ಬೆಂಗಳೂರು:ಪ್ರತಿ ನಿತ್ಯ ಅಥವಾ ವಾರದಲ್ಲಿ ಮೂರು ದಿನ ಒಂದು ಹಿಡಿಯಷ್ಟು ವಾಲ್ನಟ್ ಸೇವಿಸುವ ಮಕ್ಕಳ ಅರಿವಿನ ಸಾಮರ್ಥ್ಯದಲ್ಲಿ ಅದರಲ್ಲೂ ವಿಶೇಷವಾಗಿ ಏಕಾಗ್ರತೆಯಲ್ಲಿ ಹೆಚ್ಚಿನ ಸುಧಾರಣೆ ಕಾಣಬಹುದು ಎಂದು ಅಧ್ಯಯನ ತಿಳಿಸಿದೆ. ಸ್ಪಾನಿಷ್ ಸಂಶೋಧಕರ ನೇತೃತ್ವದಲ್ಲಿ ಈ ಅಧ್ಯಯನ ನಡೆಸಲಾಗಿದ್ದು, ಇಕ್ಲಿನಿಕಲ್ಮೆಡಿಸಿನ್ ಜರ್ನಲ್ನಲ್ಲಿ ಈ ಅಧ್ಯಯನ ಪ್ರಕಟಿಸಲಾಗಿದೆ. ನಿಯಮಿತವಾಗಿ ವಾಲ್ನಟ್ ಸೇವನೆಯಿಂದ ಅರಿವಿನ ಅಭಿವೃದ್ಧಿ ಜೊತೆಗೆ ಮಾನಸಿಕ ಪಕ್ವತೆ ಕಾರಣವಾಗುತ್ತದೆ.
ಮಿದುಳಿನ ಆರೋಗ್ಯ ವೃದ್ದಿ: ಈ ಹಿಂದಿನ ಅಧ್ಯಯನದಲ್ಲಿ ನಟ್ಸ್ಗಳು (ಒಣಹಣ್ಣುಗಳು) ಮಿದುಳಿನ ಆರೋಗ್ಯದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದನ್ನು ತೋರಿಸಿದೆ. ಹದಿ ಹರೆಯದವರಲ್ಲಿ ಅರಿವಿನ ಬೆಳವಣಿಗೆಯಲ್ಲಿ ನಿರ್ಣಾಯಕ ಹಂತದಲ್ಲಿ ಯಾವ ರೀತಿ ಪರಿಣಾಮ ಹೊಂದಿದೆ ಎಂಬುದನ್ನು ಪತ್ತೆ ಮಾಡಿಲ್ಲ. ವಾಲ್ನಟ್ಗಳಲ್ಲಿ ಆಲ್ಫಾ- ಲಿನೋಲೆನಿಕ್ ಫ್ಯಾಟಿ ಆಸಿಡ್ನಲ್ಲಿ ಸಮೃದ್ಧವಾಗಿದೆ. ಒಮೆಗಾ-3 ವಿಧದಲ್ಲಿದೆ. ಮೆದುಳಿನ ಬೆಳವಣಿಗೆಯಲ್ಲಿ ಮೂತಭೂತ ಪಾತ್ರವಹಿಸುತ್ತದೆ ಎಂಬುದು ತೋರಿಸಿದೆ.
ಹದಿಹರೆಯ ವಯಸ್ಸಿನಲ್ಲಿ ಹಾರ್ಮೋನ್ಗಳ ಬದಲಾವಣೆ ಕಂಡುಬರುವುದು ಸಮು. ಈ ವೇಳೆ ವಾಲ್ನಟ್ಗಳು ಸಿನಾಪ್ಟಿಕ್ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಮಿದುಳಿನ ಭಾಗವು ಮಾನಸಿಕ ಪಕ್ವತೆಯನ್ನು ಸಕ್ರಿಯಗೊಳಿಸುತ್ತದೆ. ಇದು ಸಂಕೀರ್ಣವಾದ ಭಾವನಾತ್ಮಕ ಮತ್ತು ಅರಿವಿನ ಕಾರ್ಯವನ್ನು ಸಕ್ರಿಯ ಗೊಳಿಸುತ್ತದೆ. ನರಕೋಶಗಳು ಈ ರೀತಿಯ ಕೊಬ್ಬಿನಾಮ್ಲದ ಪೋಷಣೆ ಹೊಂದಿರುತ್ತದೆ ಎಂದು ಜೋರ್ಡಿ ಜುಲ್ವೆಜ್ ತಿಳಿಸಿದ್ದಾರೆ.
ಇದನ್ನು ಓದಿ:ಬೇಸಿಗೆಯಲ್ಲಿ ತಂಪು ಮಾತ್ರವಲ್ಲ, ಮನಸ್ಸಿಗೆ ಉಲ್ಲಾಸವನ್ನು ನೀಡುತ್ತದೆ ಈ ಬಗೆ ಬಗೆಯ ಲಸ್ಸಿಗಳು