ನವದೆಹಲಿ: ಆಟಿಸಂ ಸ್ಪೆಕ್ಟ್ರಂ ಸಮಸ್ಯೆಯಿಂದ ಬಳಲುತ್ತಿರುವ ಇಬ್ಬರು ಮಕ್ಕಳಿಗೆ ಸ್ಟೆಮ್ ಸೆಲ್ ಥೆರಪಿ (ಕಾಂಡ ಕೋಶ ಚಿಕಿತ್ಸೆ) ನಡೆಸಲು ದೆಹಲಿ ಹೈ ಕೋರ್ಟ್ ಅನುಮತಿ ನೀಡಿದೆ. ಎಥಿಕ್ಸ್ ಮತ್ತು ಮೆಡಿಕಲ್ ರಿಜಿಸ್ಟ್ರೇಷನ್ ಬೋರ್ಡ್ (ಇಎಂಆರ್‌ಬಿ) ಶಿಫಾರಸು ಮಾಡಿರುವ ಈ ಚಿಕಿತ್ಸೆಯನ್ನು ರಾಷ್ಟ್ರೀಯ ವೈದ್ಯಕೀಯ ಆಯೋಗದ (ಎನ್‌ಎಂಸಿ) ಸ್ಥಗಿತಗೊಳಿಸಿದ ಹಿನ್ನೆಲೆ ಇಬ್ಬರು ಮಕ್ಕಳ ಕುಟುಂಬ ಸದಸ್ಯರು ಈ ಸಂಬಂಧ ನ್ಯಾಯಾಲಯದ ಮೊರೆ ಹೋಗಿದ್ದರು.
ಇವರ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಾಮೂರ್ತಿ ಸತೀಶ್ ಚಂದ್ರ ಶರ್ಮಾ ಅವರನ್ನೊಳಗೊಂಡ ಪೀಠ, ಆಟಿಸಂ ಸ್ಪೆಕ್ಟ್ರಂ ಡಿಸಾರ್ಡರ್ (ಎಎಸ್ಡಿ)ಗೆ ಸ್ಟೆಂ ಸೆಲ್ ಥೆರಪಿ ಬಳಕೆ ನಿಷೇಧಿಸಿರುವ ಯಾವುದೇ ಕಾನೂನು ಜಾರಿಯಲ್ಲಿ ಇಲ್ಲ ಎಂದು ತಿಳಿಸಿದರು. ಎನ್‌ಎಂಸಿ ಇನ್ನು ಈ ಶಿಫಾರಸು ಕುರಿತು ಪ್ರಕ್ರಿಯೆಗೆ ಅಂತಿಮ ನಿರ್ಧರಾದ ಪ್ರಕ್ರಿಯೆ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಿದ ನ್ಯಾಯಾಲಯ ಇದೀಗ ನಡೆಯುತ್ತಿರುವ ಚಿಕಿತ್ಸೆಯನ್ನು ನಿಲ್ಲಿಸುವುದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ಹಾಗಾಗಿ ಚಿಕಿತ್ಸೆಯನ್ನು ಮುಂದುವರೆಸುವಂತೆ ತಿಳಿಸಿದೆ.
ಇದು ಮಧ್ಯಂತರ ಆದೇಶವಾಗಿದ್ದು, ಚಿಕಿತ್ಸೆಯನ್ನು ತಕ್ಷಣಕ್ಕೆ ನಿಲ್ಲಿಸಬಾರದು ಎಂದು ಖಚಿತಪಡಿಸಿಕೊಳ್ಳಬೇಕು ಎಂದಿದ್ದಾರೆ. ಆದಾಗ್ಯೂ, ಚಿಕಿತ್ಸೆಯ ಅಪಾಯದಲ್ಲಿ ಅರ್ಜಿದಾರರಿದ್ದಾರೆ. ಏಮ್ಸ್ ವೈದ್ಯರ ಕೂಡ ಈ ವಿಚಾರಣೆ ವೇಳೆ ಹಾಜರಿದ್ದು, ಸ್ಟೆಮ್ ಚಿಕಿತ್ಸೆಯನ್ನು ಪ್ರಸ್ತುತ ರಕ್ತದ ಕ್ಯಾನ್ಸರ್ ಚಿಕಿತ್ಸೆಗೆ ನೀಡಲಾಗುತ್ತಿದ್ದು, ಎಡಿಎಸ್ಗೆ ಈ ಚಿಕಿತ್ಸೆ ಇನ್ನು ಪ್ರಯೋಗಿಕವಾಗಿದೆ ಎಂದು ಹೇಳಿದ್ದಾರೆ.