ನವದೆಹಲಿ:ನೆರೆಯ ಚೀನಾ ದೇಶದಲ್ಲಿ ಕೋವಿಡ್ ಉಲ್ಬಣಗೊಳ್ಳುತ್ತಿರುವುದು ಭಾರತದಲ್ಲೂ ಆತಂಕ ಮೂಡಿಸಿದೆ. ಆದರೆ, ದೆಹಲಿ ಸೇರಿದಂತೆ ದೇಶದಲ್ಲಿ ಕೋವಿಡ್-19 ಪ್ರಕರಣಗಳು ನಿಯಂತ್ರಣದಲ್ಲಿದೆ. ಪ್ರಸ್ತುತ ದೆಹಲಿಯಲ್ಲಿ ಸೋಂಕಿನ ಪ್ರಮಾಣ 0.26ರಷ್ಟಿದೆ. ಆದರೂ, 20 ಲಕ್ಷ ದೆಹಲಿಗರು ಸೋಂಕಿಗೆ ಒಳಗಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಎರಡನೇ ಅಲೆಯಲ್ಲಿ ರಾಷ್ಟ್ರ ರಾಜಧಾನಿ ಕೋವಿಡ್ ಹೊಡೆತಕ್ಕೆ ಸಿಲುಕಿದ ಹಿನ್ನೆಲೆ ಮುನ್ನೆಚ್ಚರಿಗೆ ಮುಂದಾಗಲಾಗಿದ್ದು, ಸದ್ಯ, ರಾಷ್ಟ್ರ ರಾಜಧಾನಿಯಲ್ಲಿ ಕೋವಿಡ್ ಮುಂಜಾಗ್ರತೆಗಳನ್ನು ವಹಿಸಲಾಗಿದೆ. ಈ ಹಿಂದೆ ಮಾಸ್ಕ್ ಧರಿಸುವ ನಿಯಮವನ್ನು ಸಡಿಸಲಾಗಿದ್ದು, ಮತ್ತೆ ಜಾರಿಗೆ ತರಲು ಮುಂದಾಗಲಾಗಿದೆ.
ರಾಜಧಾನಿಯಲ್ಲಿ ಸೋಂಕಿನ ಪ್ರಮಾಣ ಕಡಿಮೆ ಇದ್ದ ಹಿನ್ನೆಲೆ ಕಳೆದ ಹಲವು ತಿಂಗಳಿನಿಂದ ನವರಾತ್ರಿ, ದೀಪಾವಳಿ ಮತ್ತು ಛತ್ ಪೂಜಾ ಸಮಾರಂಭದ ಹಿನ್ನೆಲೆ ಜನರ ಹಬ್ಬದ ಆಚರಣೆಗಾಗಿ ಕೋವಿಡ್ ನಿಯಮ ಸಡಿಲಿಸಲಾಗಿತ್ತು.
ಚೀನಾದಲ್ಲಿ ಹೆಚ್ಚಿದ ಸೋಂಕು: ಸದ್ಯ ಸೋಂಕಿನ ಏರಿಕೆ ರಾಷ್ಟ್ರ ರಾಜಧಾನಿ ಸೇರಿದಂತೆ ಇತರ ರಾಜ್ಯದಲ್ಲಿ ಕಂಡಿಲ್ಲ. ಕೊರೋನಾ ವೈರಸ್ ದುರ್ಬಲವಾಗಿದೆ ಎಂದು ಭಾವಿಸಲಾಗಿತ್ತು. ಇದೇ ಹಿನ್ನೆಲೆ ಯಾವುದೇ ಹಾನಿ ಆಗುವುದಿಲ್ಲ ಎನ್ನಲಾಗಿತ್ತು. ಆದರೆ, ಈಗ ಚೀನಾ, ಜಪಾನ್, ಅಮೆರಿಕದಲ್ಲಿ ಸೋಂಕಿನ ಪ್ರಮಾಣ ಹೆಚ್ಚುತ್ತಿರುವುದು ದೇಶದಲ್ಲೂ ಆತಂಕ ಮೂಡಿಸಿದೆ. ಈ ಕುರಿತು ಸಲಹೆ ನೀಡಿರುವ ತಜ್ಞರು ಆತಂಕದ ಅವಶ್ಯಕತೆ ಇಲ್ಲ, ಜನರು ಮುನ್ನೆಚ್ಚರಿಕೆ ಪಾಲಿಸುವುದು ಒಳ್ಳೆಯದು ಎಂದು ಸೂಚನೆ ನೀಡಿದ್ದಾರೆ.
ಮೊದಲ ಕೋವಿಡ್ ಅಲೆಯಲ್ಲಿ ಕೋವಿಡ್ ಪತ್ತೆಯಾದಾಗ ಅಲ್ಪಾ ವೆರಿಯಂಟ್ 'ಆರ್2' ಇತ್ತು. 2020 ರಲ್ಲಿ ಆಲ್ಫಾ ರೂಪಾಂತರದಿಂದ ಸೋಂಕು ಹೆಚ್ಚಾದಾಗ ಜನರಲ್ಲಿ ಭೀತಿ ಇತ್ತು. ನಂತರ 5-6 ರ ರೂಪಾಂತರದೊಂದಿಗೆ ಡೆಲ್ಟಾ ರೂಪಾಂತರವು 2021 ರಲ್ಲಿ ಅನೇಕ ಹಾನಿಗೆ ಕಾರಣವಾಯಿತು.
ಚೀನಾದಲ್ಲಿ ಸೋಂಕಿನ ಹರುಡುವಿಕೆ ಹೆಚ್ಚು: ಪ್ರಸ್ತುತ ಚೀನಾದಲ್ಲಿ ಸಮಾನಾಂತರದ ರೂಪಾಂತಾರ ಇದ್ದು, ಇದರ ಉತ್ಪಾದನ ಅಂಶ 18 ಆಗಿದೆ. ಇದರಿಂದ ಸೋಂಕು ತೀವ್ರತರದಲ್ಲಿ ಹರಡುತ್ತದೆ. ಈ ಹಿನ್ನೆಲೆ ಮುನ್ನೆಚ್ಚರಿಕೆ ವಹಿಸಬೇಕಿದೆ. ವೈರಸ್ ಪರಿಣಾಮ ಉಸಿರಾಟದ ಸಮಸ್ಯೆ ಹೊಂದಿರುವವರಲ್ಲಿ ಪತ್ತೆಯಾಗುತ್ತಿದ್ದು, ಪ್ರತಿರೋಧಕ ಶಕ್ತಿ ಕಡಿಮೆ ಇರುವವರಲ್ಲಿ ಕಂಡು ಬರುತ್ತಿದೆ.
ಚೀನಾದಲ್ಲಿ ಕೋವಿಡ್ ಉಲ್ಬಣಕ್ಕೆ ಆಡಳಿತ ಕಾರಣವಾಗಿದೆ. ಜೀರೋ ಟೊಲೊರೆನ್ಸ್ ಪಾಲಿಸಿ ಜೊತೆಗೆ ಅಲ್ಲಿನ ಲಸಿಕೆ ಪರಿಣಾಮಕಾರಿಯಾಗಿಲ್ಲ. ಜೊತೆಗೆ 19ರಿಂದ 60 ವರ್ಷದ ವಯೋಮಾನದೊಳಗಿನವರಿಗೆ ಮಾತ್ರ ಪ್ರಾಮುುಖ್ಯತೆ ಆಧಾರದ ಮೇಲೆ ಲಸಿಕೆ ನೀಡಿರುವುದು ಸಮಸ್ಯೆ ಉಲ್ಬಣಕ್ಕೆ ಕಾರಣವಾಗಿದೆ ಎಂದು ಡಾ. ರಾಮ್ ಎಸ್ ಉಪಾಧ್ಯಾಯ ತಿಳಿಸಿದ್ದಾರೆ.