ಲಂಡನ್:ಕಾರು, ಬೈಕ್, ಬಸ್ ಬದಲಾಗಿ ಕೆಲಸಕ್ಕೆ ನಿತ್ಯ ಸೈಕಲ್ನಲ್ಲಿ ಪ್ರಯಾಣಿಸುವುದರಿಂದ ಪರಿಸರಕ್ಕೆ ಮಾತ್ರವಲ್ಲ, ನಿಮ್ಮ ಮಾನಸಿಕ ಆರೋಗ್ಯಕ್ಕೂ ಪ್ರಯೋಜನವಿದೆ ಎಂದು ಹೊಸ ಸಂಶೋಧನೆ ತಿಳಿಸಿದೆ. ಸೈಕಲ್ ಅನ್ನು ತಮ್ಮ ಸಾರಿಗೆಯಾಗಿ ಬಳಕೆ ಮಾಡುವವರು ಇತರ ಸಾರಿಗೆ ವ್ಯವಸ್ಥೆ ಬಳಕೆ ಮಾಡುವುದಕ್ಕಿಂತ ಕಡಿಮೆ ಮಟ್ಟದಲ್ಲಿ ಆತಂಕ ಮತ್ತು ಖಿನ್ನತೆಗೆ ಔಷಧ ಶಿಫಾರಸು ಮಾಡಲಾಗುವುದು ಎಂದು ಅಧ್ಯಯನ ತೋರಿಸಿದೆ.
ಇಂಟರ್ನ್ಯಾಷನಲ್ ಜರ್ನಲ್ ಆಫ್ ಎಪಿಡೆಮಿಲೊಜಿಯಲ್ಲಿ ಇದನ್ನು ಪ್ರಕಟಿಸಲಾಗಿದೆ. ಅಧ್ಯಯನದಲ್ಲಿ 16 ರಿಂದ 72 ವಯೋಮಾನದ 3,78,253 ಸ್ಕಾಟ್ಲ್ಯಾಂಡ್ನ ಭಾಗಿದಾರರನ್ನು ಐದು ವರ್ಷಗಳ ಕಾಲ ವಿಶ್ಲೇಷಣೆ ಮಾಡಲಾಗಿದೆ.
ಈ ವೆಳೆ ಸೈಕಲ್ ಸವಾರಿಯನ್ನು ಹೆಚ್ಚು ಮಾಡುವವರಲ್ಲಿ ಮಾನಸಿಕ ಆರೋಗ್ಯದ ಅಪಾಯ ಕಡಿಮೆ ಮಟ್ಟದಲ್ಲಿರುವುದು ಕಂಡು ಬಂದಿದೆ. ಅಧ್ಯಯನದಲ್ಲಿ ಎಡಿನ್ಬರ್ಗ್ ಅಥವಾ ಗ್ಲಾಸ್ಗೌನಲ್ಲಿ ಕೆಲಸ ಮಾಡುವ ಅಥವಾ ಜೀವಿಸುವವರು ಒಂದು ಮೈಲಿ ಸೈಕಲ್ ಓಡಿಸುವವರು ಈ ಅಧ್ಯಯನದ ಭಾಗವಾಗಿದ್ದಾರೆ. ಇವರೆಲ್ಲ ಆರಂಭದಲ್ಲಿ ಮಾನಸಿಕ ಸಮಸ್ಯೆಗೆ ಯಾವುದೇ ವೈದ್ಯಕೀಯ ಶಿಫಾರಸನ್ನು ಹೊಂದಿರಲಿಲ್ಲ
ಐದು ವರ್ಷದ ಅಧ್ಯಯನದಲ್ಲಿ ಸೈಕಲ್ ತುಳಿಯದವರಿಗೆ ಹೋಲಿಕೆ ಮಾಡಿದಾಗ ಸೈಕಲ್ ತುಳಿಯುವವರು ಆತಂಕ ಮತ್ತು ಖಿನ್ನತೆಗೆ ಶೇ 15ರಷ್ಟು ಔಷಧಗಳ ಶಿಫಾರಸುಗಳನ್ನು ಕಡಿಮೆ ಹೊಂದಿದ್ದಾರೆ. ಇದು ಅವರ ಮಾನಸಿಕ ಆರೋಗ್ಯ ಸುಧಾರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.
ಸೈಕಲ್ ಪ್ರಯಾಣ ನಡೆಸುವುದರಿಂದ ಮಾನಸಿಕ ಆರೋಗ್ಯದಲ್ಲಿ ಪುರಷರಿಗಿಂತ ಹೆಚ್ಚಾಗಿ ಮಹಿಳೆಯರಲ್ಲಿ ಕಡಿಮೆ ಆರೋಗ್ಯದ ಶಿಫಾರಸನ್ನು ಹೊಂದಿದ್ದಾರೆ. ಈ ಅಧ್ಯಯನದ ಫಲಿತಾಂಶವೂ ಸಕ್ರಿಯ ಸೈಕಲ್ ಪ್ರಯಾಣವನ್ನು ಬೆಂಬಲಿಸಿದೆ. ಅಲ್ಲದೇ ಈ ಸಂಬಂಧದ ಮೂಲ ಸೌಕರ್ಯಗಳ ಹೂಡಿಕೆಗೆ ಪ್ರೋತ್ಸಾಹಿಸಿದೆ ಎಂದು ಸಂಶೋಧನಾ ತಂಡ ತಿಳಿಸಿದೆ.
ಈ ಅಧ್ಯಯನದ ಮೂಲಕ ಕೆಲಸದ ವೇಳೆ ಆರ್ಥಿಕ ಚೇತರಿಕೆ ಹಾಗೂ ಸುಸ್ಥಿರ ಜೀವನಕ್ಕೆ ಈ ಸೈಕಲ್ ಪ್ರಯಾಣ ಪೂರಕ ನೆರವು ನೀಡಿದೆ ಎಂಬುದನ್ನು ಕಂಡುಕೊಳ್ಳಲಾಗಿದೆ ಎಂದು ಯುಕೆಯ ಎಡಿನ್ಬರ್ಗ್ ಯುನಿವರ್ಸಿಟಿ ಸಂಶೋಧಕರಾದ ಕ್ರಿಸ್ ಡಿಬ್ಬೆನ್ ತಿಳಿಸಿದ್ದಾರೆ. ಇದು ಕೇವಲ ಜನರ ಮಾನಸಿಕ ಆರೋಗ್ಯವನ್ನು ಅಭಿವೃದ್ಧಿಪಡಿಸುವುದಿಲ್ಲ. ಜೊತೆಗೆ ಇದು ಇಂಗಾಲದ ಹೊರ ಸೂಸುವಿಕೆ, ಟ್ರಾಫಿಕ್ ಮತ್ತು ಮಾಲಿನ್ಯವನ್ನು ಕಡಿಮೆ ಮಾಡುತ್ತದೆ ಎಂದು ಅಧ್ಯಯನ ತಿಳಿಸಿದೆ. ಒಟ್ಟಾರೆ ಸೈಕಲ್ ತುಳಿಯುವುದರಿಂದ ಹಲವು ಪ್ರಯೋಜನಗಳಿರುವುದಂತೂ ನಿಜ (ಐಎಎನ್ಎಸ್)
ಇದನ್ನೂ ಓದಿ: ಸುರಕ್ಷಿತ ಎಂದು ಕುಡಿಯುವ ನೀರಿನ ಬಾಟಲ್ನಲ್ಲಿ ಪತ್ತೆಯಾಯ್ತು ನ್ಯಾನೋಪ್ಲಾಸ್ಟಿಕ್