ನ್ಯೂಯಾರ್ಕ್( ಅಮೆರಿಕ): ಕೋವಿಡ್ 19 ಪ್ರಭಾವ ಮಹಿಳೆಯರ ಋತುಚಕ್ರದ ಮೇಲೂ ಪರಿಣಾಮ ಬೀರಿರುವುದು ಸುಳ್ಳಲ್ಲ. ಇದರಿಂದ ಋತುಚಕ್ರ ಅವಧಿಯ ಮೇಲೆ ಸಣ್ಣ ಮತ್ತು ತಾತ್ಕಾಲಿಕ ಬದಲಾವಣೆಗಳು ಆಗಿದೆ ಎಂದು ಹೊಸ ಅಧ್ಯಯನವೊಂದು ತಿಳಿಸಿದೆ. ಸಂಶೋಧಕರು ಇದೇ ವೇಳೆ, ಈ ಬದಲಾವಣೆಗಳು ಸಣ್ಣದಿದ್ದು, ಇದು ಮುಂದಿನ ಋತುಚಕ್ರದ ಅವಧಿಯಲ್ಲಿ ಸಾಮಾನ್ಯಕ್ಕೆ ಹಿಂದಿರುಗಲಿದೆ ಎಂದು ಒತ್ತಿ ಹೇಳಿದ್ದಾರೆ.
ಈ ಅಧ್ಯಯನವನ್ನು ಒಬೆಸ್ಟ್ರಿಕ್ ಅಂಡ್ ಗೈನಾಕಾಲಾಜಿಯಲ್ಲಿ ಪ್ರಕಟಿಸಲಾಗಿದೆ. 110 ದೇಶದಲ್ಲಿ ಋತುಚಕ್ರದ ದಿನಾಂಕದಿಂದ 6 ಸಾವಿರ ಮಂದಿ ಋತುಚಕ್ರ ಮತ್ತು ಸಂತಾನೋತ್ಪತ್ತಿಯ ಆರೋಗ್ಯದ ಕುರಿತು ಸುಳಿವು ಪಡೆಯುತ್ತಿದ್ದಾರೆ. ಲಸಿಕೆ ಪಡೆಯದ ಭಾಗಿದಾರರು ಸಂಶೋಧನೆ ವೇಳೆ ಕೋವಿಡ್ ಅನಾರೋಗ್ಯಕ್ಕೆ ಒಳಗಾಗಿನಿಂದಲೂ ತಮ್ಮ ಈ ಹಿಂದಿನ ಋತುಚಕ್ರದ ಸಮಯಕ್ಕೆ ಹೋಲಿಕೆ ಮಾಡಿದಾಗ ಅವರ ಋತುಚಕ್ರದ ಅವಧಿ 1.45 ದಿನಕ್ಕೆ ಹೆಚ್ಚಾಗಿದೆ. ಈ ಹೆಚ್ಚಳವೂ ಕೋವಿಡ್ ಲಸಿಕೆ ಪಡೆದವರಲ್ಲಿ ನಿಯಮಿತವಾಗಿ ಬದಲಾಗುತ್ತಿದೆ.
ಈ ಸಮಯದ ಹೆಚ್ಚಳವೂ ಕೋವಿಡ್ ಲಸಿಕೆ ಪಡೆದ ಬಳಿಕ ಅಥವಾ ಅನಾರೋಗ್ಯಕ್ಕೆ ಒಳಗಾದ ಬಳಿಕ ಪರಿಹಾರವಾಗಿದೆ. ಜೊತೆಗೆ ಪ್ರತಿರೋಧಕ ಮತ್ತು ಸಂತಾನೋತ್ಪತ್ತಿ ವ್ಯವಸ್ಥೆ ಒಂದಕ್ಕೆ ಒಂದು ಸಂಪರ್ಕ ಹೊಂದಿದೆ. ಈ ಹಿನ್ನೆಲೆ ಇದರ ಫಲಿತಾಂಶವೂ ಅಚ್ಚರಿಕರವಾಗಿದೆ. ಅವರು ಸಾರ್ವಜನಿಕ ಅನುಭವವನ್ನು ಮೌಲ್ಯೀಕರಣಗೊಳಿಸಬೇಕಿದೆ. ಕೋವಿಡ್ ಸೋಂಕಿನ ಬಳಿಕ ಈ ಬದಲಾವಣೆ ಕಂಡರೆ ಇದು ಸಣ್ಣ ಅವಧಿ ಮತ್ತು ತಾತ್ಕಲಿಕವಾಗಿದೆ ಎಂದು ತಿಳಿಸಬೇಕಿದೆ.