ಕರ್ನಾಟಕ

karnataka

ETV Bharat / sukhibhava

ಕೊಲೆಸ್ಟ್ರಾಲ್ ಹೊಂದಿರುವ ಕೋವಿಡ್-19 ರೋಗಿಗಳಲ್ಲಿ ಹೃದಯಾಘಾತದ ಅಪಾಯ ಹೆಚ್ಚು: ಅಧ್ಯಯನ - ಕೊಲೆಸ್ಟ್ರಾಲ್ ಹೊಂದಿರುವ ಕೋವಿಡ್-19 ರೋಗಿ

ಕೊಲೆಸ್ಟ್ರಾಲ್ ಅಥವಾ ಹೃದ್ರೋಗ ಹೊಂದಿದ್ದವರು ಕೋವಿಡ್ -19 ಸೋಂಕಿಗೆ ಒಳಗಾದರೆ, ಅವರು ಹೃದಯಾಘಾತದ ಅಪಾಯವನ್ನು ಹೊಂದಿರುತ್ತಾರೆ ಎಂದು ಸಂಶೋಧನೆಯೊಂದು ತಿಳಿಸಿದೆ.

Covid raises heart attack risk in people with high cholesterol
Covid raises heart attack risk in people with high cholesterol

By

Published : May 28, 2021, 8:29 PM IST

ಹೈದರಾಬಾದ್:ಆನುವಂಶಿಕ ಅಧಿಕ ಕೊಲೆಸ್ಟ್ರಾಲ್ ಅಥವಾ ಹೃದ್ರೋಗ ಹೊಂದಿದ್ದವರು ಕೋವಿಡ್ -19 ಸೋಂಕಿಗೆ ಒಳಗಾದರೆ, ಅವರು ಹೃದಯಾಘಾತದ ಅಪಾಯವನ್ನು ಹೊಂದಿರುತ್ತಾರೆ ಎಂದು ಹೊಸ ಸಂಶೋಧನೆಯೊಂದು ತಿಳಿಸಿದೆ.

ಫ್ಯಾಮಿಲಿಯಲ್ ಹೈಪರ್ಕೊಲೆಸ್ಟರಾಲ್ಮಿಯಾ (ಎಫ್‌ಹೆಚ್) ಒಂದು ಸಾಮಾನ್ಯ ಆನುವಂಶಿಕ ಸ್ಥಿತಿಯಾಗಿದ್ದು, ಇದು ಲಿಪೊಪ್ರೋಟೀನ್ ಕೊಲೆಸ್ಟ್ರಾಲ್ (ಎಲ್‌ಡಿಎಲ್-ಸಿ) ಮಟ್ಟದಿಂದಾಗಿ ಹೃದಯರಕ್ತನಾಳದ ಕಾಯಿಲೆಯನ್ನು 20 ಪಟ್ಟು ಹೆಚ್ಚಿಸುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ಅಮೆರಿಕನ್ ಜರ್ನಲ್ ಆಫ್ ಪ್ರಿವೆಂಟಿವ್ ಕಾರ್ಡಿಯಾಲಜಿಯಲ್ಲಿ ಪ್ರಕಟವಾದ ಈ ಅಧ್ಯಯನವು ಕೋವಿಡ್ -19 ಹೃದಯ ಸಂಬಂಧಿ ಕಾಯಿಲೆ (ಎಎಸ್‌ಸಿವಿಡಿ) ಹೊಂದಿರುವ ವ್ಯಕ್ತಿಗಳಲ್ಲಿ ಹೃದಯಾಘಾತದ ಪ್ರಮಾಣವನ್ನು ಹೆಚ್ಚಿಸುತ್ತದೆ ಎಂದು ಖಚಿತಪಡಿಸುತ್ತದೆ.

ಅಧ್ಯಯನಕ್ಕಾಗಿ, ತಂಡವು 55,412,462 ವ್ಯಕ್ತಿಗಳ ವಿಶ್ಲೇಷಣೆಯನ್ನು ನಡೆಸಿತು. ಫ್ಯಾಮಿಲಿಯಲ್ ಹೈಪರ್ಕೊಲೆಸ್ಟರಾಲ್ಮಿಯಾ ಹೊಂದಿರುವ ಮತ್ತು ಅದರೊಂದಿಗೆ ಕೋವಿಡ್ -19 ಸೋಂಕು ಹೊಂದಿರುವವರನ್ನು ಗುಂಪುಗಳಾಗಿ ಬೇರ್ಪಡಿಸಿ, ಅಧ್ಯಯನ ನಡೆಸಲಾಯಿತು.

ಕೋವಿಡ್ -19 ಹೊಂದಿರುವವರಲ್ಲಿ ಹೃದಯಾಘಾತದ ಪ್ರಮಾಣವು ಹೆಚ್ಚು ಎಂದು ಸಂಶೋಧಕರು ಕಂಡುಕೊಂಡಿದ್ದಾರೆ.

For All Latest Updates

TAGGED:

ABOUT THE AUTHOR

...view details