ಹೈದರಾಬಾದ್:ಕೋವಿಡ್-19 ಗರ್ಭಿಣಿಯರಲ್ಲಿ ಅಥವಾ ಜನನ ನಿಯಂತ್ರಣ ಅಥವಾ ಹಾರ್ಮೋನ್ ರಿಪ್ಲೇಸ್ಮೆಂಟ್ ಥೆರಪಿಯ ಈಸ್ಟ್ರೊಜೆನ್ ತೆಗೆದುಕೊಳ್ಳುವವರಲ್ಲಿ ರಕ್ತ ಹೆಪ್ಪುಗಟ್ಟುವಿಕೆಯ ಅಪಾಯ ಜಾಸ್ತಿ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಕೋವಿಡ್ ಸೋಂಕಿಗೆ ಒಳಗಾದ ಗರ್ಭಿಣಿಯರಲ್ಲಿ ರಕ್ತ ಹೆಪ್ಪುಗಟ್ಟುವ ಅಪಾಯ ಹೆಚ್ಚು: ವಿಜ್ಞಾನಿಗಳ ಎಚ್ಚರಿಕೆ - ರಕ್ತ ಹೆಪ್ಪುಗಟ್ಟುವ ಅಪಾಯ
ಗರ್ಭಾವಸ್ಥೆಯಲ್ಲಿ, ಗರ್ಭನಿರೋಧಕ ಮಾತ್ರೆಗಳ ಸೇವನೆ ಮಾಡುವವರಲ್ಲಿ, ಹೆರಿಗೆ ಮಾತ್ರೆಗಳ ಸೇವನೆಯಲ್ಲಿ ಅಥವಾ ಹಾರ್ಮೋನ್ ರಿಪ್ಲೇಸ್ಮೆಂಟ್ ಥೆರಪಿಯ ಈಸ್ಟ್ರೊಜೆನ್ ತೆಗೆದುಕೊಳ್ಳುವ ಮಹಿಳೆಯರಲ್ಲಿ ರಕ್ತ ಹೆಪ್ಪುಗಟ್ಟುವ ಸಾಧ್ಯತೆ ಹೆಚ್ಚಿದೆ ಎಂದು ಸಂಶೋಧನೆಯೊಂದು ಹೇಳಿದೆ.

blood clot
ಅಮೆರಿಕದ ಟಫ್ಟ್ಸ್ ಯೂನಿವರ್ಸಿಟಿ ಸ್ಕೂಲ್ ಆಫ್ ಮೆಡಿಸಿನ್ ಸೇರಿದಂತೆ ಇತರ ಸಂಶೋಧಕರ ಪ್ರಕಾರ, ಕೋವಿಡ್-19ನ ಅನೇಕ ತೊಡಕುಗಳಲ್ಲಿ ಆರೋಗ್ಯವಂತ ಜನರಲ್ಲಿಯೂ ರಕ್ತ ಹೆಪ್ಪುಗಟ್ಟುವಿಕೆ ಸಾಧ್ಯತೆ ಇದೆ ಎಂದು ಎಚ್ಚರಿಸಿದ್ದಾರೆ.
ಕೋವಿಡ್-19 ಸೋಂಕಿಗೆ ಒಳಗಾದ ಮಹಿಳೆಯರಲ್ಲಿ ಗರ್ಭಾವಸ್ಥೆಯಲ್ಲಿ, ಗರ್ಭನಿರೋಧಕ ಮಾತ್ರೆಗಳ ಸೇವೆನೆಯಲ್ಲಿ, ಹೆರಿಗೆಯ ಮಾತ್ರೆಗಳ ಸೇವನೆಯಲ್ಲಿ ಅಥವಾ ಹಾರ್ಮೋನ್ ರಿಪ್ಲೇಸ್ಮೆಂಟ್ ಥೆರಪಿ ತೆಗೆದುಕೊಳ್ಳುವ ಮಹಿಳೆಯರಲ್ಲಿ ರಕ್ತ ಹೆಪ್ಪುಗಟ್ಟುವ ಸಾಧ್ಯತೆ ಹೆಚ್ಚಿದೆ ಎಂದು ಸಂಶೋಧನೆಯಿಂದ ಕಂಡು ಕೊಂಡಿದ್ದಾರೆ.