ಬೆಂಗಳೂರು:ಕರ್ನಾಟಕದಲ್ಲಿ ಒಟ್ಟಾರೆ ಫಲವತ್ತತೆ ದರ ಕುಸಿತ ಕಂಡಿದ್ದು, ಇದು ಕಳವಳಕಾರಿಯಾಗಿದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆರ್ಥಿಕ ಶ್ರೀಮಂತಿಕೆ ಸಂಬಂಧಿಸಿದ ಜೀವನ ಶೈಲಿ ಆಯ್ಕೆಗಳು ಕಡಿಮೆ ಫಲವತ್ತತೆ ಮೇಲೆ ಪರಿಣಾಮ ಬೀರುವ ಅಂಶವಾಗಿದೆ. ಉನ್ನತ ಶಿಕ್ಷಣ ಮತ್ತು ವೃತ್ತಿಪರ ವೃತ್ತಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ವಿಳಂಬ ಮದುವೆ ಮತ್ತು ಉನ್ನತ ಶಿಕ್ಷಣ ಮಟ್ಟವೂ ಕೂಡ ಫಲವತ್ತತೆ ಇಳಿಕೆಗೆ ಕೊಡುಗೆ ನೀಡುತ್ತಿದೆ. ಇದರ ಜೊತೆಗೆ ಸ್ಥೂಲಕಾಯ ಮತ್ತು ಒತ್ತಡದ ಅಂಶವೂ ಸೇರಿದೆ ಎಂದು ತಿಳಿಸಿದರು.
ಹೀಗಿದೆ ಅಂಕಿ ಅಂಶ: ಕರ್ನಾಟಕದಲ್ಲಿ ಒಟ್ಟಾರೆ ಫಲವತ್ತತೆ ದರ ಇಳಿಕೆ ಕಾಣುತ್ತಿದೆ. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (ಎನ್ಎಫ್ಎಚ್ಎಸ್) ವರದಿ ಪ್ರಕಾರ, 1981ರಲ್ಲಿ ಜನನ ದರ 3.6 ಇದ್ದರೆ, 2020ರಲ್ಲಿ ಜನನ ದರ 1.7 ರಷ್ಟಿದೆ. 2023ರಲ್ಲಿ ಈ ಜನನ ದರ ಇನ್ನಷ್ಟು ಕಡಿಮೆ ಆಗಿದ್ದು, ಇದು 1.5ರಷ್ಟಾಗಿದೆ. ಈ ಅಂಕಿ- ಅಂಶ ಈಗ ಕಳವಳಕ್ಕೆ ಕಾರಣವಾಗಿದೆ.
ಇನ್ನು ಈ ಜನನ ದರ ಜಿಲ್ಲೆಯಿಂದ ಜಿಲ್ಲೆಗೆ ವಿಭಿನ್ನವಾಗಿದೆ. ಬೆಂಗಳೂರಿನಲ್ಲಿ 1.7 ಇದ್ದರೆ, ಉಡುಪಿಯಲ್ಲಿ ದರ 1. 2, ಹಾಸನ, ಮಂಡ್ಯ, ಚಿಕ್ಕಮಗಳೂರು 1.4 ಮತ್ತು ಕೊಡಗು 1.5, ಕೊಡಗಿನಲ್ಲಿ 2.7 ಮತ್ತು ವಿಜಯಪುರದಲ್ಲಿ 2.0 ರಷ್ಟಿದೆ.
ಫಲವತ್ತತೆ ದರ ಕುಗ್ಗುವಿಕೆಯಲ್ಲಿ ಆಧುನಿಕ ಗರ್ಭ ನಿರೋಧಕಗಳ ಬಳಕೆ, ವಿಳಂಬ ಮದುವೆ, ವೀರ್ಯಾಣುಗಳ ಗುಣಮಟ್ಟ ಕಡಿಮೆ ಮತ್ತು ತಾಯ್ತನದ ಅವಧಿ ವಿಳಂಬಗಳು ಪ್ರಭಾವ ಬೀರುತ್ತಿವೆ ಎಂದು ಅಪೋಲೋ ಫರ್ಟಿಲಿಪಿ ಬ್ರೂಕೆಫೀಲ್ಡ್ನ ಫರ್ಟಿಲಿಟಿ ಮತ್ತು ಐವಿಎಫ್ ಹಿರಿಯ ಕನ್ಸಲ್ಟಂಟ್ ಡಾ ಸಂಗೀತ ಆನಂದ್ ಹೇಳಿದ್ದಾರೆ.
ಸ್ಥಿತ ಜನಸಂಖ್ಯೆಗೆ ಸಂತಾನೋತ್ಪತ್ತಿಯ ದರ ಕನಿಷ್ಟ 2.1ರಷ್ಟಿರಬೇಕಿದೆ. ಆರು ದಂಪತಿಗಳಲ್ಲಿ ಒಬ್ಬರು ತಮ್ಮ ಜೀವನ ಶೈಲಿ ಮತ್ತು ವೃತ್ತಿ ಆಯ್ಕೆಯಿಂದಾಗಿ ಫಲವತ್ತತೆಯ ಸಮಸ್ಯೆ ಎದುರಿಸುತ್ತಿದ್ದಾರೆ. ಜಪಾನ್ನಲ್ಲಿ 60 ವಯೋಮಿತಿ ದಾಟಿದ ಜನಸಂಖ್ಯೆ ಶೇ 38ರಷ್ಟಿದೆ. ಇದೇ ರೀತಿಯ ಸವಾಲು ಬೆಂಗಳೂರಿನಲ್ಲಿ ಹೆಚ್ಚಲಿದೆ. ಭವಿಷ್ಯದಲ್ಲಿ ಇಲ್ಲಿ ಕೂಡ ಹಿರಿಯ ನಾಗರಿಕರ ಸಂಖ್ಯೆ ಹೆಚ್ಚಾಗುವ ನಿರೀಕ್ಷೆ ಹೆಚ್ಚಿದೆ ಎಂದರು.
ಮಹಿಳೆಯರು ತಾಯ್ತನದ ಅವಧಿಯ ಮುಕ್ತಾಯ ಹಂತದಲ್ಲಿ ಮದುವೆ ಆಗಿ ತಡವಾಗಿ ಮಗು ಮಾಡಿಕೊಳ್ಳಲು ಮುಂದಾಗುತ್ತಾರೆ ಎಂದು ಡಾ ಸಂಗೀತಾ ತಿಳಿಸಿದರು.
ಜೀವನಶೈಲಿಯ ಬದಲಾವಣೆ ಪ್ರಮುಖ ಕಾರಣ: ಬೆಂಗಳೂರಿನಂತಹ ನಗರದಲ್ಲಿ ಸಂತಾನೋತ್ಪತ್ತಿ ದರ ಕಡಿಮೆಯಾಗುತ್ತಿದೆ. ನಗರೀಕರಣವೂ ಜೀವನಶೈಲಿ ಬದಲಾಯಿಸುತ್ತಿದೆ. ಶಿಕ್ಷಣದ ಲಭ್ಯತೆ ಮತ್ತು ವೃತ್ತಿಯ ಅವಕಾಶವೂ ಹೆಚ್ಚುತ್ತಿದೆ. ಇದು ಕುಟುಂಬ ಯೋಜನೆ ಬದಲಾವಣೆಗೆ ಕಾರಣವಾಗುತ್ತದೆ. ಆರ್ಥಿಕ ಒತ್ತಡ, ಕಡಿಮೆ ವಾಸಿಸುವ ಸ್ಥಳ, ಉತ್ತಮ ಗುಣಮಟ್ಟದ ಜೀವನ ನಡೆಸುವ ಉದ್ದೇಶದಿಂದಾಗಿ ದಂಪತಿಗಳು ಸಣ್ಣ ಕುಟುಂಬವನ್ನು ಆಯ್ಕೆ ಮಾಡುತ್ತಿದ್ದಾರೆ ಎಂದು ಬನ್ನೆರುಘಟ್ಟದ ಫೋರ್ಟಿಸ್ ಆಸ್ಪತ್ರೆಯ ಸ್ತ್ರೀರೋಗ ತಜ್ಞರಾದ ಡಾ ಮನಿಶಾ ಸಿಂಗ್ ತಿಳಿಸಿದ್ದಾರೆ.
ಈ ಆವೃತ್ತಿಯು ಆರೋಗ್ಯ ವ್ಯವಸ್ಥೆ, ಹಿರಿಯ ನಾಗರಿಕರ ಆರೈಕೆ ಮತ್ತು ಕಾರ್ಮಿಕರ ಕೊರತೆಗಳ ಹೊರೆ ಹೆಚ್ಚಿಸುತ್ತದೆ. ಸರ್ಕಾರ ಮತ್ತು ನಿಯಮಪಾಲಕರು ಕುಟುಂಬ ಸ್ನೇಹಿ ನೀತಿಗಳು, ವರ್ಕಿಂಗ್ ಪೋಷಕರಿಗೆ ಬೆಂಬಲ ಮತ್ತು ಆರೋಗ್ಯ ಸೇವೆ ಮೂಲ ಸೌಲಭ್ಯ ಸುಧಾರಣೆಯಂತಹ ನೀತಿಗಳ ಮೂಲಕ ಜನಸಂಖ್ಯಾ ಬದಲಾವಣೆಗಳನ್ನು ಪರಿಹರಿಸಬೇಕಿದೆ ಎಂದು ಡಾ ಮನೀಶಾ ಸಿಂಗ್ ತಿಳಿಸಿದರು
ದಂಪತಿಗಳಲ್ಲಿ ಹೆಚ್ಚುತ್ತಿರುವ ಸಮಸ್ಯೆ: ಬೆಂಗಳೂರಿನ ಕೋರಮಂಗಲದ ನೋವಾ ಐವಿಎಫ್ ಫರ್ಟಿಲಿಟಿ ಕನ್ಸಲಟೆಂಟ್ ಡಾ ಸಂತೋಷ್ ಗುಪ್ತಾ ಮಾತನಾಡಿ, ಶೇ 15ರಷ್ಟು ದಂಪತಿಗಳಲ್ಲಿ ಫಲವತ್ತತೆ ಸಮಸ್ಯೆ ಸಾಮಾನ್ಯವಾಗಿದೆ. ಫಲವತ್ತತೆ ಕೊರತೆ ಸಮಸ್ಯೆ ಹೆಚ್ಚುತ್ತಿದೆ. ಇದರಲ್ಲಿ ವಯಸ್ಸು ಪ್ರಮುಖ ಅಂಶವಾಗಿದೆ, ಸಾಮಾಜಿಕ ಸಾಂಸ್ಕೃತಿಕ ಮೇಲೆ ಇದು ಭಾರೀ ಪರಿಣಾಮ ಬೀರುತ್ತದೆ. ತಡವಾಗಿ ಮದುವೆ ಮತ್ತು ಪೋಷಕತ್ವವೂ ಹೆಚ್ಚುತ್ತಿದೆ. ಫಲವತ್ತತ್ತೆ ವಿಚಾರದಲ್ಲಿ ಮಹಿಳೆಯ ವಯಸ್ಸು ಸೂಕ್ಷ್ಮತೆ ಅಂಶವನ್ನು ಹೊಂದಿದೆ.
ಮಹಿಳೆಯರಲ್ಲಿ 32ವರ್ಷದ ಬಳಿಕ ಅವರ ಅಂಡಾಣುಗಳ ಸಂಗ್ರಹಣೆ ಕುಸಿಯ ತೊಡಗುತ್ತದೆ. ಇದು ಮಹಿಳೆಯರಿಂದ ಮಹಿಳೆಯರಿಗೆ ವ್ಯತ್ಯಾಸವಾಗಲಿದೆ ಎಂದರು ಸ್ಥೂಲಕಾಯವೂ ಹಾರ್ಮೋನ್ಗಳ ವ್ಯತ್ಯಾಸಕ್ಕೆ ಕಾರಣವಾಗಿ, ಫಲವತ್ತತ್ತೆಯನ್ನು ಕುಗ್ಗಿಸುತ್ತದೆ. ಜಢ ಜೀವನಶೈಲಿ, ಹೆಚ್ಚಿನ ಟೆಲಿವಿಷನ್ ವೀಕ್ಷಣೆ, ಜಂಕ್ ಫುಡ್ ಸೇವನೆ ಮತ್ತು ನಿದ್ರೆ ಕೊರತೆ, ಪುರುಷರು ಮತ್ತು ಮಹಿಳೆಯರಲ್ಲಿ ಹಾರ್ಮೋನ್ಗಳ ಅಸಮತೋಲನಕ್ಕೆ ಕಾರಣವಾದ ಅಂಶವಾಗಿದೆ ಎಂದು ಡಾ ಸಂತೋಷ್ ಗುಪ್ತಾ ವಿವರಿಸಿದ್ದಾರೆ.
ಜೀವನಶೈಲಿಯಲ್ಲಿ ಒತ್ತಡ ಎಂಬುದು ಈ ವಿಚಾರದಲ್ಲಿ ಬಹು ದೊಡ್ಡ ಅಂಶವಾಗಿದ್ದು, ಇದು ಅನೇಕ ಸಮಸ್ಯೆಗೆ ಕಾರಣವಾಗುತ್ತಿದೆ. ಕೆಲವು ವೇಳೆ ಒತ್ತಡ ಮತ್ತು ಆತಂಕವೂ ದಂಪತಿಗಳಲ್ಲಿ ಸಾಮಾನ್ಯ ಲೈಂಗಿಕ ಕ್ರಿಯೆಗೆ ಅಡ್ಡಿ ಮಾಡುತ್ತದೆ ಎಂದು ಅವರು ಹೇಳಿದ್ದಾರೆ. ನವೆಂಬರ್ 2 ಅನ್ನು ವಿಶ್ವ ಫಲವತ್ತತೆಯ ದಿನವಾಗಿ ವಿಶ್ವದಾದ್ಯಂತ ಸಂಭ್ರಮಿಸಲಾಗುತ್ತಿದೆ. ಇದರ ಗುರಿಯೊಂದಿಗೆ ಜಾಗೃತಿ ಮೂಡಿಸುವುದು ಇದರ ಕುರಿತು ತಪ್ಪು ಕಲ್ಪನೆ ಹೋಗಲಾಡಿಸುವುದು ಅವಶ್ಯವಾಗಿದೆ. (ಐಎಎನ್ಎಸ್)
ಇದನ್ನೂ ಓದಿ:ವಿಶ್ವದ ಪ್ರತಿ 6 ಜನರಲ್ಲಿ ಒಬ್ಬರಿಗೆ ಬಂಜೆತನ ಸಮಸ್ಯೆ: WHO ವರದಿ