ಕರ್ನಾಟಕ

karnataka

ETV Bharat / sukhibhava

ಹಲ್ಲು ನೋವೇ? ಕೋವಿಡ್ ಸಮಯದಲ್ಲಿ ದಂತವೈದ್ಯರ ಭೇಟಿಗೆ ಮುಂಜಾಗ್ರತಾ ಕ್ರಮಗಳೇನು?

ಕೋವಿಡ್ ಪರಿಸ್ಥಿತಿಯಲ್ಲಿ ದಂತವೈದ್ಯರನ್ನು ಭೇಟಿ ಮಾಡಲು ಬಹಳಷ್ಟು ಪ್ರಶ್ನೆಗಳು ಮತ್ತು ಸಾಕಷ್ಟು ಸಂದಿಗ್ಧತೆಗಳು ಎದುರಾಗುವ ಸಾಧ್ಯತೆಯಿದೆ. ಆದರೆ ದಂತಚಿಕಿತ್ಸೆಯ ಸಮಯದಲ್ಲಿ ಸಾಕಷ್ಟು ಮುಂಜಾಗ್ರತೆ, ಸುರಕ್ಷತಾ ಕ್ರಮ ಹಾಗೂ ನೈರ್ಮಲ್ಯ ಪಾಲಿಸಿದರೆ ಕೊರೊನಾ ಹರಡುವ ಅಪಾಯ ತೀರಾ ಕಡಿಮೆ.

By

Published : Oct 7, 2020, 4:08 PM IST

tooth
tooth

ಹೈದರಾಬಾದ್:ನಿಮ್ಮ ನಗು ನಿಮ್ಮ ವ್ಯಕ್ತಿತ್ವದ ಬಗ್ಗೆ ಬಹಳಷ್ಟು ತಿಳಿಸುತ್ತದೆ. ನೀವು ಹಲ್ಲಿನ ಸಮಸ್ಯೆಗಳನ್ನು ಹೊಂದಿದ್ದರೆ ಇದು ದೊಡ್ಡ ಸವಾಲಾಗಬಹುದು.

ಕೋವಿಡ್ ಪರಿಸ್ಥಿತಿಯಲ್ಲಿ ದಂತವೈದ್ಯರನ್ನು ಭೇಟಿ ಮಾಡಲು ಬಹಳಷ್ಟು ಪ್ರಶ್ನೆಗಳು ಮತ್ತು ಸಾಕಷ್ಟು ಸಂದಿಗ್ಧತೆಗಳು ಎದುರಾಗುವ ಸಾಧ್ಯತೆಯಿದೆ.

ಈ ಟಿವಿ ಭಾರತ ಸುಖೀಭವ ತಂಡವು ಮಾರ್ಗಾವ್ ದಂತ ಚಿಕಿತ್ಸಾಲಯ ಮತ್ತು ಎಂಡೋಡಾಂಟಿಕ್ಸ್ ಕೆಎಲ್ಇ ಬೆಲ್ಗೌಮ್​ನ ಮಾಜಿ ಉಪನ್ಯಾಸಕ ಡಾ. ಹಿಮಾಲಿ ಕಾಮತ್ ಅವರೊಂದಿಗೆ ಸಂವಾದ ನಡೆಸಿದೆ.

ದಂತವೈದ್ಯರನ್ನು ಏಕೆ ಭೇಟಿಯಾಗಬೆಕು?

ನೋವು ಸಾಮಾನ್ಯ ಲಕ್ಷಣವಾಗಿದೆ. ಆದರೆ ಅನೇಕ ಬಾರಿ ಹಲ್ಲಿನ ನೋವು ಹೆಚ್ಚಿನ ಸಂಕಟ ನೀಡುತ್ತದೆ. ಹಲ್ಲಿನ ಕ್ಷಯ ಮತ್ತು ಹಲ್ಲಿನ ಹುಣ್ಣುಗಳು ತುಂಬಾ ನೋವನ್ನುಂಟುಮಾಡುತ್ತವೆ. ಈ ಸಂದರ್ಭದಲ್ಲಿ ವೈದ್ಯರನ್ನು ಭೇಟಿಯಾಗುವುದು ಅತ್ಯಗತ್ಯ.

ಕೆಲವೊಮ್ಮೆ ಫಿಲ್ಲಿಂಗ್ ಅಥವಾ ಹಲ್ಲಿಗೆ ಕ್ಯಾಪ್ ಹಾಕುವ ಪರಿಸ್ಥಿತಿ ಎದುರಾಗಬಹುದು. ಇದಕ್ಕೆ ತಕ್ಷಣವಾಗಿ ವೈದ್ಯರ ಭೇಟಿ ಅಗತ್ಯ.

ಆದರೆ ಕೊರೊನಾ ಪರಿಸ್ಥತಿಯಲ್ಲಿ ದಂತವೈದ್ಯರನ್ನು ಭೇಟಿ ಮಾಡುವುದು ಎಷ್ಟು ಸುರಕ್ಷಿತ ಎಂಬುದರ ಕುರಿತು ಸಾಕಷ್ಟು ಚರ್ಚೆಗಳಿವೆ. ಆದ್ದರಿಂದ ಇಡೀ ಪ್ರಕ್ರಿಯೆಯ ಸುರಕ್ಷೆತೆಯ ಕುರಿತು ಗಮನಹರಿಸುವುದು ಒಳಿತು.

ದಂತವೈದ್ಯರು ಮೂಲ ನೈರ್ಮಲ್ಯೀಕರಣ ಮತ್ತು ಕ್ರಿಮಿನಾಶಕ ಪ್ರೋಟೋಕಾಲ್‌ಗಳನ್ನು ಅನುಸರಿಸಿದರೆ ಕೊರೊನಾ ಅಪಾಯ ಕನಿಷ್ಟ ಮಟ್ಟಕ್ಕೆ ಇಳಿಯುತ್ತದೆ.

  • ತಮ್ಮ ಹಾಗೂ ಇತರರ ಸುರಕ್ಷತೆಗಾಗಿ ಚಿಕಿತ್ಸೆಗೆ ಮೊದಲು ರೋಗಿಯ ಆರೋಗ್ಯ ಹಾಗೂ ಪ್ರಯಾಣದ ಕುರಿತು ದಂತವೈದ್ಯರು ತಿಳಿದುಕೊಳ್ಳಬೇಕು.
  • ರೋಗಿಗಳಿಗೆ ಚಿಕಿತ್ಸೆ ನೀಡುವ ಮೊದಲು ಕಟ್ಟುನಿಟ್ಟಾಗಿ ಅವರ ಆರೋಗ್ಯದ ಕುರಿತು ಗಮನಹರಿಸಬೇಕು. ಇತರರೊಂದಿಗೆ ಅವರ ಸಂಪರ್ಕ ಕಡಿಮೆಗೊಳಿಸಬೇಕು.
  • ಪ್ರತಿಯೊಬ್ಬ ರೋಗಿಗೆ ಚಿಕಿತ್ಸೆ ನಿಡಿದ ಬಳಿಕ ಎಲ್ಲಾ ವಸ್ತುಗಳನ್ನು ಹಾಗೂ ಕೊಠಡಿಯನ್ನು ಸೋಂಕುನಿವಾರಕಗೊಳಿಸಬೇಕು.
  • ಪ್ರತಿ ರೋಗಿಗೆ 30 ಸೆಕೆಂಡುಗಳ ಕಾಲ ಕ್ಲೋರ್ಹೆಕ್ಸಿಡೈನ್ ದ್ರಾವಣದಿಂದ ಬಾಯಿ ತೊಳೆಯಲು ಹಾಗೂ ಗಾರ್ಗಿಲ್ ಮಾಡಲು ಹೇಳಬೇಕು. ಇದು ಸೋಂಕು ಹರಡುವ ಅಪಾಯವನ್ನು ಮತ್ತಷ್ಟು ಕಡಿಮೆ ಮಾಡುತ್ತದೆ.
  • ಪ್ರತಿ ರೋಗಿಗೆ ಬಳಸಿದ ಉಪಕರಣಗಳನ್ನು ತೊಳೆಯಲು ಹಾಘೂ ಕ್ರಿಮಿನಾಶಕಗೊಳಿಸುವ ಮೊದಲು ಹೈಪೋಕ್ಲೋರೈಟ್ ದ್ರಾವಣದಲ್ಲಿ ನೆನೆಸಿಡಬೇಕು.
  • ದಂತವೈದ್ಯರು ಪಿಪಿಇ ಕಿಟ್, ಕನ್ನಡಕ, ಸೂಕ್ತವಾದ ಮಾಸ್ಕ್, ಫೇಸ್ ಶೀಲ್ಡ್ ಇತ್ಯಾದಿಗಳನ್ನು ಧರಿಸುವ ಮೂಲಕ ಹೆಚ್ಚಿನ ಕಾಳಜಿ ವಹಿಸಬೇಕು.
  • ಸೋಂಕುನಿವಾರಕವನ್ನು ಸಿಂಪಡಿಸುವುದರ ಮೂಲಕ ಗಾಳಿಯನ್ನು ಸೋಂಕುರಹಿತಗೊಳಿಸಬೇಕು. ಸಾಧ್ಯವಾದರೆ ಫಾಗಿಂಗ್ ಮಡಿಸಿ ಶುದ್ಧ ಗಾಳಿಯ ಪ್ರಸರಣಕ್ಕಾಗಿ ಕ್ಲಿನಿಕ್​ನ ಕಿಟಕಿಗಳನ್ನು ತೆರೆದಿಡಬೆಕು.

ಹಲ್ಲಿನ ನೈರ್ಮಲ್ಯದ ಅಭ್ಯಾಸಗಳನ್ನು ಅನುಸರಿಸುವ ಕುರಿತು ಜಾಗೃತಿ ಮೂಡಿಸುವುದು ಮತ್ತು ರೋಗಿಗಳಿಗೆ ಈ ಕುರಿತು ಶಿಕ್ಷಣ ನೀಡುವುದು ಅಗತ್ಯವಾಗಿದೆ.

  • ನಿಯಮಿತವಾಗಿ ಬ್ರಷ್ ಮಾಡಿ
  • ರೂಟ್ ಕನಾಲ್​ ಮಾಡಿಸುವಾಗ ಅಪೂರ್ಣವಾಗಿ ಬಿಡದಿರಿ
  • ಹಲ್ಲಿನ ನೋವು, ಒಸಡುಗಳಲ್ಲಿ ರಕ್ತಸ್ರಾವವನ್ನು ನಿರ್ಲಕ್ಷಿಸದಿರಿ
  • ನಾಲಿಗೆಯ ಸ್ವಚ್ಛತೆಗೂ ಗಮನಹರಿಸಿ
  • ಮೂಗು ಅಥವಾ ಕೆನ್ನೆಯ ಬಳಿ ಯಾವುದೇ ಅಹಿತಕರ ಊತಗಳಿದ್ದರೆ ನಿರ್ಲಕ್ಷಿಸದಿರಿ
  • ಗಾರ್ಗಿಲದ ಮಾಡುವ ಮೂಲಕ ಬಾಯಿ ಹಾಗೂ ಗಂಟಲಿನ ಸ್ವಚ್ಛತೆ ಕಾಪಾಡಬಹುದು.

ಮಕ್ಕಳು ಮತ್ತು ವೃದ್ಧರು ದಂತವೈದ್ಯರನ್ನು ಭೇಟಿಯಾಗುವು ಮೊದಲೇ ಅವರಿಗೆ ತಿಳಿಸಿ ಭೇಟಿಯಾದರೆ ಎಲ್ಲಾ ಮುನ್ನೆಚ್ಚರಿಕೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬಹುದು.

ಕೋವಿಡ್-19ಗಿಂತ ಹಿಂದೆಯೂ ದಂತಚಿಕಿತ್ಸೆಯ ಸಮಯದಲ್ಲಿ ಸಾಕಷ್ಟು ಮುಂಜಾಗ್ರತೆ, ಸುರಕ್ಷತಾ ಕ್ರಮ ಹಾಗೂ ನೈರ್ಮಲ್ಯ ಪಾಲಿಸುತ್ತಿದ್ದುರಿಂದಾಗಿ ಈ ಮೂಲಕ ಕೊರೊನಾ ಹರಡುವ ಸಾಧ್ಯತೆ ತೀರಾ ಕಡಿಮೆ ಎಂದು ಅಧ್ಯಯನಗಳು ತಿಳಿಸಿವೆ. ಕೋವಿಡ್-19 ಪರಿಸ್ಥತಿಯಲ್ಲಿ ಈ ಕ್ರಮಗಳನ್ನು ಹೆಚ್ಚು ಕಟ್ಟುನಿಟ್ಟಾಗಿ ಅನುಸರಿಸಲಾಗುತ್ತಿದೆ.

ABOUT THE AUTHOR

...view details