ನ್ಯೂಯಾರ್ಕ್( ಅಮೆರಿಕ): ಉತ್ತಮ ಹೃದಯ ಆರೋಗ್ಯದ ಆಹಾರ ಪದ್ಧತಿ ಹೊಂದಿರುವ ಮಧ್ಯ ವಯಸ್ಸಿನ ಮಹಿಳೆಯರು ನಂತರದ ಜೀವನದಲ್ಲಿ ಸ್ಮರಣೆ ನಷ್ಟ ಅಥವಾ ಅರಿವಿನ ಕ್ಷೀಣಿಸುವಿಕೆಯನ್ನು ಶೇ 17ರಷ್ಟು ಕಡಿಮೆ ಮಾಡಬಹುದು ಎಂದು ಹೊಸ ಅಧ್ಯಯನವೊಂದು ತಿಳಿಸಿದೆ.
ಎನ್ವೈಸಿ ಗ್ರಾಸ್ಮನ್ ಸ್ಕೂಲ್ ಆಫ್ ಮೆಡಿಸಿನ್ ಸಂಶೋಧಕರ ನೇತೃತ್ವದಲ್ಲಿ ಈ ಸಂಶೋಧನೆ ನಡೆಸಿದೆ. ಮಧ್ಯ ವಯಸ್ಸಿನ ಜೀವನಶೈಲಿ ಮಾರ್ಪಾಡುಗಳು ಅಧಿಕ ರಕ್ತದೊತ್ತಡ ತಡೆಯಲು ಡಯಟರಿ ಆಹಾರ ಪದ್ದತಿ ಅಳವಡಿಕೆ ಅಥವಾ ಡ್ಯಾಶ್ ಡಯಟ್ಗಳು ಮಹಿಳೆಯರಲ್ಲಿ ನಂತರದ ಜೀವನದಲ್ಲಿ ಅರಿವಿನ ಕಾರ್ಯಾಚರಣೆಗಳನ್ನು ಸುಧಾರಿಸುವಂತೆ ಮಾಡುತ್ತವೆ.
ಸಹಾಯವಾಗಲಿದೆ ಡ್ಯಾಶ್ ಡಯಟ್:30 ವರ್ಷಗಳ ಫಾಲೋ ಅಪ್ನಲ್ಲಿ, ಮಧ್ಯ ವಯಸ್ಸಿನಲ್ಲಿನ ಡ್ಯಾಶ್ ಡಯಟ್ಗಳು ಬಲವಾದ ಫಲಿತಾಂಶವನ್ನು ನೀಡುತ್ತದೆ ಎಂದು ಕಂಡು ಕೊಂಡಿದ್ದೇವೆ. ನಂತರದ ಜೀವನದಲ್ಲಿ ಮಹಿಳೆಯರ ಅರಿವಿನ ಕ್ಷೀಣತೆ ವರದಿಯಲ್ಲಿ ಇದು ಪರಿಣಾಮ ಹೊಂದಿದೆ ಎಂದು ಅಧ್ಯಯನದ ಹಿರಿಯ ಲೇಖಕಿ ಯು ಚೆನ್ ತಿಳಿಸಿದ್ದಾರೆ. ಈ ಅಧ್ಯಯನವನ್ನು ಜರ್ನಲ್ ಅಲ್ಝೈಮರ್ ಮತ್ತು ಡೆಮನ್ಶಿಯಾದಲ್ಲಿ ಪ್ರಕಟಿಸಲಾಗಿದೆ.
ಡ್ಯಾಶ್ ಡಯಟ್ನಲ್ಲಿ ಸಸ್ಯಾಧರಿತ ಆಹಾರ ಮತ್ತು ಪೋಟಾಶಿಯಂ, ಕ್ಯಾಲ್ಸಿಯಂ ಮತ್ತು ಮೆಗ್ನಿಶಿಯಂ ಸಮೃದ್ಧ ಆಹಾರ ಒಳಗೊಂಡಿದ್ದು, ಸೀಮಿತ ಕೊಬ್ಬಿನ ಆಹಾರ, ಕೊಲೆಸ್ಟ್ರಾಲ್, ಸೋಡಿಯಂ ಮತ್ತು ಸಕ್ಕರೆಯನ್ನು ಹೊಂದಿದೆ.