ಕೊರೊನಾ ಸೋಂಕಿಗೆ ಒಳಗಾದವರಲ್ಲಿ ಅನೇಕರಿಗೆ ಚರ್ಮರೋಗದ ಸಮಸ್ಯೆ ಕಂಡುಬಂದಿದೆ ಎಂದು ಸಂಶೋಧಕರ ತಂಡ ಕಂಡುಹಿಡಿದಿದೆ. ಆನ್‌ಲೈನ್ ಮೂಲಕ ನಡೆಸಿದ ಸಮೀಕ್ಷೆಯಲ್ಲಿ ಈ ವಿಚಾರ ಬಹಿರಂಗವಾಗಿದ್ದು, ಸೋಂಕಿಗೆ ತುತ್ತಾದ ವ್ಯಕ್ತಿಗಳಲ್ಲಿ ಶೇ. 17ರಷ್ಟು ಮಂದಿಗೆ ಚರ್ಮದ ದದ್ದುಗಳು ಕಂಡು ಬಂದಿದೆ ಎಂದು ತಿಳಿದುಬಂದಿದೆ. ಇನ್ನು ಶೇ.21 ರಷ್ಟು ಮಂದಿಯಲ್ಲಿ ಕೊರೊನಾ ಸಂಬಂಧಿತ ಲಕ್ಷಣಗಳು ಮಾತ್ರ ಕಂಡುಬಂದಿದೆ.
"ಕೋವಿಡ್ -19ರ ಕ್ಯುಟೇನಿಯಸ್ ಮ್ಯಾನಿಫೆಸ್ಟೇಶನ್ಗಳು ಕೆಲವೊಮ್ಮೆ ಸೋಂಕಿನ ಮೊದಲ ಅಥವಾ ಏಕೈಕ ಚಿಹ್ನೆ" ಎಂದು ಯುಕೆಯ ಕಿಂಗ್ಸ್ ಕಾಲೇಜ್ ಲಂಡನ್ನ ಸಂಶೋಧಕ ಮಾರಿಯೋ ಫಾಲ್ಚಿ ಹೇಳಿದ್ದಾರೆ.