ನವದೆಹಲಿ: ಈಡಿಸ್ ಈಜಿಪ್ಟಿ ಎಂಬ ಸೊಳ್ಳೆ ಕಡಿತದಿಂದ ಬರುವ ಸೋಂಕೇ ಈ ಡೆಂಘೀ ಆಗಿದೆ. ವಾಹಕದ ಮೂಲಕ ಈ ಸೋಂಕು ಹರಡುತ್ತದೆ. ವಿಶೇಷವಾಗಿ ಜಗತ್ತಿನ ಉಷ್ಣವಲಯ ಮತ್ತು ಉಪಉಷ್ಣಲಯದ ಪರಿಸರದಲ್ಲಿ ಈ ಸೋಂಕು ಹೆಚ್ಚು ಕಂಡು ಬರುತ್ತದೆ. ಪ್ರತಿ ವರ್ಷ ಅಂದಾಜು 100-400 ಮಿಲಿಯನ್ ಮಂದಿ ಈ ಸೋಂಕಿಗೆ ಒಳಗಾಗುತ್ತಿದ್ದು, ಜಗತ್ತಿನ ಅರ್ಧದಷ್ಟು ಮಂದಿ ಇದರ ಅಪಾಯವನ್ನು ಹೊಂದಿದ್ದಾರೆ.
ವರ್ಗಾವಣೆ: ಈಡಿಸ್ ಈಜಿಪ್ಟಿ ಸೊಳ್ಳೆ ಈ ಡೆಂಘೀ ವಾಹಕವಾಗಿದೆ. ಇದು ಕಡಿಯುವ ಮೂಲಕ ಮನುಷ್ಯರಲ್ಲಿ ಡೆಂಘೀ ಸೋಂಕನ್ನು ಹರಡುತ್ತದೆ. ಈ ಸೊಳ್ಳೆಗಳು 25ರಿಂದ 28 ಡಿಗ್ರಿ ಸೆಲ್ಸಿಯಸ್ನಲ್ಲಿ 8-12 ಅವಧಿಯಲ್ಲಿ ವೈರಸ್ ಪ್ರಸರಣದ ಎಕ್ಸ್ಟ್ರಿನ್ಸಿಕ್ ಇನ್ಕ್ಯೂಬೆಷನ್ ಪಿರಿಯಡ್ ಅನ್ನು ಹೊಂದಿರುತ್ತದೆ. ಈ ಅವಧಿಯು ತಾಪಮಾನ ಸೇರಿದಂತೆ ಹಲವು ಅಂಶವನ್ನು ಹೊಂದಿದೆ. ಸೋಂಕಿತ ಸೊಳ್ಳೆಯು ಈ ವೈರಸ್ ಅನ್ನು ತನ್ನ ಜೀವಮಾನವೀಡಿ ಸೋಂಕಿನ ಪ್ರಸರಣ ನಡೆಸುತ್ತದೆ
ಮನುಷ್ಯರಿಂದ ಸೊಳ್ಳೆಗೆ ಪ್ರಕರಣ: ಡೆಂಘೀಯನ್ನು ಹೊಂದಿರುವ ಮನುಷ್ಯರಿಂದಲೂ ಸೊಳ್ಳೆಗಳು ಈ ಸೋಂಕಿಗೆ ಗುರಿಯಾಗುತ್ತವೆ. ಇದು ಕೇವಲ ಡೆಂಘೀ ಸೋಂಕಿನ ಲಕ್ಷಣ ಹೊಂದಿರುವ ವ್ಯಕ್ತಿಗಳನ್ನು ಸೊಳ್ಳೆ ಕಡಿದಾಗ ಉಂಟಾಗುತ್ತದೆ. ಮನುಷ್ಯರಿಂದ ಸೊಳ್ಳೆಗಳಿಗೆ ಎರಡು ರೀತಿಯಲ್ಲಿ ಸೋಂಕು ಪ್ರಸರಣವಾಗುತ್ತದೆ. ಒಂದು ಅನಾರೋಗ್ಯದ ಸೋಂಕು ಲಕ್ಷಣ ಗೋಚರವಾಗುವ ಎರಡು ದಿನ ಮೊದಲು, ಜ್ವರದ ಲಕ್ಷಣ ಹೊಂದಿರುವ ಎರಡು ದಿನದ ಬಳಿಕ ಈ ಪರಿಣಾಮ ಕಾಣಿಸುತ್ತದೆ.
ತಾಯ್ತನದ ಪ್ರಸರಣ: ಡೆಂಘೀ ಪ್ರಸರಣ ಮನುಷ್ಯರಿಂದ ಸೊಳ್ಳೆಗೆ ವಾಹಕದ ಮೂಲಕ ಆಗುತ್ತದೆ. ಈ ಸೋಂಕು ಗರ್ಭಿಣಿಯಿಂದ ಹುಟ್ಟಲಿರುವ ಮಗುವಿನ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಇದೇ ವೇಳೆ ನೇರ ಪ್ರಸರಣ ದರ ಕಡಿಮೆ ಇರುವುದು ಕಂಡು ಬಂದಿದೆ. ಗರ್ಭಿಣಿ ಡೆಂಘೀ ಸೋಂಕಿನ ಲಕ್ಷಣಕ್ಕೆ ಒಳಗಾದಾಗ ಮಗುವು ಅವಧಿ ಪೂರ್ವ ಜನನ, ಕಡಿಮೆ ದೇಹ ತೂಕ ಮತ್ತು ಮಾರಾಣಾಂತಿಕ ಸಮಸ್ಯೆ ಅನುಭವಿಸಬಹುದು. ಇದು ರಕ್ತ, ಅಂಗಾಂಗ ದಾನ ಸೇರಿದಂತೆ ಹಲವು ಮಾರ್ಗದಲ್ಲಿ ವರ್ಗಾವಣೆ ಆಗಬಹುದು.
ಲಕ್ಷಣ: ಡೆಂಘೀ ಸೌಮ್ಯ ಅಥವಾ ಗಂಭೀರ ಲಕ್ಷಣವನ್ನು ಹೊಂದಿದೆ. ಸೌಮ್ಯ ಲಕ್ಷಣದಲ್ಲಿ ಅಧಿಕ ಜ್ವರ, ಭಾರಿ ತಲೆನೋವು, ಸ್ನಾಯು ಮತ್ತು ಕೀಲು ನೋವು, ತಲೆತಿರುಗುವಿಕೆ, ವಾಂತಿ ಸೇರಿದಂತೆ ಹಲವು ಲಕ್ಷಣ ಕಾಣಿಸುತ್ತದೆ.
ಗಂಭೀರ ಲಕ್ಷಣದಲ್ಲಿ ಹೊಟ್ಟೆ ನೋವು, ತೀವ್ರ ಉಸಿರಾಟ, ಒಸಡು ಅಥವಾ ಮೂಗಿನಲ್ಲಿ ರಕ್ತಸ್ರಾವ, ಅವಿಶ್ರಾಂತಿ, ದೇಹದ ದುರ್ಬಲತೆ, ರಕ್ತದ ವಾಂತಿ ಯಂತಹ ಲಕ್ಷಣಗಳು ಕಂಡು ಬರುತ್ತವೆ.
ಜಾಗತಿಕ ಕಾಳಜಿ: ಇತ್ತೀಚಿನ ದಶಕದಲ್ಲಿ ಡೆಂಘೀ ಪ್ರಕರಣ ಹೆಚ್ಚಳ ಕಂಡಿದೆ. 2000ದಲ್ಲಿ 5,05,430 ಇದ್ದ ಪ್ರಕರಣ 2019ರಲ್ಲಿ 52 ಲಕ್ಷವಾಗಿದೆ ಎಂದು ಡಬ್ಲ್ಯೂಎಚ್ಒ ವರದಿ ಮಾಡಿದೆ. ಈ ರೋಗವೂ 100 ದೆಶದಲ್ಲಿ ಕಣಡು ಬಂದಿದ್ದು, ಏಷ್ಯಾದಲ್ಲಿ ಶೇ 70ರಷ್ಟಿದೆ. ಯುರೋಪ್ ಸೇರಿದಂತೆ ಹೊಸ ಪ್ರದೇಶದಲ್ಲೂ ಕೂಡ ಈ ಡೆಂಘೀ ಪ್ರಕರಣ ಕಂಡು ಬರುತ್ತಿದೆ.