ಕರ್ನಾಟಕ

karnataka

ETV Bharat / sukhibhava

ಕ್ಯಾನ್ಸರ್ ಕುರಿತಾಗಿರುವ ಕೆಲ ಕಲ್ಪನೆಗಳು ಹಾಗೂ ಸತ್ಯಗಳು... - ಕ್ಯಾನ್ಸರ್​ಗೆ ಚಿಕಿತ್ಸೆ

ಕ್ಯಾನ್ಸರ್ ಕುರಿತಾದ ಕೆಲವು ತ್ವರಿತ ಸಲಹೆಗಳಿಗಾಗಿ ಸುಖೀಭವ ತಂಡ ಮುಂಬೈನ ನಾರೈಂಡಾಸ್ ಮೊರ್ಬಾಯ್ ಬುಧ್ರಾಣಿ ಟ್ರಸ್ಟ್‌ನಲ್ಲಿ ಮನಃಶಾಸ್ತ್ರಜ್ಞೆ ಮತ್ತು ಮಾಜಿ ವೃತ್ತಿ ಸಲಹೆಗಾರರಾದ ಎಂ.ಎಸ್. ಕಾಜಲ್ ಯು. ಅವರೊಂದಿಗೆ ಸಂವಾದ ನಡೆಸಿದೆ.

cancer
cancer

By

Published : Oct 19, 2020, 8:33 PM IST

ಹೈದರಾಬಾದ್: ಸುಧಾ, 42 ವರ್ಷದ ಮಹಿಳೆ ಕೌನ್ಸೆಲರ್ ಕ್ಯಾಬಿನ್‌ಗೆ ತನ್ನ ವೈದ್ಯಕೀಯ ಫೈಲ್ ಮತ್ತು ಆತಂಕಭರಿತ ಮೂಖದೊಂದಿಗೆ ಆಗಮಿಸಿ, ಕಣ್ಣೀರು ಸುರಿಸುತ್ತಾಳೆ. ಕೋಣೆಯಲ್ಲಿ ಮೊದಲ ಕೆಲವು ನಿಮಿಷಗಳ ಕಾಲ ಪಿನ್ ಡ್ರಾಪ್ ಮೌನವಿರುತ್ತದೆ. ಕೌನ್ಸಿಲರ್ ಆಕೆಯ ಆತಂಕದ ಕಾರಣವನ್ನು ಪರಿಶೀಲಿಸುತ್ತಾರೆ.

ಸುಧಾ ತನ್ನ ವೈದ್ಯಕೀಯ ಫೈಲನ್ನು ಹಸ್ತಾಂತರಿಸಿ, ಕೆಲ ರುಟೀನ್ ಪರೀಕ್ಷೆಗಳಿಗೆ ವೈದ್ಯರನ್ನು ಭೇಟಿಯಾಗಲು ಅವರು ರಕ್ತ ಪರೀಕ್ಷೆ ಮತ್ತು ಮ್ಯಾಮೊಗ್ರಫಿಗೆ ಸಲಹೆ ನೀಡಿರುವುದಾಗಿ ತಿಳಿಯುತ್ತದೆ.

ಕಷ್ಟಪಟ್ಟು ದುಡಿಯುವ ಗೃಹಿಣಿ ಮತ್ತು ಇಬ್ಬರು ಮಕ್ಕಳ ತಾಯಿ ಸುಧಾ. ಅವಳು ಈ ಪರೀಕ್ಷೆಗಳನ್ನು ನಡೆಸಬೇಕು ಎಂದು ಕೇಳಿಯೇ ಆತಂಕಕ್ಕೊಳಗಾಗಿದ್ದಾಳೆ. ನನಗೆ, ನನ್ನ ಮಕ್ಕಳಿಗೆ ಏನಾಗಬಹುದು? ನನ್ನ ಕುಟುಂಬವನ್ನು ನಾನು ಹೇಗೆ ನೋಡಿಕೊಳ್ಳಬಲ್ಲೆ? ಎಂಬ ಆಲೋಚನೆಗಳು ಅವಳ ಮನಸ್ಸಿನಲ್ಲಿ ಹರಿಯುತ್ತಿದೆ.

ಕೌನ್ಸಿಲರ್ ಆಕೆಯನ್ನು ಸಮಾಧಾನಪಡಿಸುತ್ತಾರೆ. ಆಕೆಗೆ ಪ್ರಾಥಮಿಕ ಪರೀಕ್ಷೆಗಳಿಗೆ ಒಳಗಾಗುವಂತೆ ಹೇಳಿದ ತಕ್ಷಣ, ಆಕೆಗೆ ಕ್ಯಾನ್ಸರ್ ಇದೆ ಎಂದು ಅರ್ಥವಲ್ಲ. ಸುಧಾಳರ ಕುಟುಂಬ ಕ್ಯಾನ್ಸರ್​ನ ಇತಿಹಾಸವನ್ನು ಹೊಂದಿದ್ದರಿಂದ ಇದು ಕೇವಲ ಆರಂಭಿಕ ಕ್ರಮವಾಗಿದೆ.

ಇಂದಿನ ವಿಜ್ಞಾನ ಮತ್ತು ಔಷಧದ ಸುಧಾರಣೆಯೊಂದಿಗೆ ಅನೇಕ ಕ್ಯಾನ್ಸರ್​ಗಳನ್ನು ಗುಣಪಡಿಸಲಾಗುತ್ತದೆ. ಅವುಗಳನ್ನು ಮೊದಲೇ ಪತ್ತೆ ಹಚ್ಚಿ ಸರಿಯಾಗಿ ಚಿಕಿತ್ಸೆ ನೀಡಲಾಗುತ್ತದೆ. ಈ ಮಾಹಿತಿಯನ್ನು ಪಡೆದ ಸುಧಾ, ವೈದ್ಯರು ಸೂಚಿಸಿದಂತೆ ಪರೀಕ್ಷೆಗೆ ಒಳಗಾಗಲು ಮಾನಸಿಕವಾಗಿ ಸಿದ್ಧಳಾಗಿ, ಪರೀಕ್ಷೆ ನಡೆಸಿ ಫಲಿತಾಂಶಗಳಿಗಾಗಿ ಕಾಯುತ್ತಿದ್ದಾಳೆ.

ಸುಧಾಳಂತೆ ಅನೇಕರು ಇದ್ದಾರೆ. ಪರೀಕ್ಷೆ ನಡೆಸಲು ಹೇಳಿದಾಕ್ಷಣ ಚಿಂತೆಗೊಳಗಾಗುತ್ತಾರೆ. ಕ್ಯಾನ್ಸರ್ ಎಂದು ಸಾವು ಸಂಭವಿಸಬಹುದು ಎಂದು ಅತಂಕಕೊಳ್ಳಗಾಗುತ್ತಾರೆ. ಆದರೆ ಕ್ಯಾನ್ಸರ್ ಎಂಬ ಈ ಯುದ್ಧದಲ್ಲಿ ಹೋರಾಡಿ ಅದರಿಂದ ಗೆದ್ದ ಧೈರ್ಯಶಾಲಿ ವ್ಯಕ್ತಿಗಳು ಹಾಗೂ ಗುಣಮುಖರಾದ ಅನೇಕ ಪ್ರಕರಣಗಳಿವೆ.

ಉತ್ತಮ ತಿಳುವಳಿಕೆಗಾಗಿ ನಾವು ಕಲ್ಪನೆ ಮತ್ತು ಸತ್ಯಗಳನ್ನು ತಿಳಿಯೋಣ:

ಕಲ್ಪನೆ: ಕ್ಯಾನ್ಸರ್ ಇರುವವರು ಇತರರಿಂದ ದೂರವಿರಬೇಕು.

ಸತ್ಯ: ಕ್ಯಾನ್ಸರ್ ಸಾಂಕ್ರಾಮಿಕವಲ್ಲ; ಗೆಡ್ಡೆ ಅಥವಾ ಕ್ಯಾನ್ಸರ್ ಕೋಶಗಳು ದೇಹದೊಳಗೆ ಬೆಳೆಯುತ್ತವೆ ಮತ್ತು ಅದು ವೈರಸ್ ಅಥವಾ ಬ್ಯಾಕ್ಟೀರಿಯಾದಂತೆ ಹರಡುವುದಿಲ್ಲ.

ಕಲ್ಪನೆ: ಕ್ಯಾನ್ಸರ್ ಇರುವವರು ಸಾಯುತ್ತಾರೆ.

ಸತ್ಯ: ಕ್ಯಾನ್ಸರ್ ಮೂಲಕ ಬದುಕುಳಿದ ಮತ್ತು ಸಂತೋಷದಿಂದ ಬದುಕಿದ ಅನೇಕ ಜನರಿದ್ದಾರೆ.

ಕಲ್ಪನೆ: ಕ್ಯಾನ್ಸರ್ ಇದ್ದವರು ಮಕ್ಕಳಿಂದ ದೂರವಿರಬೇಕು.

ಸತ್ಯ: ಮೊದಲೇ ಹೇಳಿದಂತೆ ಇದು ಸಾಂಕ್ರಾಮಿಕವಲ್ಲ, ಆದ್ದರಿಂದ ಅದು ಮಕ್ಕಳ ಮೇಲೆ ಪರಿಣಾಮ ಬೀರುವುದಿಲ್ಲ.

ಕಲ್ಪನೆ: ಕ್ಯಾನ್ಸರ್ ಇರುವವರು ಮದುವೆಯಾಗಬಾರದು ಅಥವಾ ಮಕ್ಕಳನ್ನು ಹೊಂದಬಾರದು.

ಸತ್ಯ: ವೈದ್ಯರು ಮತ್ತು ಸ್ತ್ರೀರೋಗ ತಜ್ಞೆಯರ ಸಲಹೆಯಿಂದ ಹಾಗೂ ​​ಚಿಕಿತ್ಸೆಯ ಸರಿಯಾದ ಮಾರ್ಗದರ್ಶನದೊಂದಿಗೆ, ಕ್ಯಾನ್ಸರ್ ಹೊಂದಿರುವ ವ್ಯಕ್ತಿಯು ಈ ಸೂಕ್ಷ್ಮ ವಿಷಯಗಳ ಕುರಿತು ಕೆಲ ಪರಿಹಾರಗಳನ್ನು ಯೋಚಿಸಬಹುದು.

ಕಲ್ಪನೆ: ಕ್ಯಾನ್ಸರ್ ಚಿಕಿತ್ಸೆಯು ತುಂಬಾ ದುಬಾರಿಯಾಗಿದೆ ಮತ್ತು ಶಸ್ತ್ರ ಚಿಕಿತ್ಸೆ ಏಕೈಕ ಆಯ್ಕೆಯಾಗಿದೆ.

ಸತ್ಯ: ಹಣಕಾಸಿನ ನಿರ್ವಹಣೆ ಸರಿಯಾಗಿ ಮಾಡದಿದ್ದಲ್ಲಿ ಕ್ಯಾನ್ಸರ್ ಚಿಕಿತ್ಸೆ ದುಬಾರಿಯಾಗಬಹುದು. ಆದರೆ ಅನೇಕ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು ಚಿಕಿತ್ಸೆ ಪಡೆಯಲು ಕುಟುಂಬಗಳಿಗೆ ಸಹಾಯ ಮಾಡುತ್ತವೆ. ಚಿಕಿತ್ಸೆಗಾಗಿ ಹಣಕಾಸಿನ ಸಹಾಯ ಮಾಡುವ ಅನೇಕ ಎನ್​ಜಿಒಗಳಿವೆ. ಹೆಚ್ಚಿನ ಸಹಾಯಕ್ಕಾಗಿ ಚಿಕಿತ್ಸೆ ನೀಡುವ ವೈದ್ಯರು, ಸಾಮಾಜಿಕ ಕಾರ್ಯಕರ್ತರು ಮತ್ತು ಎನ್‌ಜಿಒಗಳನ್ನು ಸಂಪರ್ಕಿಸಬಹುದು. ಹಣಕಾಸಿನ ಕೊರತೆಯಿಂದಾಗಿ ಚಿಕಿತ್ಸೆಯಿಂದ ದೂರ ಉಳಿಯಬಾರದು.

ABOUT THE AUTHOR

...view details