ಕರ್ನಾಟಕ

karnataka

ETV Bharat / sukhibhava

ಮಕ್ಕಳಲ್ಲಿ ಹೆಚ್ಚುತ್ತಿದೆ ಟೈಪ್​ 2 ಮಧುಮೇಹ: ತಜ್ಞರ ಆತಂಕ - ಮಕ್ಕಳು ಇಂದು ಟೈಪ್​ 2 ಮಧುಮೇಹಕ್ಕೆ

Children getting more prone to type 2 diabetes: ಮಕ್ಕಳಲ್ಲಿ ಹೆಚ್ಚುತ್ತಿರುವ ಮಧುಮೇಹ ಪ್ರಕರಣಗಳಿಗೆ ಪ್ರಮುಖ ಕಾರಣ ಜೀವನಶೈಲಿ ಎಂದು ತಜ್ಞರು ಹೇಳುತ್ತಿದ್ದಾರೆ.

Diabetes cases Rising in children
Diabetes cases Rising in children

By ETV Bharat Karnataka Team

Published : Nov 20, 2023, 11:45 AM IST

ಲಕ್ನೋ: ಮಧುಮೇಹ ಖಾಯಿಲೆ ಕೇವಲ ವಯಸ್ಸಾದವರಿಗೆ ಎನ್ನುತ್ತಿದ್ದ ಕಾಲ ಬದಲಾಗಿದೆ. ಹೆಚ್ಚೆಚ್ಚು ಮಕ್ಕಳು ಇಂದು ಟೈಪ್​ 2 ಮಧುಮೇಹಕ್ಕೆ ತುತ್ತಾಗುತ್ತಿದ್ದಾರೆ ಎಂದು ಕಿಂಗ್​ ಜಾರ್ಜ್​ ಮೆಡಿಕಲ್​ ಯುನಿವರ್ಸಿಟಿಯ (ಕೆಜಿಎಂಯು) ವೈದ್ಯಕೀಯ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

ಕೆಜಿಎಂಯುನ ಮೆಡಿಸಿನ್​ ವಿಭಾಗದ ಹಿರಿಯ ಸಿಬ್ಬಂದಿ ಕೌಸರ್​ ಉಸ್ಮಾನ್ ಮಾತನಾಡಿ​​, "ತಾವು ಇತ್ತೀಚೆಗೆ ಪರೀಕ್ಷೆ ಮಾಡಿದ ಮಧುಮೇಹ ಪ್ರಕರಣದಲ್ಲಿ 7ನೇ ತರಗತಿ ಮಗು ಮಧುಮೇಹಕ್ಕೆ ತುತ್ತಾಗಿದ್ದು, ಅದಕ್ಕೆ ಚಿಕಿತ್ಸೆ ನೀಡುತ್ತಿದ್ದೇವೆ. ಅವರ ಕುಟುಂಬ ಮಧುಮೇಹ ಇತಿಹಾಸ ಹೊಂದಿದೆ. ಮಧುಮೇಹದ ಯಾವುದೇ ಕೌಟುಂಬಿಕ ಇತಿಹಾಸ ಹೊಂದಿಲ್ಲದ ಮಕ್ಕಳಲ್ಲೂ ಮಧುಮೇಹ ಪ್ರಕರಣಗಳು ಇಂದು ಕಾಣುತ್ತಿದೆ. ಒಪಿಡಿಯಲ್ಲಿ ಅಂತಹ ರೋಗಿಗಳು ಸಂಖ್ಯೆ ಏರಿಕೆಯಾಗುತ್ತಿದೆ" ಎಂದರು. ಮಕ್ಕಳಲ್ಲಿ ಮಧುಮೇಹ ಹೆಚ್ಚಳಕ್ಕೆ ವಂಶವಾಹಿನಿಗಿಂತಲೂ ಜೀವನಶೈಲಿ ಕಾರಣವಾಗುತ್ತಿದೆ ಎಂದು ಅವರು ತಿಳಿಸಿದರು.

ಇಂದು ಮಕ್ಕಳು ಮನೆಗಿಂತ ಹೊರಗಿನ ಆಹಾರವನ್ನು ಹೆಚ್ಚು ಸೇವಿಸುತ್ತಿದ್ದಾರೆ. ಅದನ್ನೇ ಶಾಲೆಗೂ ಕೂಡ ಟಿಫನ್​ ಆಗಿಯೂ ತರುತ್ತಿದ್ದಾರೆ. ಬ್ಯುಸಿ ಪೋಷಕರು ಮಕ್ಕಳಿಗೆ ಟಿಫನ್​ ನೀಡುವ ಬದಲು ಹಣ ನೀಡುತ್ತಿದ್ದಾರೆ. ಇದರ ಹೊರತಾಗಿ ಉತ್ತಮ ಅಂಕಗಳಿಸಬೇಕು ಎಂಬ ಒತ್ತಡ ಹಾಕುತ್ತಾರೆ. ನಮ್ಮ ಕಾಲದಲ್ಲಿ 10ನೇ ತರಗತಿಯ ನಂತರ ಡಾಕ್ಟರ್​ ಅಥವಾ ಇಂಜಿನಿಯರಿಂಗ್ ಆಗಬೇಕು ಎಂಬ ಒತ್ತಡ ಬರುತ್ತಿತ್ತು. ಆದರೆ ಈಗಿನ ಮಕ್ಕಳು ನಾಲ್ಕು ಅಥವಾ ಐದನೇ ತರಗತಿಯಲ್ಲಿಯರುವಾಗಲೇ ಡಾಕ್ಟರ್ ಅಥವಾ ಇಂಜಿನಿಯರ್​ ಆಗಬೇಕು ಎಂಬ ಗುರಿ ನಿರ್ಧರಿಸಲಾಗುತ್ತಿದೆ ಎನ್ನುತ್ತಾರೆ ಕೆಜಿಎಂಯುನ ಪಿಜಿಯಲಾಜಿ ಮುಖ್ಯಸ್ಥ ಎನ್​ಎಸ್​ ವರ್ಮಾ. ಇದೇ ವೇಳೆ, ಮಕ್ಕಳಿಗೆ ಬಾಲ್ಯದಲ್ಲೇ ಈ ರೀತಿ ಮಧುಮೇಹ ಕಾಡುವುದು ಸಮಾಜಕ್ಕೂ ಕೂಡ ಹಿನ್ನಡೆ ಎಂದರು.

ಮಧುಮೇಹದ ಆರಂಭದಲ್ಲಿ ಕುಟುಂಬದ ಇತಿಹಾಸ ಹೊಂದಿದ್ದರೂ ಮಧುಮೇಹ ಪ್ರಕರಣಗಳು ಪ್ರಾರಂಭವಾಗುತ್ತವೆ. ಎರಡನೇಯದಾಗಿ, 17 ಮತ್ತು 40 ವರ್ಷಗಳ ನಡುವೆ ಮಧುಮೇಹ ಉತ್ಪಾದಕ ವಯಸ್ಸಿನ ರೋಗದಿಂದಾಗಿ ರಾಜಿ ಮಾಡಿಕೊಳ್ಳುತ್ತದೆ ಎಂದಿದ್ದಾರೆ. ಐಸಿಎಂಆರ್​ ದತ್ತಾಂಶದ ಪ್ರಕಾರ, ಉತ್ತರ ಪ್ರದೇಶದಲ್ಲಿ ಶೇ 18ರಷ್ಟು ಪ್ರಕರಣದಲ್ಲಿ ಎಲ್ಲಾ ವಯೋಮಾನದವರಲ್ಲಿ ಮಧುಮೇಹ ಪ್ರಕರಣ ಪತ್ತೆಯಾಗಿದ್ದು, ಅವರೆಲ್ಲಾ ಪೂರ್ವ ಮಧುಮೇಹದ ಅಪಾಯ ಹೊಂದಿದ್ದಾರೆ. ಅವರು ತಮಗೆ ಆರೋಗ್ಯ ಸವಾಲು ಮೂಡಿಸುತ್ತಿರುವ ಮಧುಮೇಹವನ್ನು ನಿಯಂತ್ರಿಸಬಹುದು. ಇದಕ್ಕೆ ಬೇಕಾಗಿರುವ ಪ್ರಮುಖ ಅಂಶವೆಂದರೆ ಜೀವನಶೈಲಿ ಮತ್ತು ಆಹಾರ ಅಭ್ಯಾಸಗಳ ಬದಲಾವಣೆ ಎಂದು ಪ್ರೋ ವರ್ಮಾ ಸಲಹೆ ನೀಡಿದರು. ಪ್ರತಿನಿತ್ಯ ಕನಿಷ್ಟ 40 ನಿಮಿಷ ವ್ಯಾಯಾಮ ಮಾಡುವುದು, ಡಯಟ್​ ಚಾರ್ಟ್​ ನಿರ್ವಹಣೆ ಮತ್ತು ನಿಮ್ಮ ದೇಹಕ್ಕೆ ಒಗ್ಗುವ ಆಹಾರ ಸೇವನೆ ಪ್ರಮುಖವಾಗಿದೆ ಎಂದು ಹೇಳಿದರು. (ಐಎಎನ್​ಎಸ್​)

ಇದನ್ನೂ ಓದಿ: ಕಡಿಮೆ ನಿದ್ರೆ, ನೈಟ್​ ಶಿಫ್ಟ್​ ಕೆಲಸ ಮಾಡುವವರಲ್ಲಿ ಬಿಪಿ ಅಧಿಕ: ಅಧ್ಯಯನದಲ್ಲಿ ಬಯಲು

ABOUT THE AUTHOR

...view details