ನವದೆಹಲಿ:ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ 2021ರಲ್ಲಿ ಜಾಗತಿಕವಾಗಿ ಸರಿ ಸುಮಾರು 2.2 ಬಿಲಿಯನ್ ಜನರು ದೂರ ಮತ್ತು ಸಮೀಪ ದೃಷ್ಟಿ ದೋಷಕ್ಕೆ ಗುರಿಯಾಗಿದ್ದಾರೆ. ಇದರಲ್ಲಿ ಭಾರತದಲ್ಲಿ ಶೇ 20 ರಷ್ಟು ಜನರು ಈ ಸಮಸ್ಯೆಗೆ ಗುರಿಯಾಗಿದ್ದು, ಜಾಗತಿಕವಾಗಿ ಎರಡನೇ ಸ್ಥಾನದಲ್ಲಿದೆ. ಜಾಗತಿಕವಾಗಿ ದೃಷ್ಟಿ ದೋಷವೂ ಪ್ರಮುಖ ಆರೋಗ್ಯ ಸಮಸ್ಯೆಯಾಗಿದೆ.
ಇದರಲ್ಲಿ ಅನುವಂಶಿಕ, ವಯೋಸಹಜ ಮತ್ತು ಪರಿಸರತ್ಮಕ ಅಂಶಗಳು ಕೂಡ ಮಂದು ದೃಷ್ಟಿ ದೋಷಕ್ಕೆ ಕಾರಣವಾಗಿದೆ. ಇದಕ್ಕೆ ನಿತ್ಯದ ಅಭ್ಯಾಸಗಳು ಕೂಡ ಕಾರಣವಾಗಿದೆ. ವ್ಯಕ್ತಿಯ ಪ್ರತಿನಿತ್ಯದ ಜೀವನ ಶೈಲಿ ಕೂಡ ವ್ಯಕ್ತಿಯ ದೃಷ್ಟಿ ಸಮಸ್ಯೆ ಹೆಚ್ಚಳ ಸೇರಿದಂತೆ ಅನೇಕ ಸಮಸ್ಯೆಗೆ ಕಾರಣವಾಗುತ್ತಿದೆ. ಹಾಗಾದರೆ ಕಣ್ಣಿನ ಸಮಸ್ಯೆ ಹೆಚ್ಚುಸುತ್ತಿರುವ ಈ ಅಭ್ಯಾಸಗಳು ಯಾವುದು?
ಅತಿಹೆಚ್ಚು ಕಂಪ್ಯೂಟರ್ ವೀಕ್ಷಣೆ: ದೀರ್ಘಕಾಲ ಅವಧಿವರೆಗೆ ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡುವುದು ಪ್ರಪಂಚದಲ್ಲಿ ಅನೇಕ ಜನರ ದೃಷ್ಟಿ ದೋಷ ಸಮಸ್ಯೆಗೆ ಕಾರಣವಾಗಿದೆ. ಅದರಲ್ಲೂ ಕೋವಿಡ್ ಸೋಂಕಿನ ಬಳಿಕ ವರ್ಕ್ ಫ್ರಂ ಹೋಂ ಸಂಸ್ಕೃತಿ ಹೆಚ್ಚಿದ್ದು, ಜನರು ಇದರಿಂದ ಕಂಪ್ಯೂಟರ್ ಮುಂದೆ ಕೂರುವ ಸಮಯವೂ ಗಣನೀಯವಾಗಿ ಏರಿಕೆ ಕಂಡಿದೆ.
ಇದು ಗಮನಾರ್ಹವಾಗಿ ಕಣ್ಣಿನ ಮೆಲೆ ಒತ್ತಡ ಹೆಚ್ಚಿಸುವುದರ ಹೊತೆಗೆ ದೃಷ್ಟಿ ದೋಷ ಸಮಸ್ಯೆಗೆ ಕಾರಣವಾಗುತ್ತಿದೆ. ಇದ್ನು ಕಂಪ್ಯೂಟರ್ ವಿಷನ್ ಸಿಂಡ್ರೋಮ್ ಎಂದು ಕರೆಯಲಾಗುವುದು. ಇದಕ್ಕಿರುವ ಪರಿಹಾರ 20-20-20 ಟೆಕ್ನಿಕ್ ಬಳಸುವುದು. ಪ್ರತಿ 20 ನಿಮಿಷಕ್ಕೆ ಒಮ್ಮೆ ಕಂಪ್ಯೂಟರ್ ಪರದೆಯಿಂದ ಬಿಡುವು ಪಡೆಯುವುದರಿಂದ ಕಣ್ಣಿನ ಒತ್ತಡ ಕಡಿಮೆ ಮಾಡಬಹುದಾಗಿದೆ. ಪ್ರತಿ 20 ನಿಮಿಷಕ್ಕೆ ಒಮ್ಮೆ ನಿಮ್ಮ ದೃಷ್ಟಿಯಿಂದ 20 ಅಡಿ ದೂರ ನಿಮ್ಮ ದೃಷ್ಟಿಹಾಯಿಸಬೇಕು.
ಕಣ್ಣಿಗೆ ಆರೋಗ್ಯಕರವಾದ ಆಹಾರ ನಿಮ್ಮ ಡಯಟ್ನಲ್ಲಿರಲಿ: ಕಣ್ಣಿನ ಆರೋಗ್ಯ ಹೆಚ್ಚಿಸುವ ಒಮೆಗಾ-3 ಫ್ಯಾಟಿ ಆ್ಯಸಿಡ್, ಜಿಂಕ್, ವಿಟಮಿನ್ ಸಿ ಮತ್ತು ಇ ಜೊತೆಗೆ ಹಚ್ಚ ಹಸುರಿನ ಎಲೆಗಳು ಸೇವಿಸುವುದು ಉತ್ತಮ. ಒಣ ಹಣ್ಣುಗಳು, ಮೊಟ್ಟೆ, ಸಮುದ್ರ ಆಹಾರಗಳು ನಿಮ್ಮ ಡಯಟ್ನಲ್ಲಿರುವಂತೆ ನೋಡಿಕೊಳ್ಳಿ.