ಕರ್ನಾಟಕ

karnataka

ETV Bharat / sukhibhava

ಅ.23 ರಂದು ಅಯೋಧ್ಯೆ ದೀಪೋತ್ಸವ: ಗಿನ್ನೆಸ್ ದಾಖಲೆಗಾಗಿ ಬೆಳಗಲಿವೆ 14.50 ಲಕ್ಷ ಹಣತೆ - ಅಯೋಧ್ಯೆ ಹಬ್ಬ

ಅಯೋಧ್ಯೆಯಲ್ಲಿ ಅಕ್ಟೋಬರ್ 23 ರಂದು ದೀಪೋತ್ಸವ. ಗಿನ್ನೆಸ್ ರೆಕಾರ್ಡ್ ಮಾಡುವತ್ತ ಜಿಲ್ಲಾಡಳಿತದ ಚಿತ್ತ. 14.50 ಲಕ್ಷ ಮಣ್ಣಿನ ಹಣತೆ ಬೆಳಗಿಸಲು ಸಿದ್ಧತೆ.

ಅಯೋಧ್ಯೆ ದೀಪೋತ್ಸವ
Deepotsav at Ayodhya

By

Published : Aug 19, 2022, 4:36 PM IST

ಅಯೋಧ್ಯೆ (ಉತ್ತರ ಪ್ರದೇಶ): ಬರುವ ಅಕ್ಟೋಬರ್ 23 ರಂದು ಅಯೋಧ್ಯೆಯಲ್ಲಿ 6ನೇ ದೀಪೋತ್ಸವ ಬಹಳ ಅದ್ದೂರಿಯಾಗಿ ನಡೆಯಲಿದೆ. ದೀಪೋತ್ಸವದಲ್ಲಿ 14.50 ಲಕ್ಷ ಮಣ್ಣಿನ ಹಣತೆಗಳನ್ನು ಬೆಳಗಿಸಲಾಗುವುದು. 14.50 ಲಕ್ಷ ಹಣತೆಗಳನ್ನು ಏಕಕಾಲದಲ್ಲಿ ಬೆಳಗಿಸುವ ಮೂಲಕ ಅತ್ಯಧಿಕ ಹಣತೆಗಳನ್ನು ಬೆಳಗಿಸಿದ ಗಿನ್ನೆಸ್ ದಾಖಲೆ ಮಾಡಲು ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.

ಉತ್ತರ ಪ್ರದೇಶಸ ಫೈಜಾಬಾದ್ ಜಿಲ್ಲೆಯಲ್ಲಿರುವ ಅಯೋಧ್ಯೆಯಲ್ಲಿ ದೀಪೋತ್ಸವಕ್ಕಾಗಿ ಸಿದ್ಧತೆ ಜೋರಾಗಿವೆ. ಈ ಸಂಬಂಧ ಗುರುವಾರ ವಿಭಾಗೀಯ ಆಯುಕ್ತ ನವದೀಪ್ ರಿನ್ವಾ ಅವರ ಅಧ್ಯಕ್ಷತೆಯಲ್ಲಿ ವಿಭಾಗೀಯ ಆಯುಕ್ತರ ಕಚೇರಿ ಸಭಾಂಗಣದಲ್ಲಿ ಸಭೆ ನಡೆಯಿತು.

2017ರಲ್ಲಿ ದೀಪೋತ್ಸವ ಪ್ರಾರಂಭವಾಗಿತ್ತು. ಈ ವರ್ಷ ಕೋವಿಡ್ -19 ಪ್ರಕರಣಗಳಲ್ಲಿ ಇಳಿಮುಖವಾದ ನಂತರ ಭಕ್ತಾದಿಗಳ ದಟ್ಟಣೆಯು ಅಧಿಕವಾಗಿರಲಿದೆ ಎಂದು ನಿರೀಕ್ಷಿಸಲಾಗಿದೆ. ಕೋವಿಡ್​-19 ಪರಿಣಾಮ ಕಡಿಮೆಯಾಗಿರುವುದರಿಂದ ದೀಪೋತ್ಸವದಲ್ಲಿ ಭಾಗವಹಿಸುವವರ ಸಂಖ್ಯೆ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಹೆಚ್ಚಾಗಿರಬಹುದು ಎಂದು ನಿರೀಕ್ಷಿಸಲಾಗಿದೆ ಎಂದು ಆಡಳಿತದ ಅಧಿಕಾರಿಗಳೊಂದಿಗೆ ಸಭೆಯ ಅಧ್ಯಕ್ಷತೆ ವಹಿಸಿದ್ದ ವಿಭಾಗೀಯ ಆಯುಕ್ತ ನವದೀಪ್ ರಿನ್ವಾ ಹೇಳಿದರು.

ಸೆಪ್ಟೆಂಬರ್ 30ರೊಳಗೆ ಬಾಕಿ ಉಳಿದಿರುವ ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ಅಲ್ಲದೆ, ಉತ್ಸವದ ವ್ಯವಸ್ಥೆ ಮಾಡುವಾಗ ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳ ನಡುವೆ ಸಮನ್ವಯತೆ ಇರಬೇಕು ಎಂದು ಅವರು ಸೂಚನೆ ನೀಡಿದರು.

ABOUT THE AUTHOR

...view details