ಕರ್ನಾಟಕ

karnataka

ETV Bharat / sukhibhava

ಗೋ ಮೂತ್ರ ಸೇವನೆಗೆ ಒಳಿತಲ್ಲ, ಅದರಲ್ಲಿದೆ ಹಾನಿಕಾರಕ ಬ್ಯಾಕ್ಟೀರಿಯಾ; ಐವಿಆರ್​ಐ ಅಧ್ಯಯನದಲ್ಲಿ ಬಯಲು - ಗೋ ಮೂತ್ರ ಸೇವಿಸುವುದು ಆರೋಗ್ಯ

ಗೋ ಮೂತ್ರ ಸೇವನೆ ಮಾಡುವುದರಿಂದ ಅನೇಕ ರೋಗ ರುಜಿನಗಳು ಮಾಯವಾಗುತ್ತದೆ ಎಂಬ ನಂಬಿಕೆ ನಮ್ಮಲ್ಲಿದೆ. ಆದರೆ, ಈ ಬಗ್ಗೆ ನಡೆಸಿರುವ ಅಧ್ಯಯನ ವರದಿ ಆತಂಕಕಾರಿ ಮಾಹಿಯನ್ನು ಬಯಲು ಮಾಡಿದೆ.

Cow urine Contains contains potentially harmful bacteria
Cow urine Contains contains potentially harmful bacteria

By

Published : Apr 12, 2023, 10:47 AM IST

ಬರೇಲಿ (ಉತ್ತರ ಪ್ರದೇಶ):ಭಾರತದಲ್ಲಿ ಗೋವಿಗೆ ಪೂಜನೀಯ ಸ್ಥಾನವಿದ್ದು, ಗೋವು ಮೂತ್ರ ಹಲವು ಔಷಧ ಗುಣಗಳನ್ನು ಹೊಂದಿದ್ದು, ಪ್ರಯೋಜನಕಾರಿ ಎಂಬ ಮಾತನ್ನು ದಶಕಗಳಿಂದ ಕೇಳುತ್ತ ಬಂದಿದ್ದೇವೆ. ಆದರೆ, ಈ ಗೋವು ಮೂತ್ರ ಹಲವು ಹಾನಿಕಾರಕ ಬ್ಯಾಕ್ಟೀರಿಯಾ ಹೊಂದಿದ್ದು, ನೇರವಾಗಿ ಗೋ ಮೂತ್ರ ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಹೊಸ ಸಂಶೋಧನೆ ತಿಳಿಸಿದೆ.

ಬರೇಲಿ ಮೂಲದ ಐಸಿಎಆರ್​- ಭಾರತೀಯ ಪಶು ಸಂಗೋಪನ ಸಂಶೋಧನಾ ಸಂಸ್ಥೆ (ಐವಿಆರ್​ಐ), ದೇಶದ ಪ್ರಮುಖ ಪ್ರಾಣಿ ಸಂಶೋಧನಾ ಸಂಸ್ಥೆ, ಎಮ್ಮೆಯ ಮೂತ್ರವು ಕೆಲವು ಬ್ಯಾಕ್ಟೀರಿಯಾಗಳ ಮೇಲೆ ಹೆಚ್ಚು ಪರಿಣಾಮಕಾರಿ ಎಂದು ಪತ್ತೆ ಆಗಿದೆ.

ಹೊಟ್ಟೆ ಸಮಸ್ಯೆಗೆ ಕಾರಣ: ಸಂಸ್ಥೆಯ ಭೋಜ್ ರಾಜ್ ಸಿಂಗ್ ನೇತೃತ್ವದಲ್ಲಿ ಮೂವರು ಪಿಎಚ್‌ಡಿ ವಿದ್ಯಾರ್ಥಿಗಳು ಈ ಅಧ್ಯಯನ ನಡೆಸಿದ್ದಾರೆ. ಆರೋಗ್ಯವಂತ ಹಸುಗಳು ಮತ್ತು ಗೂಳಿ, ಮಾನವನ ಮೂತ್ರದ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಯಿತು. ಇದರಲ್ಲಿ ಕನಿಷ್ಠ 14 ವಿಧದ ಹಾನಿಕಾರಕ ಬ್ಯಾಕ್ಟೀರಿಯಾಗಳು ಪತ್ತೆಯಾಗಿದ್ದು, ಇವು ಎಸ್ಚೆರಿಚಿಯಾ ಕೋಲಿಯನ್ನು ಹೊಂದಿದೆ. ಇದು ಹೊಟ್ಟೆಯಲ್ಲಿ ಸೋಂಕನ್ನು ಉಂಟುಮಾಡುತ್ತದೆ ಎಂದು ಸಂಶೋಧನೆ ತಿಳಿಸಿದೆ. ಈ ಅಧ್ಯಯನವನ್ನು ಆನ್‌ಲೈನ್ ಸಂಶೋಧನಾ ವೆಬ್‌ಸೈಟ್ ರಿಸರ್ಚ್‌ ಗೇಟ್‌ನಲ್ಲಿ ಪ್ರಕಟಿಸಲಾಗಿದೆ.

ಎಮ್ಮೆ ಮೂತ್ರ ಉತ್ತಮ: ಹಸು ಮತ್ತು ಎಮ್ಮೆಯ 73 ಮೂತ್ರ ಮಾದರಿಗಳನ್ನು ಅಂಕಿ ಅಂಶಗಳ ವಿಶ್ಲೇಷಣೆ ನಡೆಸಲಾಗಿದೆ. ಇದರಲ್ಲಿ ಎಮ್ಮೆಗಳಲ್ಲಿ ಆ್ಯಂಟಿಬ್ಯಾಕ್ಟೀರಿಯ ಚಟುವಟಿಕೆ ಹಸುಗಳ ಮೂತ್ರಕ್ಕಿಂತ ಉತ್ತಮವಾಗಿದೆ. ಎಮ್ಮೆಯ ಮೂತ್ರದಲ್ಲಿನ ಎಸ್​ ಎಪಿಡೆಮಿಡಿಸ್​ ಮತ್ತು ಇ ರಾಪೊನ್ಟಿಸಿ ಹೆಚ್ಚು ಪರಿಣಾಮಕಾರಿಯಾಗಿದೆ.

ಮೂರು ಮಾದರಿ ಅಧ್ಯಯನ: ಇದರ ಅಧ್ಯಯನಕ್ಕಾಗಿ ನಾವು ಮೂರು ರೀತಿಯಲ್ಲಿ ಹಸುಗಳ ಮೂತ್ರಗಳನ್ನು ಸಂಗ್ರಹಿಸಿದೆವು. ಸ್ಥಳೀಯ ಡೈರಿ ಫಾರ್ಮ್​ಗಳಿಂದ ಸಹಿವಾಲ್​, ಥರಪರ್ಕರ್​ ಮತ್ತು ವಿನದವನಿ (ಕ್ರಾಸ್​ ಬ್ರೀಡ್​​) ಜೊತೆಗೆ ಎಮ್ಮೆ ಮತ್ತು ಮಾನವನ ಮೂತ್ರವನ್ನು ಅಧ್ಯಯನಕ್ಕೆ ಒಳಪಡಿಸಲಾಯಿತು. 2022ರ ಜೂನ್​ ಮತ್ತು ನವೆಂಬರ್​ ನಡುವೆ ಈ ಅಧ್ಯಯನ ನಡೆಸಲಾಗಿದೆ. ಇದರಲ್ಲಿ ಆರೋಗ್ಯವಂತ ವ್ಯಕ್ತಿಗಳ ಮೂತ್ರದ ಮಾದರಿಗಳ ಗಮನಾರ್ಹ ಪ್ರಮಾಣವು ರೋಗಕಾರಕ ಬ್ಯಾಕ್ಟೀರಿಯಾವನ್ನು ಹೊಂದಿರುತ್ತದೆ ಎಂದು ತೀರ್ಮಾನಿಸಿದೆ.

ಗೋ ಮೂತ್ರ ಸೇವನೆಗೆ ಅರ್ಹವಲ್ಲ: ಅಧ್ಯಯನದಲ್ಲಿ ವ್ಯಕ್ತಿಗಳ ಲಿಂಗ ಮತ್ತು ಬ್ರೀಡರ್​ಗೆ ಅನುಗುಣವಾಗಿ ಅದು ಬ್ಯಾಕ್ಟೀರಿಯಾ ಹೊಂದಿದೆ ಎಂಬ ಸಾಮಾನ್ಯ ನಂಬಿಕೆಯನ್ನು ಪುಷ್ಟಿಕರಿಸುತ್ತದೆ. ಇದರ ಕೊತೆಗೆ ಗೋಮೂತ್ರವು ಬ್ಯಾಕ್ಟೀರಿಯಾ ವಿರೋಧಿಯಾಗಿದೆ ಎಂದು ಒಪ್ಪಲು ಸಾಧ್ಯವಿಲ್ಲ. ಈ ಗೋಮೂತ್ರಗಳನ್ನು ನೇರವಾಗಿ ಮಾನವನ ಬಳಕೆಗೆ ಅಧ್ಯಯನ ಶಿಫಾರಸು ಮಾಡುವುದಿಲ್ಲ. ಕೆಲವರು ಭಟ್ಟಿ ಇಳಿಸಿದ ಮೂತ್ರದಲ್ಲಿ ಹಾನಿಕಾರಕ ಬ್ಯಾಕ್ಟೀರಿಯಾ ಇಲ್ಲ ಎಂದು ಹೇಳುತ್ತಾರೆ. ಈ ಬಗ್ಗೆ ಹೆಚ್ಚಿನ ಅಧ್ಯಯನ ಆಗಬೇಕಿದೆ. ಭಾರತೀಯ ಮಾರುಕಟ್ಟೆಯಲ್ಲಿ ಆಹಾರ ಸುರಕ್ಷತೆ ಮತ್ತು ಗುಣ ಮಟ್ಟ ಪ್ರಾಧಿಕಾರದ ಟ್ರೇಡ್​ ಮಾರ್ಕ್​ ಇಲ್ಲದೇ ಅನೇಕರು ಈ ಗೋಮೂತ್ರವನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದಾರೆ.

ಇದನ್ನೂ ಓದಿ: ದೀರ್ಘಾವಧಿ ಕೋವಿಡ್​​ಗೆ ಆಯುರ್ವೇದ ಚಿಕಿತ್ಸೆ ಉತ್ತಮ ಪರಿಹಾರವಾಗಬಲ್ಲದು!

ABOUT THE AUTHOR

...view details