ಕರ್ನಾಟಕ

karnataka

ETV Bharat / sukhibhava

ಕಣ್ಣಿನ ಸಮಸ್ಯೆ ಇಲ್ಲದ ರೋಗಿಗಳ ಕಣ್ಣೀರಿನಲ್ಲಿ ಕೋವಿಡ್​ ವೈರಸ್​ ಪತ್ತೆ! - ಪರೂಪ ಪ್ರಕರಣಗಳು ಕಂಡು ಬಂದಿದೆ

40 ರೋಗಿಗಳ ಪೈಕಿ ಐವರ ಆರ್​ಟಿ-​ಪಿಸಿಆರ್​ ವರದಿ ಬಳಸಿಕೊಂಡು ಕಣ್ಣೀರಿನ ಮಾದರಿ ಪರೀಕ್ಷಿಸಿದಾಗ ಕೋವಿಡ್​ ಪಾಸಿಟಿವ್​ ಕಂಡುಬಂದಿದೆ.

Covid virus detected in tears of patients without eye problems
Covid virus detected in tears of patients without eye problems

By ETV Bharat Karnataka Team

Published : Sep 14, 2023, 10:47 AM IST

ನವದೆಹಲಿ: ಕಣ್ಣಿನ ಯಾವುದೇ ಸಮಸ್ಯೆ ಇಲ್ಲದವರ ಕಣ್ಣೀರಿನಲ್ಲಿ ಕೋವಿಡ್​ನ ಸಾರ್ಸ್​ ಕೋವ್​ 2 ವೈರಸ್​ ಪತ್ತೆಯಾಗಿರುವ ಅಪರೂಪದ ಪ್ರಕರಣಗಳು ಬೆಳಕಿಗೆ ಬರುತ್ತಿವೆ ಎಂದು ಇತ್ತೀಚೆಗೆ ಏಮ್ಸ್​ ನಡೆಸಿದ ಸಂಶೋಧನೆಯಲ್ಲಿ ತಿಳಿಸಿದೆ. ಈ ಅಧ್ಯಯನ ವರದಿಯನ್ನು ಕ್ಯೂರಿಯನ್​ ಜರ್ನಲ್​ನಲ್ಲಿ ಪ್ರಕಟಿಸಲಾಗಿದೆ.

ಈ ಸಂಬಂಧ 40 ರೋಗಿಗಳನ್ನು ಅಧ್ಯಯನಕ್ಕೆ ಒಳಪಡಿಸಲಾಗಿತ್ತು. ಮೂರು ಗುಂಪುಗಳಲ್ಲಿ ನಡೆಸಿದ ಅಧ್ಯಯನದಲ್ಲಿ 26 ಜನರನ್ನು ಅಂದರೆ, ಶೇ 65ರಷ್ಟು ಮಧ್ಯ ಕೋವಿಡ್​ ಹೊಂದಿದ್ದು, ಶೇ 15 ರಷ್ಟು ಅಂದರೆ ಆರು ಮಂದಿ ತೀವ್ರ ಕೋವಿಡ್​​ ಹಾಗೂ ಉಳಿದ ಮಂದಿಯನ್ನು ಸೌಮ್ಯ ಕೋವಿಡ್ ಹೊಂದಿರುವವರು ಎಂದು ವರ್ಗೀಕರಿಸಲಾಗಿದೆ.

40 ರೋಗಿಗಳಲ್ಲಿ ಐದು ಮಂದಿಯ ಆರ್​ಟಿ​-ಪಿಸಿಆರ್ ವರದಿ​ ಬಳಸಿಕೊಂಡು ಕಣ್ಣೀರಿನ ಮಾದರಿ ಪರೀಕ್ಷಿಸಿದಾಗ ಕೋವಿಡ್​ ಇರುವುದು ತಿಳಿದು​ ಬಂದಿದೆ. ಕೋವಿಡ್​ ಸೋಂಕಿತ​ ಪ್ರಕರಣದಲ್ಲಿ ಶೇ 20ರಷ್ಟು ಮಂದಿಯಲ್ಲಿ ಕಣ್ಣಿನ ಸಮಸ್ಯೆ ಕಂಡುಬಂದರೆ, ಉಳಿದವರಲ್ಲಿ ಯಾವುದೇ ಕಣ್ಣಿನ ರೋಗ ಪತ್ತೆ ಆಗಿಲ್ಲ.

ಏಳು ರೋಗಿಗಳಲ್ಲಿ ಕಣ್ಣಿನ ರೋಗ ಲಕ್ಷಣಗಳಾದ ಕಾಂಜಕ್ಟಿವಲ್ ಹೈಪರ್ಮಿಯಾ, ಎಪಿಫೊರಾ, ತುರಿಕೆಯಂತಹ ಲಕ್ಷಣಗಳು ಗೋಚರಿಸಿವೆ. ಇದರಲ್ಲಿ ಶೇ 14ಷ್ಟು ಮಂದಿಯಲ್ಲಿ ಕಣ್ಣೀರಿನ ಆರ್‌ಟಿ-ಪಿಸಿಆರ್​ನಲ್ಲಿ ಕೋವಿಡ್​ ಪಾಸಿಟಿವ್​ ಕಂಡುಬಂದಿದೆ. ಉಳಿದ ಆರು ಮಂದಿ ಕಣ್ಣೀರಿನ ಆರ್​ಟಿ-ಪಿಸಿಆರ್​ ಪರೀಕ್ಷೆಯಲ್ಲಿ ಕೋವಿಡ್​ ನೆಗೆಟಿವ್​ ಕಂಡುಬಂದಿದೆ.

ಕಣ್ಣಿನ ರೋಗ ಲಕ್ಷಣಗಳನ್ನು ಹೊಂದಿರುವ ಮತ್ತು ಇಲ್ಲದ ರೋಗಿಗಳ ಕಣ್ಣೀರಿನ ಮಾದರಿಯಲ್ಲಿ ಕೋವಿಡ್​ ಪಾಸಿಟಿವ್​ ಪತ್ತೆಯಾಗಿದೆ ಎಂದು ಏಮ್ಸ್​ನ ಕನಿಷ್ಕ್​ ಸಿಂಗ್​ ತಿಳಿಸಿದ್ದಾರೆ. ಕಣ್ಣಿನ ಕುರಿತಾದ ಕೋವಿಡ್​ 19 ರೋಗಿಗಳ ಒಳಗೊಳ್ಳುವಿಕೆ ಸೀಮಿತ ವರದಿ ಹೊಂದಿದೆ ಎಂದು ಸಂಶೋಧಕರು ತಿಳಿಸಿದ್ದಾರೆ. ಕೋವಿಡ್​​ ದೃಢಪಟ್ಟ ರೋಗಿಗಳಲ್ಲಿ ಕಾಂಜೆಕ್ಟಿವಿಲ್​ ಸ್ವ್ಯಾಬ್​​ಗಳ ಮೂಲಕ ಸಾರ್ಸ್​ ಕೋವ್​​ 2 ಪತ್ತೆ ಹಚ್ಚುವಿಕೆಯನ್ನು ಅಧ್ಯಯನ ತೋರಿಸುತ್ತದೆ. ಆದರೂ ಇದರ ಪಾಸಿಟಿವಿಟಿ ದರ ಕಡಿಮೆ ಇದೆ ಎಂದಿದ್ದಾರೆ.

ಕಣ್ಣೀರಿನಲ್ಲಿ ಕಂಡುಬರುವ ವೈರಸ್​ ಕಡಿಮೆ ಹರಡುವಿಕೆ ಹೊಂದಿದೆ. ಆದರೆ ಕಣ್ಣಿನ ಮೂಲಕ ಹರಡುವ ಅಪಾಯವಿದೆ. ಈ ಸಂಬಂಧ ವೈದ್ಯಕೀಯ ಸಿಬ್ಬಂದಿ ಸಮಯದಲ್ಲಿ ಎಚ್ಚರಿಕೆಯ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು. ಕೋವಿಡ್​ ಪತ್ತೆಯಾದ ರೋಗಿಗಳ ಹರಡುವಿಕೆ ಅಪಾಯವನ್ನು ಕಡಿಮೆ ಮಾಡಬೇಕು ಎಂದು ಸಂಶೋಧಕರು ಹೇಳಿದ್ದಾರೆ.

ಕಣ್ಣಿನ ರೋಗ ಲಕ್ಷಣ ಇಲ್ಲದಿದ್ದರೂ ಕಣ್ಣೀರಿನ ಮಾದರಿ ಮೂಲಕ ರೋಗದ ಹರಡುವಿಕೆ ಆತಂಕ ಮೂಡಿಸಿದೆ. ಕೋವಿಡ್-19 ರೋಗನಿರ್ಣಯಕ್ಕಾಗಿ ಕಣ್ಣೀರಿನ ಮಾದರಿಗಳನ್ನು ಮಾತ್ರ ಅವಲಂಬಿಸುವುದನ್ನು ತಪ್ಪಿಸಬೇಕು ಎಂದು ಸಲಹೆ ನೀಡಿದ್ದಾರೆ. (ಐಎಎನ್​ಎಸ್​)

ಇದನ್ನೂ ಓದಿ: 28 ಅಪಾಯಕಾರಿ ಕೋವಿಡ್ ತಳಿಗಳನ್ನು ಪತ್ತೆ ಮಾಡಿದ ಜರ್ಮನ್​ ವಿಜ್ಞಾನಿಗಳು​

ABOUT THE AUTHOR

...view details