ಹೈದರಾಬಾದ್:ಯಕೃತ್ತಿನ ಕ್ಯಾನ್ಸರ್ ಮೂರು ಮತ್ತು ನಾಲ್ಕನೇ ಹಂತಕ್ಕೆ ತಲುಪಿದ ರೋಗಿಗಳಲ್ಲಿ ಇಮ್ಯುನೊಥೆರಪಿ ಮೂಲಕ ರೋಗವನ್ನು ಗುಣಪಡಿಸಬಹುದು ಎಂದು ಅಧ್ಯನವೊಂದು ವಿವರಿಸಿದೆ. ಹೈದರಾಬಾದ್ನ ಎಐಜಿಯ ಹಿರಿಯ ಕನ್ಸಲ್ಟೆಂಟ್ ಹೆಪಟಾಲಾಜಿಸ್ಟ್ ಡಾ. ಆನಂದ ಕುಲಕರ್ಣಿ ಅವರು 67 ಮಂದಿ ಯಕೃತ್ತಿನ ಕ್ಯಾನ್ಸರ್ ರೋಗಿಗಳ ಮೇಲೆ ಅಧ್ಯಯನ ಮಾಡಿದಾಗ ಇವರಲ್ಲಿ ಶೇ.12% ರೋಗಿಗಳಲ್ಲಿ ಉತ್ತಮ ಫಲಿತಾಂಶ ಕಂಡುಬಂದಿದೆ. ಜೊತೆಗೆ ಶೇ. 25% ರೋಗಿಗಳಲ್ಲಿ ಯಕೃತ್ತಿನ ಕ್ಯಾನ್ಸರ್ ನಿಯಂತ್ರಣಕ್ಕೆ ಬಂದಿರುವುದು ಅಧ್ಯಯನದಿಂದ ಗೊತ್ತಾಗಿದೆ.
ಈ ಅಧ್ಯಯನದ ವಿವರಗಳನ್ನು INASAL (ಇಂಡಿಯನ್ ನ್ಯಾಷನಲ್ ಅಸೋಸಿಯೇಷನ್ ಫಾರ್ ಸ್ಟಡಿ ಆಫ್ ದಿ ಲಿವರ್) ದಿಂದ ಪ್ರಕಟವಾಗುವ ಜರ್ನಲ್ ಆಫ್ ಕ್ಲಿನಿಕಲ್ ಅಂಡ್ ಎಕ್ಸ್‌ಪೆರಿಮೆಂಟಲ್ ಹೆಪಟಾಲಜಿಯಲ್ಲಿ ಪ್ರಕಟಿಸಲಾಗಿದೆ. ಯಕೃತ್ತಿನ ಕ್ಯಾನ್ಸರ್ ಸಾಮಾನ್ಯವಾಗಿ ನಾಲ್ಕನೇ ಹಂತವನ್ನು ತಲುಪಿದಾಗ ಇತರ ಅಂಗಗಳಿಗೆ ಹರಡುತ್ತದೆ. ಆಗ ಯಕೃತ್ತಿನ ಕಸಿ ಕಷ್ಟ. ಯಕೃತ್ತಿನ ಕ್ಯಾನ್ಸರ್ ಪ್ರಮಾಣ ಶೇ. 80% ತಲುಪುವವರೆಗೂ ಹೆಚ್ಚಿನ ಜನರಲ್ಲಿ ಇದರ ರೋಗಲಕ್ಷಣಗಳು ಕಂಡುಬರುವುದಿಲ್ಲ.
ಯಕೃತ್ತಿನ ಕ್ಯಾನ್ಸರ್ ತೀವ್ರ ಹಂತಕ್ಕೆ ತಲುಪಿದಾಗ ಆಯಾಸ, ವಾಕರಿಕೆ, ಬೆನ್ನು ನೋವು, ವಾಂತಿ, ತೂಕ ನಷ್ಟ, ಜಾಂಡೀಸ್, ಜ್ವರ, ಯಕೃತ್ತಿನ ಊತ ಮತ್ತು ಇತರ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಇಂತಹ ಸಂದರ್ಭದಲ್ಲಿ ರೋಗಿಗಳನ್ನು ಇಮ್ಯುನೊಥೆರಪಿಗೆ ಒಳಪಡಿಸುವ ಮೂಲಕ ಗುಣಪಡಿಸಬಹುದಾಗಿದೆ.
ಚಿಕಿತ್ಸೆ ಹೇಗೆ: ರೋಗಿಗಳಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮೊನೊಕ್ಲೋನಲ್ ಪ್ರತಿಕಾಯಗಳನ್ನು ಚುಚ್ಚುಮದ್ದಿನ ರೂಪದಲ್ಲಿ ನೀಡಲಾಗುತ್ತದೆ. ಪ್ರತಿ ಮೂರು ವಾರಗಳಿಗೊಮ್ಮೆ ಒಂದು ಡೋಸ್ ಅನ್ನು ರೋಗಿಯ ಸ್ಥಿತಿಯನ್ನು ಅವಲಂಬಿಸಿ ಕನಿಷ್ಠ ಆರು ಬಾರಿ ಅಥವಾ 15 ಬಾರಿ ನೀಡಬೇಕು. ಪ್ರತಿಕಾಯಗಳು ನಂತರ ಕ್ಯಾನ್ಸರ್ ಅಂಗಾಂಶವನ್ನು ನಾಶಪಡಿಸುತ್ತವೆ ಮತ್ತು ಯಕೃತ್ತಿನ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತವೆ. ನಂತರ ರೋಗಿಗಳು ಯಕೃತ್ತಿನ ಕಸಿಗೆ ಒಳಗಾಗಬಹುದು. ಈ ಬಗ್ಗೆ ಡಾ. ಆನಂದ್ ಕುಲಕರ್ಣಿ ಮಾತನಾಡಿ, "ಇಮ್ಯುನೊಥೆರಪಿ ಸಮಯದಲ್ಲಿ, ರೋಗಿಗಳು ತೀವ್ರ ಆಲಸ್ಯ, ಹಸಿವಿನ ಕೊರತೆ, ಜ್ವರ ಮತ್ತು ಬಿಪಿ ಹೆಚ್ಚಳದಂತಹ ಸಮಸ್ಯೆಗಳನ್ನು ಹೊಂದಿರುತ್ತಾರೆ" ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ನವಜಾತ ಶಿಶುಗಳಿಗೆ ಆ್ಯಂಟಿಬಯೋಟಿಕ್ ನೀಡುವಾಗ ಗಮನಿಸಬೇಕಾದ ಅಂಶಗಳೇನು ಗೊತ್ತೆ?
ಕೋವಿಡ್ ಬಳಿಕ ಮಕ್ಕಳಲ್ಲಿ ಹೆಚ್ಚುತ್ತಿದೆ ಮಧುಮೇಹ ಪ್ರಕರಣ: ಕೋವಿಡ್ 19 ಬಳಿಕ ಮಕ್ಕಳು ಮತ್ತು ಹದಿ ಹರೆಯದವರಲ್ಲಿ ಟೈಪ್ 1 ಮಧುಮೇಹ ಪ್ರಕರಣಗಳು ಏರಿಕೆ ಕಂಡಿದೆ ಎಂದು ಕೆನಾಡದಲ್ಲಿ ಇತ್ತೀಚಿಗೆ ನಡೆದ ಅಧ್ಯಯನದಿಂದ ತಿಳಿದುಬಂದಿತ್ತು. 19 ವರ್ಷದೊಳಗಿನ ಮಕ್ಕಳು ಮತ್ತು ಹದಿಹರೆಯದ 1,02,984 ಮಂದಿಯ ಅಧ್ಯಯನ ಸೇರಿದಂತೆ 42 ಅಧ್ಯಯನಗಳ ಆಧಾರದ ಮೇಲೆ ಈ ಅಧ್ಯಯನ ನಡೆಸಲಾಗಿತ್ತು. ಇದು ಯುವಜನತೆ ಈ ಪರಿಣಾಮಕ್ಕೆ ಒಳಗಾಗುತ್ತಿದ್ದಾರೆ ಎಂದು ಈ ವರದಿ ತಿಳಿಸಿತ್ತು.
ಟೈಪ್-1 ಮಧುಮೇಹದ ಪ್ರಮಾಣವು ಮೊದಲ ವರ್ಷಕ್ಕಿಂತ 1.14 ಪಟ್ಟು ಹೆಚ್ಚಾಗಿದೆ ಎಂದು ಅಧ್ಯಯನದ ಫಲಿತಾಂಶವು ಹೇಳಿತ್ತು. ಕೋವಿಡ್ ಸಾಂಕ್ರಾಮಿಕ ರೋಗದ ಆರಂಭದ ನಂತರದ ಎರಡನೇ ವರ್ಷದಲ್ಲಿ ಇದು 1.27 ಪಟ್ಟು ಹೆಚ್ಚಾಗಿದೆ. ಮಕ್ಕಳು ಮತ್ತು ಹದಿಹರೆಯದವರಲ್ಲಿ ಟೈಪ್ 2 ಮಧುಮೇಹ ಪ್ರಕರಣಗಳು ಮತ್ತಷ್ಟು ಹೆಚ್ಚಿವೆ. ಡಯಾಬಿಟಿಕ್ ಕೀಟೋ ಆಸಿಡೋಸಿಸ್ನ ಆಗಾಗ್ಗೆ ಪ್ರಕರಣಗಳನ್ನು ಅಧ್ಯಯನವು ಕಂಡುಹಿಡಿದಿತ್ತು.