ನವದೆಹಲಿ: ಕೋವಿಡ್ 19 ಲಸಿಕೆ ರೋಗ ನಿರೋಧಕ ಶಕ್ತಿ ಕ್ಷೀಣಿಸುತ್ತಿರುವ ಪರಿಣಾಮ ಮುಂಬರುವ ದಿನದಲ್ಲಿ ಹಾಂಕಾಂಗ್ನಲ್ಲಿ ಕೋವಿಡ್ 19 ಸೋಂಕಿನ ತೀವ್ರತೆ ಹೆಚ್ಚಲಿದೆ ಎಂದು ಸರ್ಕಾರದ ಸಾಂಕ್ರಾಮಿಕ ಸಲಹೆಗಾರರು ತಿಳಿಸಿದ್ದಾರೆ.
ಹಾಂಕಾಂಗ್ನಲ್ಲಿ ಹೊಸದಾಗಿ ಕೋವಿಡ್ ಪ್ರಕರಣಗಳು ದಾಖಲಾಗುತ್ತಿದ್ದು, ಎಕ್ಸ್ಬಿಬಿ (XBB) ಉಪತಳಿ ಈ ಕೋವಿಡ್ಗೆ ಕಾರಣವಾಗಿದ್ದು, ಇದರಿಂದ ದಿನನಿತ್ಯ 120 ಪ್ರಕರಣಗಳು ಆಸ್ಪತ್ರೆಗೆ ದಾಖಲಾಗುತ್ತಿದೆ ಎಂದು ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ.
ಚೈನೀಸ್ ಯುನಿವರ್ಸಿಟಿಯ ರೆಸ್ಪಿರೆಟರಿ ಮೆಡಿಸಿನ್ ಪ್ರೋ ಡೇವಿಡ್ ಹುಯಿ ಶು ಚಿಯೋಂಗ್ ಹೇಳುವಂತೆ ಆಸ್ಪತ್ರೆ ಪ್ರಾಧಿಕಾರ ದತ್ತಾಂಶದ ಮೇಲೆ ನ್ಯೂಕ್ಲಿಕ್ ಆಸಿಡ್ ಪರೀಕ್ಷೆಯ ದರವೂ ಸಕಾರಾತ್ಮಕವಾಗಿದೆ. ಈ ತಿಂಗಳು ಮತ್ತು ಡಿಸೆಂಬರ್ನಲ್ಲಿ ಕೋವಿಡ್ ಪ್ರಕರಣಗಳು ಉಲ್ಭಣವಾಗುವ ಸಾಧ್ಯತೆ ಹೆಚ್ಚಿದೆ. ಜ್ವರದ ಏರಿಕೆಯು ಮತ್ತಷ್ಟು ಹೆಚ್ಚಾಗಬಹುದು ಎಂದಿದ್ದಾರೆ.
ದೈನಂದಿನ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ:ಎಕ್ಸ್ಬಿಬಿ ತಳಿಯಿಂದ ದಿನಕ್ಕೆ 100 ರಿಂದ 120 ಪ್ರಕರಣಗಳು ಆಸ್ಪತ್ರೆಗೆ ದಾಖಲಾಗುತ್ತಿದ್ದು, ಶೇ 98 ಪ್ರಕರಣಗಕ್ಕೆ ಇದು ಕಾರಣವಾಗಿದೆ. ಈ ಹಿಂದೆ ಇದೇ ವರ್ಷ ಏಪ್ರಿಲ್ ಮತ್ತು ಮೇ ಅಲ್ಲಿ ಕೋವಿಡ್ ಪ್ರಕರಣಗಳು ಉಲ್ಬಣಗೊಂಡಿತು. ಆರು ತಿಂಗಳ ಬಳಿಕ ಪ್ರಕರಣಗಳ ಸಂಖ್ಯೆ ಕ್ಷೀಣಿಸಿತು. ಇದೀಗ ಮತ್ತೊಮ್ಮೆ ಈ ತಿಂಗಳು ಅಥವಾ ಈ ವರ್ಷಾಂತ್ಯದಲ್ಲಿ ಮತ್ತೆ ಏರಿಕೆ ಕಾಣುವ ಸಾಧ್ಯತೆ ಇದೆ ಎಂದರು.
ಕೋವಿಡ್ 19 ಲಸಿಕೆಗಳುಗಳ ನಿರ್ವಹಣೆ ಮಾಡಲಾಗುತ್ತಿದೆ. ವಿಶೇಷವಾಗಿ ಇವು ಎಕ್ಸ್ಬಿಬಿ ತಳಿಗಳ ಗುರಿಗಳನ್ನು ಹೊಂದಿಲ್ಲ. ಫೈಜರ್ ಮತ್ತು ಮೊರ್ಡಾನಾದ ಮೂರನೇ ತಲೆಮಾರಿನ ಲಸಿಕೆಗಳನ್ನು ಈ ಎಕ್ಸ್ಬಿಬಿ 1.5 ಪ್ರಾಥಮಿಕ ಪ್ರತಿಜನಕವಾಗಿ ಬಳಕೆ ಮಾಡಲಾಗಿದೆ.