ನವದೆಹಲಿ: ಭಾರತದಲ್ಲಿ 605 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. ದೇಶದಲ್ಲಿ ಪ್ರಸ್ತುತ ಕೋವಿಡ್ ಪ್ರಕರಣಗಳ ಸಂಖ್ಯೆ 4,002 ಆಗಿದೆ. ಇನ್ನು ಕೋವಿಡ್ನಿಂದ ಕಳೆದ 24 ದೇಶದಲ್ಲಿ ನಾಲ್ಕು ಸಾವು ಸಂಭವಿಸಿದ್ದು, ಕೇರಳದಲ್ಲಿ ಎರಡು, ಕರ್ನಾಟಕ ಮತ್ತು ತ್ರಿಪುರಾದಲ್ಲಿ ತಲಾ ಒಂದು ಸಾವು ವರದಿಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಕೇರಳದಲ್ಲಿ 70 ವರ್ಷದ ವ್ಯಕ್ತಿ ಕೋವಿಡ್ನಿಂದ ಸಾವನ್ನಪ್ಪಿದ್ದಾರೆ. ಇವರು ದೀರ್ಘಾವಧಿಯ ಅಬ್ಸಟ್ರಕ್ಟಿವ್ ಪಲ್ಮನರಿ ಡೀಸಿಸ್ನಿಂದ ಬಳಲುತ್ತಿದ್ದರು. ಟಿ2ಡಿಎಂ ಮತ್ತು ಎಚ್ಟಿಎನ್ನಿಂದ ಬಳಲುತ್ತಿದ್ದ 81 ವರ್ಷ ವ್ಯಕ್ತಿ ಸಾವನ್ನಪ್ಪಿದ್ದಾರೆ. ಕರ್ನಾಟಕದಲ್ಲಿ ಸಿಎ ಮತ್ತು ಟಿಬಿಯಿಂದ ಬಳಲುತ್ತಿದ್ದ 48 ವರ್ಷದ ವ್ಯಕ್ತಿ ಸಾವನ್ನಪ್ಪಿದ್ದಾರೆ. ತ್ರಿಪುರಾದಲ್ಲಿ ಕೋವಿಡ್ನಿಂದ ವ್ಯಕ್ತಿ ಮೃತಪಟ್ಟಿದ್ದಾರೆ.
ಕೋವಿಡ್ 19 ಉಪತಳಿ ಜೆಎನ್.1 ಪ್ರಕರಣಗಳು ದೇಶದ 12 ರಾಜ್ಯದಲ್ಲಿ ಪತ್ತೆಯಾಗಿದ್ದು, 682 ಪ್ರಕರಣಗಳು ದಾಖಲಾಗಿವೆ. ಕರ್ನಾಟಕದಲ್ಲಿ 199, ಕೇರಳದಲ್ಲಿ 148, ಮಹಾರಾಷ್ಟ್ರದಲ್ಲಿ 139, ಗೋವಾದಲ್ಲಿ 47, ಗುಜರಾತ್ 36, ಆಂಧ್ರಪ್ರದೇಶದಲ್ಲಿ 30, ರಾಜಸ್ಥಾನದಲ್ಲಿ 30, ತಮಿಳುನಾಡಿನಲ್ಲಿ 26, ದೆಹಲಿಯಲ್ಲಿ 21 ಮತ್ತು ಒಡಿಶಾದಲ್ಲಿ 3, ತೆಲಂಗಾಣದಲ್ಲಿ 2 ಮತ್ತು ಹರಿಯಾಣದಲ್ಲಿ 1 ಪ್ರಕರಣ ವರದಿಯಾಗಿವೆ. ಕಳೆದ ಡಿಸೆಂಬರ್ 5ರಿಂದ ಕೋವಿಡ್ ಪ್ರಕರಣಗಳ ಸಂಖ್ಯೆ ಏರಿಕೆ ಕಾಣುತ್ತಿದೆ. ಹೊಸ ಕೋವಿಡ್ ತಳಿ ಮತ್ತು ಚಳಿಗಾಲದ ತಾಪಮಾನವು ಕೋವಿಡ್ ಪ್ರಕರಣಗಳ ಉಲ್ಬಣಕ್ಕೆ ಕಾರಣವಾಗಿದೆ ಎನ್ನಲಾಗ್ತಿದೆ.
ಕರ್ನಾಟಕದಲ್ಲಿ ಅತಿ ಹೆಚ್ಚು ಸಕ್ರಿಯ ಕೋವಿಡ್ ಪ್ರಕರಣಗಳಿದೆ. ಪ್ರಸ್ತುತ ರಾಜ್ಯದಲ್ಲಿ 1,181 ಕೋವಿಡ್ ಪ್ರಕರಣಗಳು ದಾಖಲಾಗಿವೆ. ಜನವರಿ 7 ರಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ತಿಳಿಸಿರುವಂತೆ 11,838 ಕೋವಿಡ್ ಪರೀಕ್ಷೆ ನಡೆಸಲಾಗಿದೆ.