ನವದೆಹಲಿ: ದೀಪಾವಳಿಗೆ ಮುನ್ನವೇ ರಾಷ್ಟ್ರ ರಾಜಧಾನಿಯಲ್ಲಿ ವಾಯು ಗುಣಮಟ್ಟ ಕಳಪೆ ವರ್ಗಕ್ಕೆ ಕುಸಿದಿದೆ. ನಗರದ ವಾಯು ಗುಣಮಟ್ಟ ಸೂಚ್ಯಂಕ 343 ತಲುಪಿದೆ ಎಂದು ವಾಯು ಗುಣಮಟ್ಟ ಮತ್ತು ಹವಾಮಾನ ವ್ಯವಸ್ಥೆಯ ಮಾಹಿತಿ ವರದಿ ನೀಡಿದೆ. ನಗರದ ದೀರ್ಪುರ್ ಎಂಬಲ್ಲಿ ಎಕ್ಯೂಐ 369 ಇದ್ದು, ಇದು ಅತ್ಯಂತ ಕಳಪೆ ವರ್ಗವಾಗಿದೆ.
ಪುಸಾ ಮತ್ತು ದೆಹಲಿ ವಿಶ್ವವಿದ್ಯಾಲಯ ಪ್ರದೇಶದಲ್ಲಿ ಎಕ್ಯೂಐ ಪಿಎಂ 2.6 ಮಟ್ಟ ತಲುಪಿದ್ದು, ಎರಡೂ ಕಳಪೆ ವರ್ಗದಲ್ಲಿದೆ. ಲೋದಿ ರಸ್ತೆಯ ವಾಯುಗುಣಮಟ್ಟ ಸೂಚ್ಯಂಕ ಪಿಎಂ 2.5 ಆಗಿದ್ದು 338 ತಲುಪುವ ಮೂಲಕ ಇದೂ ಕೂಡ ಕಳಪೆ ಮಟ್ಟದಲ್ಲೇ ಇದೆ. ಪಿಎಂ 10 ರಸ್ತೆ ಕೂಡ 253ದಲ್ಲಿದೆ.
ಐಐಟಿ ದೆಹಲಿಯಲ್ಲಿ ಪಿಎಂ 2.5 ಇದೆ. ಮಥುರಾ ರಸ್ತೆಯಲ್ಲಿರುವ ವಾಯು ಗುಣಮಟ್ಟ ಸೂಚ್ಯಂಕ ಅತ್ಯಂತ ಕಳಪೆಯಾಗಿದೆ. ನಗರದ ಗಾಳಿ ಗುಣಮಟ್ಟವು ಅತ್ಯಂತ ಕಳಪೆ ವರ್ಗದಡಿಯಲ್ಲಿ ಮತ್ತಷ್ಟು ಹದಗೆಡಲಿದೆ ಎಂದು ಎಸ್ಎಎಫ್ಎಆರ್ ಎಚ್ಚರಿಸಿದೆ.
ಮಕ್ಕಳು, ವಯಸ್ಕರಲ್ಲಿ ಶ್ವಾಸಕೋಶ ಸಮಸ್ಯೆ: ದೆಹಲಿಯಲ್ಲಿ ಹದಗೆಡುತ್ತಿರುವ ವಾಯು ಮಾಲಿನ್ಯವು ಮಕ್ಕಳು ಮತ್ತು ವಯಸ್ಕರಲ್ಲಿ ಅಸ್ತಮಾ ಮತ್ತು ಶ್ವಾಸಕೋಶದ ಸಮಸ್ಯೆಗೆ ಕಾರಣವಾಗಲಿದೆ ಎಂದು ವೈದ್ಯರು ತಿಳಿಸಿದ್ದಾರೆ. ಗಾಳಿಯ ಗುಣಮಟ್ಟ ಮತ್ತು ಹವಾಮಾನ ಮುನ್ಸೂಚನೆ ಮತ್ತು ಸಂಶೋಧನೆಯ ವ್ಯವಸ್ಥೆ (ಎಸ್ಎಎಫ್ಎಆರ್) ದೆಹಲಿಯ ಒಟ್ಟಾರೆ ವಾಯುಗುಣಮಟ್ಟ ಸೂಚ್ಯಂಕ (ಎಕ್ಯೂಐ) ವರ್ಗದಲ್ಲಿ ಕಳಪೆಯಾಗಿದ್ದು, ಇಂದು 336ಕ್ಕೆ ತಲುಪಿದೆ. ಕಳೆದ ನಾಲ್ಕು ದಿನಗಳಿಂದ ಹವಾಗುಣವಿದೆ. ಕಳಪೆ ಗಾಳಿಯಿಂದಾಗಿ ರೋಗಿಗಳ ಸಂಖ್ಯೆಯಲ್ಲಿ ಗಮನಾರ್ಹ ಏರಿಕೆ ಕಂಡಿದೆ. ಉಸಿರಾಟ ಸಮಸ್ಯೆ ಉಲ್ಬಣಗೊಂಡು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ ಎಂದು ಶಾಲಿಮರ್ ಬಾಗ್ನ ಫೋರ್ಟಿಸ್ ಆಸ್ಪತ್ರೆ ವೈದ್ಯ ವಿಕಾಸ್ ಮೌರ್ಯ ತಿಳಿಸಿದರು.