ಕರ್ನಾಟಕ

karnataka

ETV Bharat / sukhibhava

ಸಾಫ್ಟ್​ ಡ್ರಿಂಕ್ಸ್​ ಇಷ್ಟವೇ? ಹೆಚ್ಚು ಕುಡೀತೀರಾ? ಹಾಗಿದ್ದರೆ, ಒಮ್ಮೆ ಮೂಳೆ ಪರೀಕ್ಷೆ ಮಾಡಿಸಿ!

ಪ್ರತಿನಿತ್ಯ ಸಾಫ್ಟ್​ ಡ್ರಿಂಕ್​ ಸೇವನೆ ಮಾಡುವುದರಿಂದ ಮೂಳೆ ಮುರಿತದ ಅಪಾಯವಿದೆ.

By ETV Bharat Karnataka Team

Published : Oct 20, 2023, 5:23 PM IST

Daily consumption of soft drink increases the risk of bone fracture in them
Daily consumption of soft drink increases the risk of bone fracture in them

ಲಕ್ನೋ: ನಿಯಮಿತವಾಗಿ ಸಾಫ್ಟ್​ ಡ್ರಿಂಕ್ಸ್​ ಸೇವನೆ ಮಾಡುವುದರಿಂದ ಜಡ ಜೀವನಶೈಲಿ ವೃದ್ಧಿಯಾಗಿ, ಮೂಳೆಗಳ ಜಡತೆಗೂ ಕಾರಣವಾಗಬಹುದು. ಇದು 40 ರಿಂದ 50 ವರ್ಷದೊಳಗಿನ ವಯೋಮಾನದವರಲ್ಲಿ ಮೂಳೆಗಳ ಮಿನರಲ್​​ ಸಾಂದ್ರತೆ (ಬಿಎಂಡಿ) ಕಡಿಮೆಯಾಗಲು ಕಾರಣವಾಗುತ್ತದೆ. ಬಳಿಕ ಅಸ್ಟಿಯೊಪೋರಾಸಿಸ್ ಆಗಿ ಬದಲಾಗಲಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ವಯಸ್ಕರು ಪ್ರತಿನಿತ್ಯ ಸಾಫ್ಟ್​ ಡ್ರಿಂಕ್​​ ಸೇವನೆ ಮಾಡುವುದರಿಂದ ಅವರಿಗೆ ಹೆಚ್ಚಿನ ಮೂಳೆ ಮುರಿತದ ಅಪಾಯವಿದೆ ಎಂದು ಕಿಂಗ್​ ಜಾರ್ಜ್​ ಮೆಡಿಕಲ್​ ಯುನಿವರ್ಸಿಟಿಯ ಪ್ರೊ.ಶಾ ವಲಿಲ್ಲುಹಾ ತಿಳಿಸಿದ್ದಾರೆ. ಈ ಸಂಬಂಧ ಚೀನಾದಲ್ಲಿ ಏಳು ವರ್ಷಗಳ ಕಾಲ 17 ಸಾವಿರ ಜನರನ್ನು ಅಧ್ಯಯನಕ್ಕೆ ಒಳಪಡಿಸಲಾಗಿದೆ. ಅಧ್ಯಯನದಲ್ಲಿ, ಸಾಫ್ಟ್​​ ಡ್ರಿಂಕ್​ ಮುರಿತದ ಅಪಾಯದೊಂದಿಗೆ ಸಂಬಂಧ ಹೊಂದಿದೆ. 100ರಲ್ಲಿ 35 ಮಂದಿ 40 ರಿಂದ 50 ವರ್ಷ ವಯೋಮಾನದವರು ಬಿಎಂಡಿ ಸಮಸ್ಯೆ ಹೊಂದಿರುವುದು ಪತ್ತೆಯಾಗಿದೆ.

ಈ ಅಂಶಗಳಿಂದ ಅಪಾಯ: ಮೂಳೆ ಶಸ್ತ್ರರೋಗ ತಜ್ಞರು ಮತ್ತು ರೈಲ್ವೆ ಮೆಡಿಕಲ್​ ಸೂಪರಿಟೆಂಡೆಂಟ್​ ಆಸ್ಪತ್ರೆ ಮಾಜಿ ಮುಖ್ಯಸ್ಥ ಡಾ.ಸಂಜಯ್​ ಶ್ರೀವಾಸ್ತವಾ ಈ ಕುರಿತು ಮಾತನಾಡಿದ್ದು, ಸಾಫ್ಟ್​ ಡ್ರಿಂಕ್​ನಲ್ಲಿ ಸಕ್ಕರೆ, ಸೋಡಿಯಂ ಮತ್ತು ಕೆಫೆನ್​ ಅಂಶಗಳಿವೆ. ಇವು ಮೂಳೆಯಲ್ಲಿನ ಕ್ಯಾಲ್ಸಿಯಂ ನಷ್ಟಕ್ಕೆ ಕಾರಣವಾಗುತ್ತದೆ. ಮೂಳೆ ಮುರಿತದ ಅಪಾಯ ತರುತ್ತದೆ ಎಂದು ವಿವರಿಸಿದ್ದಾರೆ.

ಪ್ಲಾಸ್ಟಿಕ್​ನಲ್ಲಿ ಕಂಡು ಬರುವ ರಾಸಾಯನಿಕ ಪ್ಯಾಥಲೆಟ್ಸ್​​ಗಳು ಸಾಫ್ಟ್​​ ಡ್ರಿಂಕ್​ ಬಾಟಲಿ​ಗಳ ಉತ್ಪಾದನೆಯಲ್ಲಿ ಬಳಕೆ ಮಾಡಲಾಗುತ್ತದೆ. ಇದು ಮೂಳೆಗಳ ಆರೋಗ್ಯದ ಮೇಲೆ ಪರಿಣಾಮ ಬೀರಿ, ಅದರ ದುರ್ಬಲತೆ ಮತ್ತು ಆಸ್ಥಿರಂಧ್ರತೆಗೆ ಕಾರಣವಾಗುತ್ತದೆ. ವೈಯಕ್ತಿಕ ಯೋಗಕ್ಷೇಮ ಮತ್ತು ಮೂಳೆಗಳ ಆರೋಗ್ಯದ ಉದ್ದೇಶದಿಂದ ಸಾಫ್ಟ್​​ ಡ್ರಿಂಕ್​ ಸೇವನೆ ಮಾಡದಂತೆ ಜನರಲ್ಲಿ ಎಚ್ಚರಿಸುವ ಕಾರ್ಯವನ್ನು ಸಾರ್ವಜನಿಕ ಆರೋಗ್ಯ ಅಧಿಕಾರಿಗಳು ಮಾಡಬೇಕಿದೆ ಎಂದು ತಜ್ಞರು ಒತ್ತಾಯಿಸುತ್ತಾರೆ. ಈ ಸಂಬಂಧ ಜನರಿಗೆ ಈ ಸಾಫ್ಟ್​ ಡ್ರಿಂಕ್ಸ್​​ಗಳು ಎಷ್ಟು ಅಪಾಯಕಾರಿ ಎಂದು ಶಿಕ್ಷಣ ನೀಡಬೇಕಿದೆ ಎಂದರು.

ತಜ್ಞರ ಸಲಹೆ: ಮೂಳೆಗಳ ಆರೋಗ್ಯದ ಸಮಸ್ಯೆಗಳನ್ನು ಆರಂಭದಲ್ಲಿ ಪತ್ತೆ ಮಾಡುವುದು ಅವಶ್ಯಕ. ಅದರಲ್ಲೂ ಮಹಿಳೆಯರು ದಶಕಗಳ ಹಿಂದಿನಿಂದಲೂ ಅಸ್ಟಿಯೊಪೋರೊಸಿಸ್​​ ಸಮಸ್ಯೆಗೆ ಒಳಗಾಗುತ್ತಿದ್ದು, ಕಾಳಜಿ ವಹಿಸಬೇಕಿದೆ. ಅದರಲ್ಲೂ ಪಾಶ್ಚಿಮಾತ್ಯ ದೇಶದಲ್ಲಿ ಮೆನೋಪಸ್​ ಸಮಯದಲ್ಲಿ ಮಹಿಳೆಯರು ಮೂಳೆಗಳ ಆರೋಗ್ಯದ ಬಗ್ಗೆ ಗಮನ ವಹಿಸಬೇಕು ಎಂದಿದ್ದಾರೆ.

ಹೊಸ ಮೂಳೆಗಳ ಸೃಷ್ಟಿಯಲ್ಲಿ ಈಸ್ಟೋಜನ್​ ಹಾರ್ಮೋನ್​ ಪ್ರಮುಖ ಪಾತ್ರವಹಿಸುತ್ತದೆ. ಬಿಎಂಡಿ ಕುಸಿಯುವಿಕೆ ಅಸ್ಟಿಯೊಪೊರೋಸಿಸ್​​ಗೆ ಕಾರಣವಾಗುತ್ತದೆ. ಈ ಹಿನ್ನೆಲೆಯಲ್ಲಿ 45 ವರ್ಷ ಮೇಲ್ಪಟ್ಟ ಬೆನ್ನು ನೋವಿನಿಂದ ಬಳಲುತ್ತಿರುವ ಮಹಿಳೆಯರು ಪರೀಕ್ಷೆಗೆ ಒಳಗಾಗಬೇಕಿದೆ ಎಂದು ಸಲಹೆ ನೀಡಿದ್ದಾರೆ.

ಜನರು ನಿಯಮಿತ ದೈಹಿಕ ಚಟುವಟಿಕೆ ಮತ್ತು ಸಮತೋಲಿತ ಆಹಾರದಂತಹ ಆರೋಗ್ಯಯುತ ಜೀವನ ಶೈಲಿ ರೂಢಿಸಿಕೊಳ್ಳಲು ಉತ್ತೇಜಿಸಬೇಕಿದೆ ಎಂದು ಕೆಜಿಎಂಯುನ ವೈದ್ಯ ಪ್ರೊ.ಶೈಲೇಂದ್ರ ಸಿಂಗ್​ ತಿಳಿಸಿದ್ದಾರೆ. (ಐಎಎನ್​ಎಸ್​)

ಇದನ್ನೂ ಓದಿ: ವಿಶ್ವ ಅಸ್ಪಿಯೊಪೊರೋಸಿಸ್​​​ ದಿನ: ಆರೋಗ್ಯಯುತ ಭವಿಷ್ಯಕ್ಕೆ ಸದೃಢ ಮೂಳೆಗಳ ನಿರ್ಮಾಣಕ್ಕೆ ನೀಡಬೇಕಿದೆ ಒತ್ತು

ABOUT THE AUTHOR

...view details