ಈರುಳ್ಳಿಯಲ್ಲಿ ಹಲವು ಔಷಧೀಯ ಗುಣಗಳಿವೆ. ಇದು ಹಲವು ಬಗೆಯಲ್ಲಿ ನಮ್ಮ ಆರೋಗ್ಯ ವೃದ್ದಿಸುತ್ತದೆ. ಈರುಳ್ಳಿಯಲ್ಲಿ ಕೆಲ ಅವಶ್ಯಕ ವಿಟಮಿನ್ಗಳು ಹಾಗೂ ಖನಿಜಗಳೂ ಇವೆ. ಇನ್ನೂ ಚಳಿಗಾಲದಲ್ಲಿ ಕೆಮ್ಮು, ಶೀತ ಆಗುವುದು ಹೆಚ್ಚು. ಇದಕ್ಕೆ ಪರಿಹಾರವಾಗಿ ಈರುಳ್ಳಿ ಜ್ಯೂಸ್ ಸೇವಿಸಬಹುದು ಎಂದು ತಜ್ಞರು ಹೇಳುತ್ತಾರೆ.
ಈರುಳ್ಳಿ ರಸವು ಒಂದು ನೈಸರ್ಗಿಕ ಪರಿಹಾರ. ಎರಡು ಹಸಿರು ಈರುಳ್ಳಿಯನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ, ಸ್ಟೀಲ್ ಬಟ್ಟಲಿನಲ್ಲಿ ಇಡಿ. ಇದಕ್ಕೆ ಒಂದು ಲೀಟರ್‌ಗಿಂತ ಹೆಚ್ಚು ನೀರು ಸೇರಿಸಿ ಮತ್ತು ಒಂದು ಗಂಟೆ ಬಿಡಿ. ನಂತರ ಆ ನೀರನ್ನು ಕುಡಿಯುವುದು ಒಳ್ಳೆಯದು. ಅಥವಾ ಮಿಶ್ರಣವನ್ನು ರಾತ್ರಿಯಿಡೀ ಫ್ರಿಡ್ಜ್‌ನಲ್ಲಿ ಇಟ್ಟು ಮರುದಿನ ತಣ್ಣಗಾದಾಗ ಸೇವಿಸಬಹುದು.
ಇದನ್ನೂ ಓದಿ:ಈ ವರ್ಷ ಸರಿಯಾದ ಆಹಾರ ಅಷ್ಟೇ ಅಲ್ಲ, ಬುದ್ದಿವಂತಿಕೆಯಿಂದ ನಿಮ್ಮಿಷ್ಟದ ತಿನಿಸು ಸವಿಯಿರಿ
ಈರುಳ್ಳಿಯಲ್ಲಿ ಗಂಧಕ ಹೆಚ್ಚಾಗಿರುತ್ತದೆ. ಇದು ದೇಹದಲ್ಲಿ ಉರಿಯೂತ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರಿಂದ ಶೀತ ಮತ್ತು ಕೆಮ್ಮು ಶಮನವಾಗುತ್ತದೆ. ಆದರೆ ಇದನ್ನು ಸಾಬೀತುಪಡಿಸಲು ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. ಇದು ದೇಹಕ್ಕೆ ಒಳ್ಳೆಯದು ಎಂದಷ್ಟೇ ಹೇಳಬಹುದು. ಆದರೆ ಯಾವುದೇ ಅಡ್ಡ ಪರಿಣಾಮಗಳಂತಾ ಇಲ್ಲ. ಈರುಳ್ಳಿ ಉರಿಯೂತ ಮತ್ತು ನೋವನ್ನು ಕಡಿಮೆ ಮಾಡಲು ಸಹಾಯಕ. ಆದ್ದರಿಂದ, ಇದು ಶೀತದ ವಿರುದ್ಧವೂ ಕಾರ್ಯನಿರ್ವಹಿಸುತ್ತದೆ ಅನ್ನೋದು ತಜ್ಞರ ಮಾತು.
ಈರುಳ್ಳಿಯಲ್ಲಿ ಫೈಬರ್, ಫೋಲಿಕ್ ಆಮ್ಲ ಮತ್ತು ವಿಟಮಿನ್ ಬಿ 6 ಸಮೃದ್ಧವಾಗಿದೆ. ಇವು ದೇಹದಲ್ಲಿ ಹೊಸ ಕೋಶಗಳ ಉತ್ಪಾದನೆಗೆ ಸಹಾಯ ಮಾಡುತ್ತವೆ. ಉತ್ಕರ್ಷಣ ನಿರೋಧಕಗಳು ಮತ್ತು ಸಲ್ಫರ್ ಕ್ಯಾನ್ಸರ್ ವಿರುದ್ಧ ಹೋರಾಡುವುದು ಮಾತ್ರವಲ್ಲದೆ, ರಕ್ತದಲ್ಲಿನ ಸಕ್ಕರೆ ನಿಯಂತ್ರಣ ಮತ್ತು ಮೂಳೆಗಳ ಆರೋಗ್ಯಕ್ಕೆ ಸಹಾಯ ಮಾಡುತ್ತದೆ. ಇದು ಕೂದಲಿನ ಆರೋಗ್ಯಕರ ಬೆಳವಣಿಗೆಗೂ ಸಹಕಾರಿ. ಸಲ್ಫರ್ ಅಲರ್ಜಿ ಇರುವವರು ಇದನ್ನು ತಪ್ಪಿಸಿ.
ಇದನ್ನೂ ಓದಿ:ಪೌಷ್ಟಿಕ ಆಹಾರ ಸೇವಿಸಿ ಆರೋಗ್ಯವಾಗಿರಿ: ಇಲ್ಲಿವೆ ಕೆಲವು ಉಪಯುಕ್ತ ಸಲಹೆ