಇರಲು ಆದ್ಯತೆ ನೀಡಿದರು.

ಕಡಿಮೆ ಸಂಖ್ಯೆಯ ಜನರಿಗೆ ಚಿಕಿತ್ಸೆ ನೀಡಲಾಯಿತು ಮತ್ತು ಶಸ್ತ್ರಚಿಕಿತ್ಸೆಗಳಿಗೆ ಹಾಜರಾದರು. ಲಾಕ್‌ಡೌನ್ ಸಮಯದಲ್ಲಿ ಒಳರೋಗಿ ಮತ್ತು ಹೊರರೋಗಿ ಆರೋಗ್ಯ ಸೇವೆಗಳನ್ನು ಮೊಟಕುಗೊಳಿಸಲಾಯಿತು. ಹಿಂದಿನ ವರ್ಷಕ್ಕೆ ಹೋಲಿಸಿದರೆ, ದಂತ ಸೇವೆಗಳಿಗಾಗಿ ಆಸ್ಪತ್ರೆಗಳಿಗೆ ಭೇಟಿ ನೀಡುವ ಜನರ ಸಂಖ್ಯೆಯಲ್ಲಿ 2020ರಲ್ಲಿ ಶೇ.71ರಷ್ಟು ಕುಸಿತ ಕಂಡು ಬಂದಿದೆ.

ತುರ್ತು ಸೇವೆಗಳು :ಲಾಕ್ಡೌನ್ ಸಮಯದಲ್ಲಿ ತುರ್ತು ಸೇವೆಗಳನ್ನು ಸಹ ಕಡಿತಗೊಳಿಸಲಾಯಿತು. ವೈರಸ್ ಹರಡುವ ಭೀತಿಯಿಂದ ಆಸ್ಪತ್ರೆಗಳು ತುರ್ತು ಸೇವೆಗಳಿಗೆ ಹಾಜರಾಗಲು ನಿರಾಕರಿಸಿದವು. ಇದಲ್ಲದೆ, ಆಸ್ಪತ್ರೆಯ ಹಾಸಿಗೆಗಳು ಮತ್ತು ಇತರ ವೈದ್ಯಕೀಯ ಸಂಪನ್ಮೂಲಗಳನ್ನು ಸಹ ಸೀಮಿತಗೊಳಿಸಲಾಗಿದ್ದು, ಕೋವಿಡ್-19 ರೋಗಿಗಳಿಗೆ ಕಾಯ್ದಿರಿಸಲಾಗಿದೆ.

ABOUT THE AUTHOR

...view details