ಕರ್ನಾಟಕ

karnataka

ETV Bharat / sukhibhava

ಮಕ್ಕಳಿಗೆ ಹೆಚ್ಚಾಗಿ ಬ್ರೆಡ್​​ನಂತಹ ಬೇಕರಿ ತಿಂಡಿಗಳನ್ನು ತಿನ್ನಲು ಕೊಡ್ತೀರಾ ; ಹಾಗಾದರೆ ಎಚ್ಚರ! - ಸಂಸ್ಕರಿತ ಸ್ನಾಕ್ಸ್​​ಗಳ ಸೇವನೆ ಮಕ್ಕಳಲ್ಲಿ ಮಲಬದ್ಧತೆ

ಮಲಬದ್ಧತೆ ಅರಿವಿನ ಮಾಸದ ಹಿನ್ನೆಲೆ ಜಾಗತಿಕ ಆರೋಗ್ಯ ಕಾಳಜಿ ಕಾರ್ಯಕ್ರಮವನ್ನು ಡಿಸೆಂಬರ್​ ತಿಂಗಳಾದ್ಯಂತ ಹಮ್ಮಿಕೊಳ್ಳಲಾಗುವುದು. ಈ ಮೂಲಕ ಕರುಳಿನ ಆರೋಗ್ಯದ ಜಾಗೃತಿ ಮೂಡಿಸಲಾಗುವುದು

constipation cases Increasing in children in Bangalore
constipation cases Increasing in children in Bangalore

By ETV Bharat Karnataka Team

Published : Dec 18, 2023, 2:51 PM IST

ಬೆಂಗಳೂರು:ಬ್ರೇಡ್​​ನಂತಹ ಬೇಕರಿ ತಿಂಡಿ ಮತ್ತು ಸಂಸ್ಕರಿತ ಸ್ನಾಕ್ಸ್​​ಗಳ ಸೇವನೆ ಮಕ್ಕಳಲ್ಲಿ ಮಲಬದ್ಧತೆ ಸಮಸ್ಯೆಗೆ ಕಾರಣವಾಗುತ್ತದೆ. ಈ ರೀತಿ ಮಕ್ಕಳಲ್ಲಿ ಕಾಡುವ ಮಲಬ್ಧತೆ ಸಮಸ್ಯೆ ಬೆಂಗಳೂರಿನಲ್ಲಿ ಕಳೆದ ಐದು ವರ್ಷದಿಂದ ಹೆಚ್ಚಾಗಿದೆ ಎಂದು ತಜ್ಞರು ತಿಳಿಸಿದ್ದಾರೆ. ಮಲಬದ್ಧತೆ ಅರಿವಿನ ಮಾಸದ ಹಿನ್ನೆಲೆ ಜಾಗತಿಕ ಆರೋಗ್ಯ ಕಾಳಜಿ ಕಾರ್ಯಕ್ರಮವನ್ನು ಡಿಸೆಂಬರ್​ ತಿಂಗಳಾದ್ಯಂತ ಹಮ್ಮಿಕೊಳ್ಳಲಾಗುವುದು. ಈ ಮೂಲಕ ಕರುಳಿನ ಆರೋಗ್ಯದ ಜಾಗೃತಿ ಮೂಡಿಸಲಾಗುವುದು.

ಫೈಬರ್​ ಅಂಶದ ಕೊರತೆ: ಈ ಕುರಿತು ಮಾತನಾಡಿರುವ ಹಳೆ ಮದ್ರಾಸ್​ ರಸ್ತೆಯ ಮಣಿಪಾಲ್​ ಆಸ್ಪತ್ರೆ ವೈದ್ಯರಾಗಿರುವ ಶ್ರೀ ಕಾಂತ್​​, ಬೇಕರಿ ಉತ್ಪನ್ನಗಳಲ್ಲೂ ಮೈದಾಗಳಿಂದ ಮಾಡಲಾಗುತ್ತದೆ. ಇವು ಯಾವುದೇ ಫೈಬರ್​ ಅಂಶವನ್ನು ಹೊಂದಿರುವುದಿಲ್ಲ, ಅಲ್ಲದೇ ಇತ್ತೀಚಿನ ದಿನದಲ್ಲಿ ಮಕ್ಕಳ ಸಂಪೂರ್ಣ ಊಟವೂ ತರಕಾರಿ ಮತ್ತು ಹಣ್ಣುಗಳಿಂದ ಕೂಡಿರುವುದಿಲ್ಲ. ಇವುಗಳನ್ನು ಬಹು ನಗಣ್ಯವಾಗಿ ಪರಿಗಣಿಸಲಾಗಿದೆ. ಈ ಎಲ್ಲ ಆಹಾರ ಪದ್ಧತಿ ಬದಲಾಣೆಗಳು 5 ವರ್ಷ ಮೇಲ್ಪಟ್ಟ ಮಕ್ಕಳಲ್ಲಿ ಮಲಬದ್ಧತೆ ಹೆಚ್ಚಲು ಕಾರಣವಾಗುತ್ತದೆ ಎಂದಿದ್ದಾರೆ.

ಚಳಿಗಾಲದಲ್ಲಿ ಮಕ್ಕಳು ತಮ್ಮ ಬಹುತೇಕ ಸಮಯವನ್ನು ಮನೆಯ ಒಳಗೆಯೇ ಕಳೆಯುತ್ತಾರೆ. ಅವರಲ್ಲಿ ಹೊರಾಂಗಣ ದೈಹಿಕ ಚಟುವಟಿಕೆಗಳು ಮತ್ತು ಬೆವರು ಉಂಟಾಗುವುದಿಲ್ಲ. ಬಾಯಾರಿಕೆ ಉಂಟಾಗಿ ನೀರು ಕುಡಿಯುವುದಿಲ್ಲ. ಅವರು ಕೊಂಚವೇ ನೀರು ಕುಡಿದು ದಿನ ಮುಗಿಸುತ್ತಾರೆ. ಇವೆಲ್ಲವೂ ಮಕ್ಕಳಲ್ಲಿ ಮಲಬದ್ಧತೆ ಸಮಸ್ಯೆಗೆ ಕಾರಣವಾಗಿದೆ ಎಂದಿದ್ದಾರೆ.

ಸಣ್ಣ ಮಕ್ಕಳಲ್ಲಿ ಮಲಬದ್ಧತೆ ಸಮಸ್ಯೆಗೆ ಮತ್ತೊಂದು ಕಾರಣ ಎಂದರೆ, ಅಸಮಪರ್ಕ ಶೌಚಾಲಯದ ತರಬೇತಿ. ಶೌಚಾಲಯ ತರಬೇತಿಗೆ ಗಮನದ ಕೊರತೆ. ಪಾಶ್ಚಿಮಾತ್ಯ ಕಮೋಡ್ ಮಕ್ಕಳಿಗೆ ಬಳಕೆ ಸ್ನೇಹಿಯಾಗಿಲ್ಲ. ಇದು ಶೌಚಾಲಯದ ಅಭ್ಯಾಸದ ಕಲಿಕೆಗೆ ಅಡ್ಡಿಯಾಗುತ್ತದೆ. ಭಾರತದ ಯಾವುದೇ ಪ್ರದೇಶದಲ್ಲಿನ ಆಹಾರ ಪದ್ಧತಿಗಳು ಬೇಕಾದಷ್ಟು ಪ್ರಮಾಣದ ನೀರು, ಫೈಬರ್​ ಅಂಶವೂ ಇರುತ್ತದೆ. ಇವು ಮಲಬದ್ಧತೆ ತಡೆಯಲು ಸಾಧ್ಯವಾಗಿಸುತ್ತದೆ. 3-4 ವರ್ಷದ ಮಕ್ಕಳು ನಮ್ಮ ಸಾಂಪ್ರದಾಯಿಕ ಬೇಳೆಕಾಳುಗಳಿಂದ ಕೂಡಿರದ ಆಹಾರ ಬದ್ಧತಿಗೆ ಹೋದಲ್ಲಿ ಇದಕ್ಕೆ ಪರಿಹಾರ ಕಾಣಬಹುದು.

ಆಹಾರದ ಆಯ್ಕೆ ಹೀಗಿರಲಿ: ಪ್ರೊಸೆಸ್ಡ್​ ಸ್ನಾಕ್ಸ್​​, ಮತ್ತು ಹಣ್ಣು, ತರಕಾರಿ ಹಾಗೂ ಸಂಪೂರ್ಣ ಬೇಳೆಕಾಳುಗಳಿಂದ ಕೂಡಿದ ಫೈಬರ್​ ಸಮೃದ್ಧ ಆಹಾರ ಕೊರತೆ ಕೂಡ ಮಕ್ಕಳಲ್ಲಿ ಮಲಬದ್ಧತೆ ಕಾರಣವಾಗಿದೆ. ನೀರಿನ ಕುಡಿಯುವ ಪ್ರಮಾಣ ಕಡಿಮೆಯಾಗುವುದು ಕೂಡ ಜೀರ್ಣಕ್ರಿಯೆ ಮೇಲೆ ಪರಿಣಾಮ ಬೀರುತ್ತದೆ ಎಂದು ರಾಜ್​ಕೋಟ್​​ನ ಎಚ್​ಸಿಜಿ ಆಸ್ಪತ್ರೆಯ ಕನ್ಸಟಂಟ್​ ಫಿಜಿಷಿಯನ್​ ಡಾ ಕುಶಾಲಿ ಲಲ್​ಚೇಟ್​ ತಿಳಿಸಿದ್ದಾರೆ.

ಬೆಂಗಳೂರಿನ ಬೆಚ್ಚಗಿನ ವಾತಾವರಣ ಮತ್ತು ಆದ್ರರ್ತೆಗಳು ದೇಹದಲ್ಲಿ ನೀರಿನಾಂಶ ನಷ್ಟಕ್ಕೆ ಕಾರಣವಾಗುತ್ತದೆ. ಇದರಿಂದ ನಿರ್ಜಲೀಕರಣ ಸಮಸ್ಯೆ ಕಾಡುತ್ತದೆ. ಸರಿಯಾದ ಹೈಡ್ರೇಷನ್​ ಇಲ್ಲದೇ ಇರುವುದು ಹೊಟ್ಟೆ ಉಬ್ಬರಕ್ಕೆ ಕಾರಣವಾಗುವ ಜೊತೆಗೆ ಮಲಬದ್ಧತೆ ಕಾರಣವಾಗುತ್ತದೆ.

ಮಕ್ಕಳಲ್ಲಿ ಜೀರ್ಣಕ್ರಿಯೆ ವ್ಯವಸ್ಥೆ ಅಭಿವೃದ್ಧಿ ಹೊಂದಿರುತ್ತಿರುತ್ತದೆ. ಮಲಬದ್ಧತೆ ಜೀವನದ ಗಂಭೀರ ಪರಿಣಾಮ ಹೊಂದಿರುತ್ತಾರೆ. ಆರಂಭಿಕ ಮಧ್ಯಸ್ಥಿಕೆ ಮತ್ತು ಆಹಾರ ಪದ್ಧತಿ ಹೊಂದಾಣಿಕ ಆರೋಗ್ಯಕರ ಕರುಳಿಗೆ ಅವಶ್ಯಕವಾಗಿದೆ. ಪೋಷಕರು ಮಕ್ಕಳ ಆಹಾರದಲ್ಲಿ ಬೇಳೆ ಕಾಳು, ಪಾಲಕ್​, ಹಣ್ಣುಗಳು ಇರುವಂತೆ ನೋಡಿಕೊಳ್ಳಬೇಕು. ಹಿರಿಯರು ಕೂಡ ಫೈಬರ್​ ಹೊಂದಿರುವ ತರಕಾರಿ ಸೇವನೆಗೆ ಒತ್ತು ನೀಡುವ ಜೊತೆಗೆ ಹೆಚ್ಚಾಗಿ ನೀರು ಸೇವನೆ ಮಾಡಬೇಕು ಎಂದು ನಾಗರಬಾವಿಯ ಫೋರ್ಟಿಸ್​ ಆಸ್ಪತ್ರೆಗೆ ಭಾರತಿ ಕುಮಾರ್​ ತಿಳಿಸಿದ್ದಾರೆ. (ಐಎಎನ್​ಎಸ್​)

ಇದನ್ನೂ ಓದಿ:ಪೋಷಕಾಂಶ ಸಮೃದ್ಧ ಸಿಹಿ ಗೆಣಸು ಅತಿಯಾಗಿ ತಿನ್ನ ಬಾರದು: ಯಾಕೆ ಗೊತ್ತಾ?

ABOUT THE AUTHOR

...view details