ಕರ್ನಾಟಕ

karnataka

ETV Bharat / sukhibhava

ಕಡಿಮೆ - ಮಧ್ಯಮ ಆದಾಯದ ದೇಶಗಳಲ್ಲಿ ಯಕೃತ್​ ರೋಗಿಗಳ ಸಾವಿನ ಅಪಾಯ ದುಪ್ಪಟ್ಟು! - ಯಕೃತ್ತಿನ ಕಾಯಿಲೆಯ ರೋಗಿಗಳ

ಕಡಿಮೆ ಮಧ್ಯ ಆದಾಯದ ದೇಶಗಳಲ್ಲಿ ಸೂಕ್ತ ಪತ್ತೆ, ಚಿಕಿತ್ಸೆ, ಥೆರಪಿ, ಲಿವರ್​ ಟ್ರಾನ್ಸ್​ಪ್ಲಾಂಟ್​ ಸೌಲಭ್ಯ ಹೆಚ್ಚಾಗಿ ಲಭ್ಯವಿಲ್ಲದಿರುವ ಅಂಶವೂ ಮುಖ್ಯವಾಗಿದೆ.

Death risk from liver disease twice as high in lower-income countries: Lancet study
Death risk from liver disease twice as high in lower-income countries: Lancet study

By

Published : May 25, 2023, 3:22 PM IST

ನವದೆಹಲಿ: ಅಧಿಕ ಆದಾಯದ ದೇಶಗಳಿಗೆ ಹೋಲಿಕೆ ಮಾಡಿದಾಗ ಕಡಿಮೆ ಅಥವಾ ಕಡಿಮೆ - ಮಧ್ಯಮ ಆದಾಯದ ದೇಶಗಳಲ್ಲಿ ಆಸ್ಪತ್ರೆಗೆ ದಾಖಲಾದ ಯಕೃತ್ತಿನ ಕಾಯಿಲೆಯ ರೋಗಿಗಳ ಸಾವಿನ ಅಪಾಯ ಹೆಚ್ಚಿದೆ ಎಂದು ಹೊಸ ಸಂಶೋಧನೆ ತಿಳಿಸಿದೆ. ಭಾರತ ಸೇರಿದಂತೆ 25 ದೇಶಗಳ ದತ್ತಾಂಶಗಳನ್ನು ವಿಶ್ಲೇಷಿಸಿ ಈ ಅಧ್ಯಯನ ನಡೆಸಲಾಗಿದೆ. ಲ್ಯಾನ್ಸೆಟ್​ ಗ್ಯಾಸ್ಟೊ ಎಟರ್ನೊಲಾಜಿ ಮತ್ತು ಹೆಪಟೊಲೊಜಿ ಜರ್ನಲ್​ನಲ್ಲಿ ಈ ಅಧ್ಯಯನ ಪ್ರಕಟಿಸಲಾಗಿದೆ. ಕಡಿಮೆ ಆಧಾಯದ ದೇಶಗಳಲ್ಲಿ ಈ ರೋಗದ ಪತ್ತೆ ಮತ್ತು ಚಿಕಿತ್ಸೆಗಳ ಸೌಲಭ್ಯ ನಿಗದಿತವಾಗಿದ್ದು, ಈ ಹಿನ್ನಲೆ ಅಪಾಯ ಹೆಚ್ಚಿದೆ ಎಂದು ತಿಳಿಸಿದೆ.

ವ್ಯಕ್ತಿಯ ಯಕೃತ್​ನಲ್ಲಿ ದೀರ್ಘಕಾಲದ ಉರಿಯೂತ ಅನುಭವಿಸಿದಾಗ ಯಕೃತ್ತಿನ ರೋಗ ಸಂಭವಿಸುತ್ತದೆ. ಅನೇಕ ವೇಳೆ ಸ್ಥೂಲಕಾಯ, ಅಧಿಕ ಆಲ್ಕೋಹಾಲ್​ ಬಳಕೆ, ಹೆಪಟೈಟಿಸ್​ ವೈರಸ್​ ಅಥವಾ ಇದರ ಸಂಯೋಜನೆಗಳು ಯಕೃತ್ತಿನ ರೋಗಕ್ಕೆ ಕಾರಣವಾಗುತ್ತದೆ. ಈ ಊರಿಯುತಗಳು ಯಕೃತ್​ ಸಿರೋಸಿಸ್​​ಗೆ ಕಾರಣವಾಗುತ್ತದೆ. ಈ ವೇಳೆ, ಇದು ಯಕೃತ್​ ಕಾರ್ಯಾಚರಣೆಗೆ ಅಡ್ಡಿ ಮಾಡಿ, ಕಡೆಗೆ ಯಕೃತ್​ ವೈಫಲ್ಯ ಉಂಟಾಗುತ್ತದೆ.

2 ಮಿಲಿಯನ್​ಗೂ ಅಧಿಕ ಸಾವು: ಜಗತ್ತಿನ ವಿವಿಧ ರೋಗಿಗಳ ಸಾವಿನ ಸಂಖ್ಯೆಯಲ್ಲಿ ಯಕೃತ್​ ರೋಗವೂ ಒಂದಾಗಿದೆ. ಪ್ರತಿ ವರ್ಷ ಈ ರೋಗದಿಂದ 2 ಮಿಲಿಯನ್​ ಜನರು ಸಾವನ್ನಪ್ಪುತ್ತಿದ್ದಾರೆ. ಭವಿಷ್ಯದಲ್ಲಿ ಇದರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಸಂಶೋಧನೆ ತಿಳಿಸಿದೆ. ದೇಹದ ಕಾರ್ಯಾಚರಣೆ ಮಾಡಲು ಅನೇಕ ಅಂಶಗಳಿಂದ ಅಂಗಾಂಗಳ ನಡುವೆ ಸಂಪರ್ಕ ಕಲ್ಪಿಸುವಲ್ಲಿ ಯಕೃತ್​ ಪಾತ್ರ ಪ್ರಮುಖವಾಗಿದೆ ಎಂದು ಅಮೆರಿಕದ ವರ್ಜಿನಿಯಾ ಕಾಮನ್​ವೆಲ್ತ್​​ ಯುನಿವರ್ಸಿಟಿ ಸ್ಕೂಲ್​ ಆಫ್​ ಮೆಡಿಸಿನ್​ ಪ್ರೋ ಜಸ್ಮೋಹನ್​ ಬಜಾಜ್​ ತಿಳಿಸಿದ್ದಾರೆ.

ಯಕೃತ್​​ ಮೇಲೆ ಉಂಟಾಗುವ ಪರಿಣಾಮಗಳು ಇತರ ಅಂಗಾಂಗ ಮತ್ತು ದೇಹದ ಕಾರ್ಯ ನಿರ್ವಹಣೆ ವ್ಯವಸ್ಥೆ ಮೇಲೆ ಪ್ರಭಾವ ಬೀರುತ್ತದೆ. ಇದು ದೇಹದ ರೋಗ ನಿರೋಧಕ ವ್ಯವಸ್ಥೆ, ಹೃದಯ ಸಮಸ್ಯೆ, ಮೆದುಳು, ಕರುಳು ಮತ್ತು ಕಿಡ್ನಿಯ ಮೇಲೂ ಪರಿಣಾಮ ಬೀರುತ್ತದೆ ಎಂದಿದ್ದಾರೆ.

ಬಜಾಜ್​ ಮತ್ತು ನವದೆಹಲಿಯ ಇನ್ಸಿಟಿ​​ಟ್ಯೂಟ್​​ ಫಾರ್​ ಲಿವರ್​ ಅಂಡ್​ ಬೈಲರಿ ಸೈನ್ಸ್​ನ ಪ್ರೋ ಅಶೋಕ್​ ಕೆ ಚೌಧರಿ ಮತ್ತು ಅವರ ಸಹೋದ್ಯೋಗಿಗಳು, ಸಿರೋಸಿಸ್‌ನಿಂದ ಸಾವಿನ ಅಪಾಯವು ದೇಶಗಳಲ್ಲಿ ಹೇಗೆ ಬದಲಾಗುತ್ತದೆ. ಇದರ ಹಿಂದೆ ಯಾವ ಆಧಾರವಾಗಿರುವ ಅಂಶವಿದೆ ಎಂಬುದರ ಕುರಿತು ತನಿಖೆ ನಡೆಸಿದ್ದಾರೆ.

25 ದೇಶಗಳ ಅಧ್ಯಯನ: ಜಗತ್ತಿನ ಉತ್ತರ ಅಥವಾ ನಿರ್ಧಿಷ್ಟ ಪ್ರದೇಶಗಳ ಮೇಲೆ ಬಹುತೇಕ ಸಿರೋಸಿಸ್​ ಸಂಶೋಧನೆ ಗಮನ ಕೇಂದ್ರಿಕರಿಸಿದೆ. ಈ ವೇಳೆ ಸಾರ್ವಜನಿಕ ಆರೋಗ್ಯ ಮೂಲಗಳ ನಡುವೆ ವ್ಯತ್ಯಾಸ ಗಮನಿಸಿಲ್ಲ. ಜಾಗತಿಕ ದೃಷ್ಟಿಕೋನದಿಂದ ಸಿರೋಸಿಸ್ ಮರಣದಲ್ಲಿನ ಅಸಮತೋಲನವನ್ನು ವಿಶ್ಲೇಷಿಸುವ ಅಧ್ಯಯನ ಇದಾಗಿದೆ. ಈ ಸಂಶೋಧನೆಯಲ್ಲಿ ಸರಿ ಸುಮಾರು ಆರು ಖಂಡಗಳ 25 ದೇಶಗಳ 90 ವೈದ್ಯಕೀಯ ಕೇಂದ್ರ 4 ಸಾವಿರ ರೋಗಿಗಳ ದತ್ತಾಂಶವನ್ನು ವಿಶ್ಲೇಷಣೆ ಮಾಡಲಾಗಿದೆ.

ಹೆಚ್ಚಿನ ಆದಾಯ ಹೊಂದಿರುವ ದೇಶಗಳಿಗೆ ಹೋಲಿಕೆ ಮಾಡಿದಾಗ ಕಡಿಮೆ ಆದಾಯ ಹೊಂದಿರುವ ದೇಶಗಳಲ್ಲಿ ಆಸ್ಪತ್ರೆಯಿಂದ ಬಿಡುಗಡೆಯಾದ 30 ದಿನಗಳಲ್ಲೇ ಸಿರೋಸಿಸ್​ನಿಂದ ಸಾವನ್ನಪ್ಪುವ ರೋಗಿಗಳ ಸಂಖ್ಯೆ ದುಪ್ಪಟ್ಟಿದೆ. ಈ ಫಲಿತಾಂಶ ಆಘಾತಕಾರಿಯಾಗಿದೆ. ಸಿರೋಸಿಸ್ ಮರಣದಲ್ಲಿ ಇಷ್ಟು ಮಟ್ಟದ ಅಸಮಾನತೆಯನ್ನು ನಾವು ನಿರೀಕ್ಷಿಸಿರಲಿಲ್ಲ, ಆದರೆ ಯಕೃತ್​ ಸಮಸ್ಯೆ ಕುರಿತ ಜಾಗತಿಕವಾಗಿ ಒಂದೇ ರೀತಿಯ ಸಾವಿನ ಪ್ರಮಾಣವಿಲ್ಲ ಎಂದಿದ್ದಾರೆ. ವೈದ್ಯಕೀಯ ಲಭ್ಯತೆಗಳು ಕೂಡ ಜಾಗತಿಕವಾಗಿ ಈ ಸಾವಿನ ಸಂಖ್ಯೆಯಲ್ಲಿ ಕೊಡುಗೆ ನೀಡಿದೆ.

ಕಡಿಮೆ ಆದಾಯದ ದೇಶಗಳಲ್ಲಿ ಜನರು ಈ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾದಗ ಪತ್ತೆ, ಔಷಧ, ಚಿಕಿತ್ಸೆ, ಐಸಿಯು ಕೇರ್​ ಮತ್ತು ಲಿವರ್​ ಟ್ರಾನ್ಸ್​ಪ್ಲಾಟ್​ ಅನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಅಲ್ಲದೇ, ಕಡಿಮೆ ಆದಾಯದ ದೇಶದಲ್ಲಿ ಈ ರೋಗ ಹೊಂದಿರುವ ರೋಗಿಗಳು ಅಂತಿಮ ಹಂತದಲ್ಲಿ ಆಸ್ಪತ್ರೆಗೆ ದಾಖಲಾಗುತ್ತಾರೆ. ಜೀರ್ಣಾಂಗವ್ಯೂಹದ ಸ್ರವಿಸುವಿಕೆ, ಹೆಪಟೈಟಿಸ್​ ಬಿ ಸೋಂಕುನ್ನು ಸರಿಯಾದ ಚಿಕಿತ್ಸೆ ಮೂಲಕ ಸಕಾಲಕ್ಕೆ ತಡೆಗಟ್ಟಬಹುದಾಗಿದೆ.

ಇದನ್ನೂ ಓದಿ: ಲಿವರ್​ ಸಿರೋಸಿಸ್​: ಕೊನೆಯ ಹಂತದ ಯಕೃತ್​ ಸಮಸ್ಯೆಗೆ ಕಾರಣವೇನು?

ABOUT THE AUTHOR

...view details