ನವದೆಹಲಿ: ವಯಸ್ಸಾದಂತೆ ನೆನಪಿನ ಶಕ್ತಿ ಕ್ಷೀಣಿಸುವುದು ಸಹಜ. ಆದರೆ, ದೆಹಲಿಯ ಜನರಲ್ಲಿ ಈ ಸಮಸ್ಯೆ ಅವಧಿಗೆ ಮೊದಲೇ ಪತ್ತೆಯಾಗುತ್ತಿದೆ. ಅದರಲ್ಲೂ 50ರೊಳಗಿನ ಯುವ ಜನತೆ ಸ್ಮರಣಾ ಶಕ್ತಿ ನಷ್ಟ, ಹುಸಿ ಬುದ್ದಿಮಾಂದ್ಯತೆಯಂತಹ ಸಮಸ್ಯೆ ಎದುರಿಸುತ್ತಿರುವ ಪ್ರಕರಣಗಳು ತಿಂಗಳಿಗೆ 50 ರಷ್ಟು ದಾಖಲಾಗುತ್ತಿದೆ ಎಂದು ವೈದ್ಯರು ತಿಳಿಸಿದ್ದಾ. ಹಾಗಾಗಿ, ಇದೊಂದು ಎಚ್ಚರಿಕೆ ಗಂಟೆಯಾಗಿದೆ.
ಹುಸಿ ಬುದ್ದಿಮಾಂದ್ಯತೆ ಎಂಬುದು ಖಿನ್ನತೆಯ ಕಾರಣದಿಂದ ಅರಿವಿನ ಕೊರತೆ ಉಂಟುಮಾಡುವ ಪರಿಸ್ಥಿತಿ. ರೋಗಿಗಳು ಅನೇಕ ಬಾರಿ ಸ್ಮರಣೆ ಮತ್ತು ಏಕಾಗ್ರತೆ ಸಮಸ್ಯೆ ಎದುರಿಸುವ ಜೊತೆಗೆ ಖಿನ್ನತೆಯ ಲಕ್ಷಣವನ್ನು ನಿರಾಕರಿಸುತ್ತಾರೆ.
ಹುಸಿ ಬುದ್ದಿಮಾಂದ್ಯತೆ ಪ್ರಕರಣಗಳು ಯುವ ವಯಸ್ಸಿನ ಜನರಲ್ಲಿ ಹೆಚ್ಚಾಗುತ್ತಿದೆ. ಮಾಸಿಕವಾಗಿ 50 ವರ್ಷದೊಳಗಿನ ಜನರಲ್ಲಿ ಈ ಸಮಸ್ಯೆಗಳನ್ನು ಕಾಣುತ್ತಿದ್ದೇವೆ. ಅವರು ಸ್ಮರಣೆ ಶಕ್ತಿ ನಷ್ಟ ಮತ್ತು ಹುಸಿ ಬುದ್ದಿಮಾಂದ್ಯತೆಗೆ ಸಹಾಯ ಕೇಳುತ್ತಿದ್ದಾರೆ ಎಂದು ಗುರುಗ್ರಾಮದ ಫೋರ್ಟಿಸ್ ಮೆಮೋರಿಯಲ್ ರಿಸರ್ಚ್ ಇನ್ಸುಟಿಟ್ಯೂಟ್ನ ನರರೋಗ ತಜ್ಞ ಡಾ.ಪ್ರಣೀಣ್ ಗುಪ್ತಾ ತಿಳಿಸಿದರು.
ಹುಸಿ ಬುದ್ದಿಮಾಂದ್ಯತೆ ಮತ್ತು ಸ್ಮರಣೆ ನಷ್ಟ ಅನುಭವಿಸುತ್ತಿರುವ ರೋಗಿಗಳು, ತಮ್ಮ ಕಾರು ಕೀಗಳನ್ನು ಎಲ್ಲಿಟ್ಟರು ಎಂದು ಮರೆಯುತ್ತಾರೆ. ತರಕಾರಿ ಮಳಿಗೆಯಿಂದ ಸಾಮಗ್ರಿಗಳನ್ನು ತರುವುದನ್ನು ಮರೆಯುವುದು, ಸ್ನೇಹಿತರ ಕರೆಗೆ ಮರಳಿ ಮಾಡುವುದನ್ನು ಮರೆಯುವುದು, ಅವರೇನು ಹೇಳಬೇಕು ಎನ್ನುವುದನ್ನೇ ಮರೆಯುವಂತಹ ಸಮಸ್ಯೆ ಹೊಂದಿದ್ದಾರೆ.
ಒತ್ತಡ ಪ್ರಮುಖ ಕಾರಣ: ವೃತ್ತಿ, ಅತಿಯಾದ ಕೆಲಸ, ಸಾಮಾಜಿಕ ಸ್ಥಿತಿಗತಿ ಸೇರಿದಂತೆ ಇತರೆ ಅಂಶಗಳ ಮೇಲೆ ಒತ್ತಡ ಹಾಕುತ್ತಿದ್ದು, ಇದು ಅವರ ಮಿದುಳಿನ ಮೇಲೆ ಹೆಚ್ಚು ಒತ್ತಡ ಹಾಕುತ್ತಿದೆ. ಇದರಿಂದ ಮೆದುಳಿಗೆ ಮಾಹಿತಿಯನ್ನು ಸಂಪೂರ್ಣವಾಗಿ ಪ್ರಕ್ರಿಯೆಗೊಳಿಸಲು ಅಡ್ಡಿಯಾಗುತ್ತಿದ್ದು, ಶಾಶ್ವತ ಸ್ಮರಣೆಗೆ ತಲುಪುತ್ತಿಲ್ಲ. ಏಕಕಾಲದಲ್ಲಿ ಹೆಚ್ಚಿನ ಮಾಹಿತಿ ಪ್ರಕ್ರಿಯೆ ನಡೆಸುವುದೂ ಕೂಡ ದೃಷ್ಟಿ ಮತ್ತು ಸ್ಮರಣೆ ನಷ್ಟಕ್ಕೆ ಕಾರಣವಾಗುತ್ತದೆ ಎಂದು ಡಾ.ಗುಪ್ತಾ ಹೇಳಿದರು.