ಕರ್ನಾಟಕ

karnataka

ETV Bharat / sukhibhava

ಥಾಯ್ಲೆಂಡ್‌ನ ಗುಹೆಯಲ್ಲಿ ಹೊಸ ಮಾರಣಾಂತಿಕ ಸೋಂಕು ಪತ್ತೆ

ಈ ಸೋಂಕು ಕೋವಿಡ್ ರೀತಿಯಲ್ಲಿ ಮನುಷ್ಯರಿಗೆ ಹರಡುವ ಸಾಮರ್ಥ್ಯ ಹೊಂದಿದೆ ಎಂದು ಸಂಶೋಧನಾ ತಂಡ ತಿಳಿಸಿದೆ.

deadly bat virus discovered in Thailand
deadly bat virus discovered in Thailand

By ETV Bharat Karnataka Team

Published : Jan 12, 2024, 11:21 AM IST

ನವದೆಹಲಿ: ಈ ಹಿಂದೆ ಚೀನಾದ ವುಹಾನ್​ನಲ್ಲಿ ಭಾರಿ ವಿವಾದಕ್ಕೆ ಗುರಿಯಾಗಿದ್ದ ಸಂಶೋಧನಾ ತಂಡವೊಂದು ಇದೀಗ ಥಾಯ್ಲೆಂಡ್‌​ನಲ್ಲಿ ಮಾರಣಾಂತಿಕ ಬ್ಯಾಟ್​ (ಬಾವಲಿ) ವೈರಸ್​ ಪತ್ತೆ ಮಾಡಿದೆ. ಇದು ಮನುಷ್ಯರಿಗೆ ಹರಡುವ ಸಾಮರ್ಥ್ಯ ಹೊಂದಿದೆ ಎಂದು ಅವರು ಎಚ್ಚರಿಸಿದ್ದಾರೆ.

ಹಿಂದೆಂದೂ ಕಂಡಿರದ ರೀತಿಯ ವೈರಸ್​​ ಅನ್ನು ಪತ್ತೆ ಮಾಡಲಾಗಿದೆ. ಇದೂ ಕೂಡ ಕೋವಿಡ್​ನಂತೆ ಮನುಷ್ಯರಿಗೆ ಸೋಂಕು ತಗುಲಿಸುವ ಸಾಮರ್ಥ್ಯ ಹೊಂದಿದೆ ಎಂದು ನ್ಯೂಯಾರ್ಕ್‌ನ ಲಾಭರಹಿತ ಇಕೋಹೆಲ್ತ್​ ಅಲಯ್ಸನ್​​ ಮುಖ್ಯಸ್ಥ ಡಾ.ಪೀಟರ್​ ದಾಸ್ಜಾಕ್ ತಿಳಿಸಿದ್ದಾರೆ ಎಂದು ಡೈಲಿ ಮೇಲ್​ ವರದಿ ಮಾಡಿದೆ. ಹೊಸ ಸಾಂಕ್ರಾಮಿಕ ರೋಗ ಆರಂಭವಾಗಲಿದೆ ಎಂಬ ಭೀತಿ ಹೊಂದಿದ್ದ ವುಹಾನ್​ನ ವಿವಾದಾತ್ಮಕ ಪ್ರಯೋಗದೊಂದಿಗೆ ಈ ಇಕೋಹೆಲ್ತ್​​ ಕೂಡ ಸಂಬಂಧ ಹೊಂದಿದೆ.

"ನಾವು ಅನೇಕ ಬಗೆಯ ಸಾರ್ಸ್​ ಸಂಬಂಧಿ ಕೋವಿಡ್ ವೈರಸ್​ ಪತ್ತೆ ಮಾಡಿದ್ದೇವೆ. ಆದರೆ, ಜನರು ಸಾಮಾನ್ಯವಾಗಿ ತೆರೆದುಕೊಳ್ಳುವ ನಿರ್ದಿಷ್ಟ ಅಂಶವೊಂದನ್ನು ಬಾವಲಿಗಳಲ್ಲಿ ಕಂಡು ಹಿಡಿದಿದ್ದೇವೆ. ಹೊಸ ವೈರಸ್​ಗೆ ಇನ್ನಷ್ಟೇ ಹೆಸರಿಡಬೇಕಿದೆ. ಇದು ಥಾಯ್ಲೆಂಡ್​ನ ಗುಹೆಯಲ್ಲಿ ಕಂಡುಬಂದಿದೆ. ಈ ಗುಹೆಗಳಲ್ಲಿ ಲಭ್ಯವಾಗುವ ಮಲವನ್ನು ರೈತರು ತಮ್ಮ ಭೂಮಿಗೆ ಗೊಬ್ಬರವಾಗಿ ಪಡೆಯುತ್ತಾರೆ. ಹೊಸತಾಗಿ ಪತ್ತೆಯಾಗಿರುವ ವೈರಸ್​ ಕೋವಿಡ್‌ಗೆ ಹತ್ತಿರವಾಗಿದೆ" ಎಂದು ಅವರು ವಿವರಿಸಿದ್ದಾರೆ.

"ಇದನ್ನು ನಾವು ಝೊನಾಟಿಕ್​ ರೋಗಕಾರಕ ಎಂದು ಪರಿಗಣಿಸಿದ್ದೇವೆ. ವೈರಸ್​ ಪತ್ತೆಯಾದ ಬಾವಲಿಯ ಗುಹೆಗೆ ಜನರು ಹೆಚ್ಚಾಗಿ ತೆರೆದುಕೊಳ್ಳುತ್ತಿದ್ದಾರೆ. ಕಾರಣ ಇದರ ಮಲ ತುಂಬಾ ಫಲವತ್ತಾಗಿದೆ. ಈ ಬಾವಲಿಗಳು ವೈರಸ್​ ಅನ್ನು ಮಲದಲ್ಲಿ ಹಾಕಬಹುದು. ಇದರಿಂದ ಸೋಂಕು ಹರಡಬಹುದು" ಎಂದಿದ್ದಾರೆ.

ಜಾಗತಿಕವಾಗಿ ಸೋಂಕು ಹೆಚ್ಚುತ್ತಿದೆ ಎಂಬ ಕುರಿತು ಡಬ್ಲ್ಯೂಎಚ್​ಒ ವರದಿ ಬಿಡುಗಡೆ ಮಾಡಿದ ಬೆನ್ನಲ್ಲೇ ಈ ಫಲಿತಾಂಶ ಬಂದಿದೆ. ಪ್ರಸ್ತುತ ಇದೀಗ 50ಕ್ಕೂ ಹೆಚ್ಚು ದೇಶದಲ್ಲಿ ಸೋಂಕಿನ ಪ್ರಮಾಣ ಹೆಚ್ಚಿದ್ದು, ಆಸ್ಪತ್ರೆ ದಾಖಲೀಕರಣ ಶೇ.42ರಷ್ಟು ಹೆಚ್ಚಾಗಿದೆ. ಕೋವಿಡ್​ ಹೊಸ ತಳಿ ಅತಿ ಹೆಚ್ಚು ಪ್ರಸರಣ ಹೊಂದಿದ್ದು, ಸೋಂಕಿನ ಪ್ರಮಾಣ ಹೆಚ್ಚಿಸುವಲ್ಲಿ ಪ್ರಮುಖವಾಗಿದೆ. ಈ ಹಿನ್ನೆಲೆಯಲ್ಲಿ ಅಮೆರಿಕ ಸೇರಿದಂತೆ ಹಲವೆಡೆ ಮಾಸ್ಕ್​ ಧರಿಸುವುದನ್ನು ಮತ್ತೆ ಕಡ್ಡಾಯ ಮಾಡಲಾಗಿದೆ. ಸಿಡಿಸಿ ಪ್ರಕಾರ, ಸದ್ಯ ಪ್ರಚಲಿತವಿರುವ ಲಸಿಕೆ, ಪರೀಕ್ಷೆ ಮತ್ತು ಚಿಕಿತ್ಸೆಗಳು ಜೆಎನ್​.1ಗೆ ಪರಿಣಾಮಕಾರಿಯಾಗಿದೆ.(ಐಎಎನ್​ಎಸ್​)

ಇದನ್ನೂ ಓದಿ: ಜೆಎನ್ 1 ಕೊರೊನಾ ರೂಪಾಂತರದ ದೊಡ್ಡ ಅಲೆ ಬರಬಹುದು; ತಜ್ಞರ ಹೇಳಿಕೆ

ABOUT THE AUTHOR

...view details