ಲಂಡನ್: ಇಂದು ಹೃದಯಾಘಾತದ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈ ಹೃದಯಾಘಾತ ಯಾವಾಗ, ಯಾರಿಗೆ ಸಂಭವಿಸುತ್ತದೆ ಎಂದು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಆದರೆ, ಈ ಸಂಬಂಧ ಇತ್ತೀಚೆಗೆ ನಡೆದ ಅಧ್ಯಯನದಲ್ಲಿ ಅಚ್ಚರಿಯ ಮಾಹಿತಿಯೊಂದು ಹೊರಬಿದ್ದಿದೆ. ಅದರ ಅನುಸಾರ ಈ ಹೃದಯಾಘಾತ ಪ್ರಕರಣಗಳು ಹೆಚ್ಚಾಗಿ ಸೋಮವಾರ ಸಂಭವಿಸುತ್ತಿರುವುದು. ಶೇ. 13ರಷ್ಟು ಹೃದಯಾಘಾತ ಪ್ರಕರಣಗಳು ಉಳಿದ ದಿನಗಳಿಗಿಂತ ಕೆಲಸದ ವಾರದ ಮೊದಲ ದಿನವೇ ಸಂಭವಿಸುತ್ತಿವೆ.
ಬ್ರಿಟನ್ನ ಮ್ಯಾಂಚೆಸ್ಟರ್ ಸಮ್ಮೇಳನದಲ್ಲಿ ಬ್ರಿಟಿಷ್ ಕಾರ್ಡಿಯೊವಸ್ಕ್ಯೂಲರ್ ಸೊಸೈಟಿ ಈ ಅಧ್ಯಯನ ವರದಿ ಮಂಡಿಸಿದೆ. ಈ ವೇಳೆ ನಿರೀಕ್ಷೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಶೇ 13ರಷ್ಟು ಹೃದಯಾಘಾತ ಪ್ರಕರಣ ಸೋಮವಾರ ವರದಿ ಆಗುತ್ತಿದೆ ಎಂದು ತಿಳಿಸಿದೆ.
ಬೆಲ್ಫಾಸ್ ಹೆಲ್ತ್ ಮತ್ತು ಸೋಶಿಯಲ್ ಕೇರ್ ಟ್ರಸ್ಟ್ ವೈದ್ಯರು ಹಾಗೂ ಐರ್ಲೆಂಡ್ನ ರಾಯಲ್ ಕಾಲೇಜ್ ಆಫ್ ಸರ್ಜನ್ ಈ ಸಂಬಂಧ ವಿಶ್ಲೇಷಣೆ ನಡೆಸಿದೆ. ಇದಕ್ಕಾಗಿ ಐರ್ಲೆಂಡ್ ದ್ವೀಪಗಳ 10,528 ಭಾಗಿದಾರರನ್ನು ಅಧ್ಯಯನಕ್ಕೆ ಒಳಪಡಿಸಲಾಗಿದೆ. 2013 ಮತ್ತು 2018ರಲ್ಲಿ ಆಸ್ಪತ್ರೆಗೆ ದಾಖಲಾದ ರೋಗಿಗಳನ್ನು ಗಂಭೀರವಾದ ಹೃದಯಾಘಾತ ಎಸ್ಟಿ- ಸೆಗ್ಮೆಂಟ್ ಎಲೆವೆಷನ್ ಮಯೊಕಾರ್ಡಿಯಲ್ ಇನ್ಫ್ರಾಕ್ಷನ್ (ಎಸ್ಟಿಇಎಂಐ) ಆಗಿದೆ.
ಎಸ್ಟಿಇಎಂಐ ಹೃದಯದ ಪರಿಧಮನಿ ಮತ್ತು ಅಪಧಮನಿ ಸಂಪೂರ್ಣವಾಗಿ ಮುಚ್ಚಿರುವುದರಿಂದ ಉಂಟಾಗುತ್ತದೆ. ಕೆಲಸದ ವಾರದ ಆರಂಭದ ದಿನ, ಈ ಎಸ್ಇಎಂಐ ದರ ಹೆಚ್ಚಿರುತ್ತದೆ ಎಂದು ಸಂಶೋಧನೆ ತಿಳಿಸಿದೆ. ಮತ್ತೊಂದು ಪ್ರಮುಖ ಅಂಶ ಎಂದರೆ ಎಸ್ಟಿಇಎಂಐ ಕೂಡ ಹೆಚ್ಚಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಇದೇ ವೇಳೆ ತಜ್ಞರು ಈ ಬ್ಲೂ ಮಂಡೆ (Blue Monday) ವಿದ್ಯಮಾನ ಕೂಡ ಏನಕ್ಕೆ ಸಂಭವಿಸುತ್ತದೆ ಎಂಬುದನ್ನು ವಿಶ್ಲೇಷಿಸುವಲ್ಲಿ ವಿಫಲರಾಗಿದ್ದಾರೆ.