ಕರ್ನಾಟಕ

karnataka

ETV Bharat / sukhibhava

ದೆಹಲಿ ಶಾಲಾ ಮಕ್ಕಳಿಗೆ ಡೆಂಗ್ಯೂ ಹೋಂವರ್ಕ್​; ರೋಗ ನಿಯಂತ್ರಣಕ್ಕೆ ಸರ್ಕಾರದ ವಿನೂತನ ಕ್ರಮ - ಆರೋಗ್ಯ ಸಚಿವ ಸೌರಭ್​ ಭಾರಧ್ವಾಜ್​

ದೆಹಲಿಯನ್ನು ಒಂದೆಡೆ ಪ್ರವಾಹ ಸಮಸ್ಯೆ ಕಾಡುತ್ತಿದ್ದರೆ, ಮತ್ತೊಂದೆಡೆ ವಿವಿಧ ರೀತಿಯ ಆರೋಗ್ಯ ಸಮಸ್ಯೆಯೂ ಬಾಧಿಸುತ್ತಿದೆ.

delhi Government involve School children to prevention of dengue on a large scale
delhi Government involve School children to prevention of dengue on a large scale

By

Published : Jul 13, 2023, 11:30 AM IST

ದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಡೆಂಗ್ಯೂ, ಮಲೇರಿಯಾ ಪ್ರಕರಣಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಸೋಂಕು ತಡೆಗೆ ಆರೋಗ್ಯ ಸಚಿವ ಸೌರಭ್​ ಭಾರದ್ವಾಜ್​ ನೇತೃತ್ವದಲ್ಲಿ ಬುಧವಾರ ಉನ್ನತ ಮಟ್ಟದ ಸಮಿತಿ ನಡೆಸಯಿತು. ಮಳೆಗಾಲದಲ್ಲಿ ವಿವಿಧ ವಾಹಕಗಳ ಮೂಲಕ ಹರಡುವ ಸೋಂಕು ತಡೆ, ನಿಯಂತ್ರಣದ ಸಿದ್ಧತೆ ಮತ್ತು ಡೆಂಗ್ಯೂ, ಚಿಕುನ್​ಗುನ್ಯಾ ಮತ್ತು ಮಲೇರಿಯಾದಂತಹ ರೋಗ ಹರಡದಂತೆ ಕ್ರಮವಹಿಸುವ ಕುರಿತು ರಾಜ್ಯ ಸರ್ಕಾರ, ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದೆ.

ಈ ಕುರಿತು ಅಧಿಕಾರಿಗಳಿಗೆ ಸೂಚನೆ ನೀಡಿದ ಆರೋಗ್ಯ ಸಚಿವರು, ಭಾರಿ ಮಳೆಯಿಂದಾಗಿ ಡೆಂಗ್ಯೂ ಮತ್ತು ಮಲೇರಿಯಾ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆ ಇದೆ. ರೋಗಗಳ ತಡೆಗೆ ಅಗತ್ಯ ಸಿದ್ಧತೆ ನಡೆಸಬೇಕು. ಸೊಳ್ಳೆಗಳಿಂದ ಹರಡುವ ತೊಂದರೆಗಳನ್ನು ತಡೆಯುವಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಅನುಸರಿಸಬೇಕು ಎಂದು ಮಾರ್ಗದರ್ಶನ ನೀಡಿದರು.

ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಜನರಲ್ಲಿ ಅರಿವು ಮೂಡಿಸಬೇಕು. ತಮ್ಮ ತಮ್ಮ ಕ್ಷೇತ್ರಗಳಲ್ಲಿ ಸೊಳ್ಳೆ ಸಂಬಂಧಿತ ರೋಗಗಳು ಹರಡದಂತೆ ಕ್ರಮಕ್ಕೆ ಮುಂದಾಗಬೇಕು ಎಂದು ನಿರ್ದೇಶನ ಕೊಟ್ಟರು. ಇದರ ಜೊತೆಗೆ ನೀರು ನಿಂತ ಪ್ರದೇಶದಲ್ಲಿ ಸೊಳ್ಳೆಗಳು ಸಂತಾನಾಭಿವೃದ್ಧಿ ಮಾಡುವ ಹಿನ್ನೆಲೆಯಲ್ಲಿ ಇಂತಹ ಸ್ಥಳಗಳಿಗೆ, ನಿಂತ ನೀರಿನ ಪ್ರದೇಶಗಳಿಗೆ ಭೇಟಿ ನೀಡಿ ತೆರವು ಕಾರ್ಯಾಚರಣೆ ನಡೆಸಬೇಕು. ಪ್ರತಿ ಮನೆ ಮನೆಗಳಲ್ಲೂ ಜಾಗೃತಿ ಮೂಡಿಸಿ, ನೀರು ನಿಲ್ಲದಂತೆ ಜನರನ್ನು ಎಚ್ಚರಿಸಬೇಕು. ಶಾಲಾ ಮಕ್ಕಳ ಸಹಾಯ ಪಡೆದು ಅರಿವು ಮೂಡಿಸುವುದು ಒಳ್ಳೆಯದು ಎಂದರು.

ಡೆಂಗ್ಯೂ ಹೋಂ ವರ್ಕ್​: ದೆಹಲಿಯಲ್ಲಿ ಸೋಂಕು ತಡೆಯುವಲ್ಲಿ ದೊಡ್ಡ ಮಟ್ಟದಲ್ಲಿ ಶಾಲಾ ಮಕ್ಕಳನ್ನು ಬಳಸಿಕೊಳ್ಳಲು ನಿರ್ಧರಿಸಲಾಗಿದೆ. ಈ ರೀತಿಯ ಅರಿವು ಮೂಡಿಸುವಲ್ಲಿ ಮಕ್ಕಳು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತಾರೆ. ಎಂಸಿಡಿ ಮತ್ತು ದೆಹಲಿ ಶಿಕ್ಷಣ ಇಲಾಖೆ ಶಾಲೆಗಳಿಗೆ ವಿಶೇಷ ಸೂಚನೆ ನೀಡಲಾಗಿದೆ. ಮಕ್ಕಳಿಗೆ ತಮ್ಮ ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳುವ ಡೆಂಗ್ಯೂ ಹೋಂವರ್ಕ್​ ನೀಡಲಾಗಿದೆ ಎಂದು ಸಚಿವರು ಹೇಳಿದರು.

ಮಕ್ಕಳಿಗೆ ಡೆಂಗ್ಯೂ ಹೋಂ ವರ್ಕ್​ ಸಂಬಂಧ ಪೋಷಕರಿಗೆ ಶಾಲೆಯಲ್ಲಿ ರಿಪೋರ್ಟ್​​ ಕಾರ್ಡ್​ ನೀಡಲಾಗುವುದು. ಹೋಂ ವರ್ಕ್​ ಅನ್ನು ಪ್ರತಿ ವಾರ ಪರಿಶೀಲಿಸಿ, ಮರಳಿಸಲಾಗುವುದು. ಈ ಕಾರ್ಡ್​ನಲ್ಲಿ ನೀಡಿರುವ ಅಂಶದಂತೆ ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು ಮಕ್ಕಳು ಪೋಷಕರ ಸಹಾಯದಿಂದ ನಿರ್ವಹಿಸಬೇಕು. ಮಕ್ಕಳು ಮತ್ತು ಪೋಷಕರು, ಮನೆ ಮತ್ತು ಸುತ್ತಮುತ್ತ ಪ್ರದೇಶದಲ್ಲಿ ನೀರು ನಿಲ್ಲದಂತೆ ತಡೆಯುವ ಕ್ರಮವಹಿಸಬೇಕು. ಎಂಸಿಡಿಯ ಎಲ್ಲ ಶಾಲೆ ಮತ್ತು ಖಾಸಗಿ ಶಾಲೆಗಳಲ್ಲಿ ಹೋಂ ವರ್ಕ್​ ನೀಡಲಾಗಿದೆ ಎಂದು ಸಚಿವರು ತಿಳಿಸಿದರು.

ಸಮುದಾಯಗಳು ಜಾಗೃತಿ ಅಭಿಯಾನಗಳನ್ನು ನಡೆಸುವ ಮೂಲಕ ಮತ್ತು ಮಾಹಿತಿ ಸಂವಹನ ಸಾಮಗ್ರಿಗಳನ್ನು ಅಭಿವೃದ್ಧಿಪಡಿಸುವ ಕೆಲಸ ನಡೆಸಬೇಕು ಎಂದು ಇದೇ ವೇಳೆ ಸಚಿವರು ಕರೆ ನೀಡಿದರು.

ಇದನ್ನೂ ಓದಿ: Dengue flu: ನೆರೆಪೀಡಿತ ದೆಹಲಿಯಲ್ಲಿ ಡೆಂಗ್ಯೂ ಪ್ರಕರಣ ಹೆಚ್ಚಳ

ABOUT THE AUTHOR

...view details