ಕರ್ನಾಟಕ

karnataka

ETV Bharat / sukhibhava

ದೆಹಲಿಯಲ್ಲಿ ಮತ್ತಷ್ಟು ಹದಗೆಟ್ಟ ವಾಯು ಗುಣಮಟ್ಟ; ಟ್ರಕ್​ಗಳಿಗೆ ನಿರ್ಬಂಧ, ವರ್ಕ್​ ಫ್ರಂ ಹೋಮ್​ ಮೊರೆ - ವಾಯು ಗುಣಮಟ್ಟ ಸೂಚ್ಯಂಕ

Delhi air quality worsens: ದೆಹಲಿ ವಾಯು ಗುಣಮಟ್ಟ ದಿನ ದಿನಕ್ಕೆ ಹದಗೆಡುತ್ತಿದೆ. ಇದು ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ವೈದ್ಯರು ಎಚ್ಚರಿಸಿದ್ದಾರೆ.

delhi air quality worsen state government taken some action to reduce pollution
delhi air quality worsen state government taken some action to reduce pollution

By ETV Bharat Karnataka Team

Published : Nov 6, 2023, 10:20 AM IST

ನವದೆಹಲಿ:ದೆಹಲಿ ಮತ್ತು ಎನ್​ಸಿಆರ್​ನಲ್ಲಿ ಮಾಲಿನ್ಯ ಮಟ್ಟ ಭಾನುವಾರ ರಾತ್ರಿ ಮತ್ತಷ್ಟು ಬಿಗಾಡಾಯಿಸಿದೆ. ವಾಯು ಗುಣಮಟ್ಟ ಸೂಚ್ಯಂಕ 471ರಷ್ಟು ದಾಖಲಾಗಿದೆ. ಹೀಗಾಗಿ, ವಾತಾವರಣ ದಟ್ಟ ಹೊಗೆಯಿಂದ ಕೂಡಿದೆ ಎಂದು ವಾಯು ಗುಣಮಟ್ಟ ವ್ಯವಸ್ಥೆ ಮತ್ತು ಹವಾಮಾನ ಮುನ್ಸೂಚನೆ ಮತ್ತು ಸಂಶೋಧನೆ (ಎಸ್​ಎಎಫ್​ಎಆರ್​​) ದತ್ತಾಂಶದ ವರದಿಯಲ್ಲಿ ತಿಳಿಸಿದೆ. ರಾಷ್ಟ್ರ ರಾಜಧಾನಿಯ ಆನಂದ್​ ವಿಹಾರ್​ ಸ್ಟೇಷನ್ ಅತ್ಯಂತ ಕಳಪೆ ವಾಯುಗುಣ ಹೊಂದಿದ್ದು, ಪಿಎ2.5 ವರದಿಯಾಗಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಮಾಹಿತಿ ನೀಡಿದೆ.

ಟ್ರಕ್​ಗಳಿಗೆ ನಿರ್ಬಂಧ: ದೆಹಲಿ, ಎನ್​ಸಿಆರ್​ನಲ್ಲಿ ವಾಯು ಗುಣಮಟ್ಟ ಹದಗೆಡುತ್ತಿರುವ ಹಿನ್ನೆಲೆಯಲ್ಲಿ ಗ್ರೇಡೆಡ್​ ರೆಸ್ಪಾನ್ಸ್​ ಆ್ಯಕ್ಷನ್​ ಪ್ಲಾನ್​ (ಜಿಆರ್​ಎಪಿ) 4ನೇ ಹಂತ ಜಾರಿಗೆ ತರಲು ವಾಯುಗುಣಮಟ್ಟ ನಿರ್ವಹಣಾ ಆಯೋಗ (ಸಿಎಕ್ಯೂಎಂ) ಕೆಲವು ಕ್ರಮಕ್ಕೆ ಮುಂದಾಗಿದೆ. ಅದರನುಸಾರ, ಟ್ರಕ್​ಗಳ ಪ್ರವೇಶ ನಿರ್ಬಂಧಿಸಲಾಗಿದ್ದು, ಜನರಿಗೆ ಮನೆಯಿಂದಲೇ ಕೆಲಸ ಮಾಡುವಂತೆ ಸೂಚಿಸಿದೆ.

ನಾಲ್ಕನೇ ಹಂತ ಅತಿ ಹೆಚ್ಚು ವಾಯು ಮಾಲಿನ್ಯಕ್ಕೆ ಒಳಗಾಗಿದ್ದು ಈ ಸಂಬಂಧ ಎಚ್ಚರಿಕೆ ನೀಡಲಾಗಿದೆ. ಜಿಆರ್​ಎಪಿಯ ನಾಲ್ಕನೇ ಹಂತದ ಪ್ರಕಾರ, 8 ಅಂಶಗಳ ಕ್ರಿಯಾ ಯೋಜನೆಯು ಎನ್​ಸಿಆರ್​ನಲ್ಲಿ ತಕ್ಷಣದಿಂದಲೇ ಜಾರಿಗೆ ಬರಲಿದೆ. ಇದರಡಿ ದೆಹಲಿಗೆ ಟ್ರಕ್​ಗಳ ಪ್ರವೇಶವನ್ನು ಸಂಪೂರ್ಣ ನಿರ್ಬಂಧಿಸಲಾಗಿದೆ. ಆದಾಗ್ಯೂ ಕೆಲವು ಅಗತ್ಯ ವಸ್ತು, ಸೇವೆಗಳನ್ನು ನೀಡುವ ವಾಹನ, ಎಲ್​ಎನ್​ಜಿ, ಸಿಎನ್​ಜಿ ಮತ್ತು ಎಲೆಕ್ಟ್ರಿಕ್​ ಟ್ರಕ್​ಗಳಿಗೆ ದೆಹಲಿ ಪ್ರವೇಶಕ್ಕೆ ಅನುಮತಿ ಇದೆ. ದೆಹಲಿ ರಿಜಿಸ್ಟರ್​​ನ ಡೀಸೆಲ್-ಚಾಲಿತ ಮಧ್ಯಮ ಸರಕುಗಳ ವಾಹನಗಳು (ಎಂಜಿವಿ) ಭಾರಿ ಸರಕುಗಳ ವಾಹನಗಳು (ಎಚ್​ಜಿವಿ) ಅಗತ್ಯ ಸರಕು-ಸೇವೆ ನೀಡುವ ವಾಹನಗಳಿಗೂ ಪ್ರವೇಶ ನಿರ್ಬಂಧವಿದೆ.

ಆನ್​ಲೈನ್​ ಕಲಿಕೆ:ವಾಯು ಮಾಲಿನ್ಯ ಹಿನ್ನೆಲೆಯಲ್ಲಿ ಮಕ್ಕಳ ಆರೋಗ್ಯ ದೃಷ್ಟಿಯನ್ನು ಗಮನದಲ್ಲಿರಿಸಿಕೊಂಡು ರಾಜ್ಯ ಸರ್ಕಾರ, 6 ರಿಂದ 9 ಮತ್ತು 11ನೇ ತರಗತಿವರೆಗಿನ ಮಕ್ಕಳು ಶಾಲೆಗೆ ಹಾಜರಾಗುವ ಬದಲಾಗಿ ಆನ್​ಲೈನ್​ ಮೂಲಕ ತರಗತಿ ನಡೆಸುವ ಕುರಿತು ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ. ದೆಹಲಿ, ಎನ್​ಸಿಆರ್​ ರಾಜ್ಯ ಸರ್ಕಾರಗಳು ಸಾರ್ವಜನಿಕ, ಮುನ್ಸಿಪಲ್​ ಮತ್ತು ಖಾಸಗಿ ಕಚೇರಿಗಳಲ್ಲಿ ಶೇ 50ರಷ್ಟು ಉದ್ಯೋಗಿಗಳನ್ನು ಮಾತ್ರ ಬರುವಂತೆ ತಿಳಿಸಿ, ಉಳಿದ ಉದ್ಯೋಗಿಗಳಿಗೆ ವರ್ಕ್​ ಫ್ರಂ ನೀಡುವಂತೆ ಕೋರಿದೆ. ಇದರೊಂದಿಗೆ ಕಾಲೇಜು, ಶಿಕ್ಷ ಸಂಸ್ಥೆಗಳು, ವಾಣಿಜ್ಯ ಚಟುವಟಿಕೆಗಳನ್ನು ಬಂದ್​ ಮಾಡುವ ಮತ್ತು ಸಮ ಮತ್ತು ಬೆಸ ಸಂಖ್ಯೆಯಲ್ಲಿ ವಾಹನ ಸೇವೆಗೆ ಅವಕಾಶ ನೀಡುವ ಹಲವು ಕ್ರಮವನ್ನು ಕೂಡ ರಾಜ್ಯ ಸರ್ಕಾರ ಪರಿಗಣಿಸಲಿದೆ. (ಐಎಎನ್​ಎಸ್​)

ಇದನ್ನೂ ಓದಿ:ಜಗತ್ತಿನ ಬೇರೆ ದೇಶಗಳಿಂದ ಭಾರತೀಯರಿಗೆ ಹೆಚ್ಚು ಮಾರಣಾಂತಿಕವಾಗುತ್ತಿರುವ ವಾಯು ಮಾಲಿನ್ಯ; ಅಧ್ಯಯನ

ABOUT THE AUTHOR

...view details