ಕರ್ನಾಟಕ

karnataka

ETV Bharat / sukhibhava

ಹೆಚ್ಚುತ್ತಿದೆ ಡೆಂಘೀ ಪ್ರಕರಣಗಳ ಸಂಖ್ಯೆ; 13ಸಾವಿರ ಪ್ರಕರಣ ದಾಖಲು.. ಏನೆಲ್ಲಾ ಮುಂಜಾಗ್ರತೆ ತೆಗೆದುಕೊಳ್ಳಬೇಕು ಗೊತ್ತಾ? - Etv bharat kannada

ಳೆದ 24 ಗಂಟೆಗಳಲ್ಲಿ 274 ಪಾಸಿಟಿವ್​​ ಪ್ರಕರಣಗಳು ದಾಖಲಾಗಿದೆ. ಡೆಂಗ್ಯೂನಿಂದಾಗಿ ರಾಜ್ಯದಲ್ಲಿ 41 ಸಾವಿನ ವರದಿಯಾಗಿದ್ದು, ಅಕ್ಟೋಬರ್​ನಲ್ಲಿ ಅತಿ ಹೆಚ್ಚಿನ ಗರಿಷ್ಟ ಸಾವಿನ ವರದಿ ಆಗಿದೆ

Dengue cases rise in Bihar
Dengue cases rise in Bihar

By ETV Bharat Karnataka Team

Published : Oct 23, 2023, 11:50 AM IST

ಪಟ್ನಾ: ಬಿಹಾರದಲ್ಲಿ ಡೆಂಘೀ ಪ್ರಕರಣಗಳು ಉಲ್ಬಣಗೊಳ್ಳುತ್ತಿದ್ದು, ರಾಜ್ಯದಲ್ಲಿ ಈವರೆಗೆ 13 ಸಾವಿರ ಪ್ರಕರಣಗಳು ವರದಿಯಾಗಿದೆ ಎಂದು ಅಧಿಕಾರಿಗಳು ವರದಿ ಮಾಡಿದ್ದಾರೆ.

ಆರೋಗ್ಯ ಇಲಾಖೆ ಮಾಹಿತಿ ಅನುಸಾರ, ಕಳೆದ 24 ಗಂಟೆಗಳಲ್ಲಿ 274 ಪಾಸಿಟಿವ್​​ ಪ್ರಕರಣಗಳು ದಾಖಲಾಗಿದೆ. ಡೆಂಘೀಯಿಂದಾಗಿ ರಾಜ್ಯದಲ್ಲಿ 41 ಸಾವಿನ ವರದಿಯಾಗಿದ್ದು, ಅಕ್ಟೋಬರ್​ನಲ್ಲಿ ಅತಿ ಹೆಚ್ಚಿನ ಗರಿಷ್ಟ ಸಾವಿನ ವರದಿ ಆಗಿದೆ. 41ರಲ್ಲಿ ಪಾಟ್ನಾದಲ್ಲಿ 11 ಪ್ರಕರಣ ಆಗಿದ್ದು, ಬಾಗ್ಲಪುರದಲ್ಲಿ ಆರು, ಸಮಸ್ತಿಪುರದಲ್ಲಿ ಮೂರು, ಬೆಗುಸರಾಜ್​ನಲ್ಲಿ ಮೂರು ಪ್ರಕರಣಗಳು ಹಾಗೂ ಮುಜಾಫರ್​ನಲ್ಲಿ ಮೂರು ಪ್ರಕರಣಗಳು ವರದಿ ಆಗಿದೆ.

ಈ ವರ್ಷ 13, 093 ವ್ಯಕ್ತಿಗಳಲ್ಲಿ ಡೆಂಘೀ ಪಾಸಿಟಿವ್​ ಆಗಿದೆ. ಪಾಟ್ನಾದಲ್ಲಿ 152 ಮಂದಿ, ಸರಾನ್​ 14, ಔರಾಗ್​ಬಾದ್​ 10, ಮುಂಗೇರ್​ನಲ್ಲಿ 8 ಮತ್ತು ವೈಶಾಲಿಯಲ್ಲಿ 8 ಪ್ರಕರಣಗಳು ದಾಖಲಿಸಲಾಗಿದೆ. ಪ್ರಸ್ತುತ 12 ಮೆಡಿಕಲ್​ ಕಾಲೇಜ್​ನಲ್ಲಿ 249 ರೋಗಿಗಳು ದಾಖಲಾಗಿದೆ. ಆರೋಗ್ಯ ಇಲಾಖೆಯು ರಾಜ್ಯದ ವೈದ್ಯಕೀಯ ಕಾಲೇಜುಗಳು ಮತ್ತು ಸದರ್ ಆಸ್ಪತ್ರೆಗಳಲ್ಲಿ ರೋಗಿಗಳನ್ನು ದಾಖಲಿಸಲು ಮೀಸಲಾದ ವಾರ್ಡ್‌ಗಳನ್ನು ರಚಿಸಲಾಗಿದೆ.

ಡೆಂಘೀಗೆ ಕಾರಣ: ಡೆಂಘೀ ಸೊಳ್ಳೆಯಿಂದ ಹರಡುವ ರೋಗ ಆಗಿದೆ. ಡೆಂಘೀ ರೋಗ ಪೀಡಿತರಲ್ಲಿ ಸೌಮ್ಯ ಅಥವಾ ಗಂಭೀರ ಲಕ್ಷಣವನ್ನು ಹೊಂದಿದೆ. ಸೌಮ್ಯ ಲಕ್ಷಣದಲ್ಲಿ ಅಧಿಕ ಜ್ವರ, ಭಾರಿ ತಲೆನೋವು, ಸ್ನಾಯು ಮತ್ತು ಕೀಲು ನೋವು, ತಲೆತಿರುಗುವಿಕೆ, ವಾಂತಿ ಸೇರಿದಂತೆ ಹಲವು ಲಕ್ಷಣ ಕಾಣಿಸುತ್ತದೆ. ಗಂಭೀರ ಲಕ್ಷಣದಲ್ಲಿ ಹೊಟ್ಟೆ ನೋವು, ತೀವ್ರ ಉಸಿರಾಟ, ಒಸಡು ಅಥವಾ ಮೂಗಿನಲ್ಲಿ ರಕ್ತಸ್ರಾವ, ಅವಿಶ್ರಾಂತಿ, ದೇಹದ ದುರ್ಬಲತೆ, ರಕ್ತದ ವಾಂತಿ ಯಂತಹ ಲಕ್ಷಣಗಳು ಕಂಡು ಬರುತ್ತವೆ.

ಡೆಂಘೀ ಅಪಾಯ ಹೊಂದಿರುವ ಸೊಳ್ಳೆಗಳ ಕಡಿತವನ್ನು ತಪ್ಪಿಸುವುದು ನಿರ್ಣಾಯಕವಾಗಿದೆ. ಪ್ರಸ್ತುತ ಡೆಂಘೀ ಗೆ ಯಾವುದೇ ಸೂಕ್ತ ಲಸಿಕೆ ಇಲ್ಲ ಹಾಗೂ ನಿರ್ಧಿಷ್ಟ ಚಿಕಿತ್ಸೆಯೂ ಇಲ್ಲ. ಸೋಂಕಿನ ಲಕ್ಷಣ ಆಧಾರಿಸಿ ಚಿಕಿತ್ಸೆ ನೀಡಲಾಗುವುದು. ಇಬುಪ್ರೊಫೆನ್​ ಮತ್ತು ಆಸ್ಪಿರಿನ್​ನಂತಹ ಸ್ಟಿರಿಯಾಡಲ್​ ಊರಿಯುತ ವಿರೋಧಿ ಔಷಧಗಳು ರಕ್ತಸ್ರಾವ ಅಪಾಯವನ್ನು ಕಡಿಮೆ ಮಾಡುತ್ತದೆ.

ರಕ್ಷಣೆ ಹೇಗೆ?:ನಿಂತ ನೀರಿನಲ್ಲಿ ಸೊಳ್ಳೆಗಳು ಸಂತಾನಾಭಿವೃದ್ಧಿ ನಡೆಸುತ್ತವೆ. ಹೀಗಾಗಿ ಸುತ್ತಮುತ್ತಲಿನ ಪರಿಸರದಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಿ. ಶುದ್ಧ ನೀರು ಸೇವನೆ ಪ್ರಮುಖ ಆದ್ಯತೆ ಆಗಬೇಕು. ನೀರನ್ನು ಕುದಿಸಿ, ಶೋಧಿಸಿ ಕುಡಿಯುವುದು ಮತ್ತಷ್ಟು ಉತ್ತಮ.

ಇದನ್ನೂ ಓದಿ: ಸಾಫ್ಟ್​ ಡ್ರಿಂಕ್ಸ್​ ಇಷ್ಟವೇ? ಹೆಚ್ಚು ಕುಡೀತೀರಾ? ಹಾಗಿದ್ದರೆ, ಒಮ್ಮೆ ಮೂಳೆ ಪರೀಕ್ಷೆ ಮಾಡಿಸಿ!

ABOUT THE AUTHOR

...view details