ಹೈದರಾಬಾದ್: ಓಡುತ್ತಿರುವ ಇಂದಿನ ಜಗತ್ತಿನಲ್ಲಿ ಪೋಷಕರು ತಮ್ಮ ಮಕ್ಕಳಿಗೆ ನೀಡಬಹುದಾದ ಅತ್ಯಮೂಲ್ಯ ಉಡುಗೊರೆ ಎಂದರೆ ಅದುವೇ ಸಮಯ. ಅಚ್ಚರಿಯಾದರೂ ಹೌದು. ಕೆಲಸದ ಒತ್ತಡ, ನಿರಂತರ ಸ್ಮಾರ್ಟ್ಫೋನ್ ಬಳಕೆ ಮತ್ತು ಗಂಡ ಹೆಂಡತಿಯ ನಡುವಿನ ಸಂವಹನದ ಕೊರತೆಯು ಮಕ್ಕಳನ್ನು ದುರ್ಬಲವಾಗಿಸುತ್ತಿದೆ. ಮಕ್ಕಳ ನಡುವೆ ಸಂವಹನದ ಮಾರ್ಗಗಳನ್ನು ಸ್ಥಾಪಿಸುವ ಮೂಲಕ ಅವರನ್ನು ಅರ್ಥ ಮಾಡಿಕೊಳ್ಳಲು ಮತ್ತು ಬೆಂಬಲಿಸಲು ಸಾಧ್ಯವಾಗುತ್ತದೆ.
ಅರ್ಥೈಸಿಕೊಳ್ಳುವಿಕೆ ಅಭಿವೃದ್ಧಿ, ನಂಬಿಕೆ ಮತ್ತು ಪೋಷಕರು ಮತ್ತು ಮಕ್ಕಳ ನಡುವಿನ ಸ್ನೇಹವೂ ಅವರಿಗೆ ಪ್ರಮುಖ ಬೆಂಬಲ ವ್ಯವಸ್ಥೆ ಸೃಷ್ಟಿಸುತ್ತದೆ. ತಾಳ್ಮೆ, ಸಹಾನುಭೂತಿ ಮತ್ತು ನಿರಂತರ ಪ್ರಯತ್ನದಿಂದಾಗಿ ಪೋಷಕರು ಮಕ್ಕಳ ನಡುವಿನ ಸಂಬಂಧವನ್ನು ಬಲ ಪಡಿಸಬಹುದು. ಎಷ್ಟೇ ಬ್ಯುಸಿ ಜೀವನದಲ್ಲೂ ಮಕ್ಕಳಿಗೆ ನಿತ್ಯ ಸಮಯ ನೀಡುವುದು ಅಗತ್ಯವಾಗಿದೆ.
ಮಕ್ಕಳ ಜೀವನದಲ್ಲಿ ಶಾಲಾ ಶಿಕ್ಷಣದ ಮಹತ್ವವನ್ನು ಗುರುತಿಸುವುದು ಬಹಳ ಮುಖ್ಯ. ಪೋಷಕರು ಸಕ್ರಿಯವಾಗಿ ಮಕ್ಕಳೊಂದಿಗೆ ಬೆರೆಯುವ ಮೂಲಕ ಶಾಲೆ ಬಗ್ಗೆ ಪ್ರಶ್ನೆಗಳನ್ನು ಕೇಳುವ ಮೂಲಕ ಅವರ ಶಾಲಾ ಜೀವನವನ್ನು ಅರ್ಥೈಸಿಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಮಕ್ಕಳಿಗೆ ನಿತ್ಯ ಅವರ ಬೇಕು ಬೇಡಗಳ ಪ್ರಶ್ನೆಗಳನ್ನು ಕೇಳುವುದು ಮುಖ್ಯವಾಗುತ್ತದೆ.
- ಆಟಕ್ಕೆ ಬೆಂಬಲಿಸಿ; ಇಂದು ಶಾಲೆಯಲ್ಲಿ ಆಟವಾಡಿದೆಯಾ? ಅಥವಾ ಈಗ ಆಟವಾಡಲು ಇಚ್ಚಿಸುತ್ತೀಯಾ ಎಂದು ಅವರನ್ನು ಆಟಕ್ಕೆ ಪ್ರೋತ್ಸಾಹಿಸಿ
- ಶಾಲೆಯಲ್ಲಿ ಮಕ್ಕಳಿಗೆ ಆದ ಅನುಭವವನ್ನು ಆಸಕ್ತಿಯಿಂದ ಕೇಳಿ. ಶಾಲೆಯಲ್ಲಿ ಇಂದು ನಡೆದ ಹಾಸ್ಯಾಸ್ಪದ ಘಟನೆ ಹೇಳುವಂತೆ ತಿಳಿಸಿ.
- ಮಕ್ಕಳ ಆಸಕ್ತಿ ಮತ್ತು ಅಭಿರುಚಿಗೆ ಪ್ರೋತ್ಸಾಹಿಸಿ. ಮಕ್ಕಳು ಶಾಲೆಯಲ್ಲಿ ಯಾವ ಚಟುವಟಿಕೆಯನ್ನು ಸಂಭ್ರಮಿಸುತ್ತಾರೆ ಎಂದು ಕೇಳಿ
- ಮಕ್ಕಳು ಎದುರಿಸುತ್ತಿರುವ ಕಷ್ಟಗಳನ್ನು ಕೇಳಿ. ಶಾಲೆಯಲ್ಲಿ ಏನಾದರೂ ಸಮಸ್ಯೆಗಳಿದ್ದರೆ ತಪ್ಪದೇ ಕೇಳಿ?
- ಮಕ್ಕಳ ಆತ್ಮ ಗೌರವ ಮತ್ತು ವಿಶ್ವಾಸ ಹೆಚ್ಚಿಸಿ. ಶಾಲೆಯಲ್ಲಿ ಏನಾದರೂ ಮೆಚ್ಚುಗೆಗಳಿಸಿದರಾ ಎಂದು ಕೇಳಿ?
- ಮಕ್ಕಳಲ್ಲಿ ಸಕಾರಾತ್ಮಕ ನಡುವಳಿಕೆ, ದಯೆ ಬಗ್ಗೆ ಮಾರ್ಗದರ್ಶನ ತೋರಿ; ಮಕ್ಕಳು ಶಾಲೆಯಲ್ಲಿ ಮಾಡಿದ ಒಳ್ಳೆ ಕೆಲಸಗಳ ಬಗ್ಗೆ ಕೇಳಿ ಮೆಚ್ಚುಗೆ ವ್ಯಕ್ತಪಡಿಸಿ.
- ಮಕ್ಕಳ ತಿನ್ನುವ ಅಭ್ಯಾಸಕ್ಕೆ ಒತ್ತು ನೀಡಿ. ನಿತ್ಯದ ಅವರ ಊಟ, ತಿಂಡಿಯ ಇಷ್ಟ- ಕಷ್ಟದ ಬಗ್ಗೆ ತಿಳಿಯಿರಿ.
- ಮಕ್ಕಳ ಸ್ನೇಹದ ಬಗ್ಗೆ ಕೇಳಿ ಅವರಲ್ಲಿ ಸಾಮಾಜಿಕ ಸಂಪರ್ಕ ಅಭಿವೃದ್ಧಿಗೆ ಪ್ರೇರೇಪಿಸಿ.
ಈ ರೀತಿಯ ಪ್ರಶ್ನೆಗಳನ್ನು ಕೇಳುವ ಮೂಲಕ ಮಕ್ಕಳ ಜೊತೆ ಸಂಭಾಷಣೆ ನಡೆಸುವುದರಿಂದ ಮಕ್ಕಳು ಶಾಲೆಯಲ್ಲಿ ಹೇಗೆ ಇರುತ್ತಾರೆ ಎಂದು ತಿಳಿಯುವ ಜೊತೆಗೆ ಪೋಷಕರು ಮತ್ತು ಮಗುವಿನ ಸಂಬಂಧ ಕೂಡ ಅಭಿವೃದ್ಧಿ ಆಗುತ್ತದೆ. ಮಗುವಿನ ಬೆಳವಣಿಗೆ ಬೆಂಬಲಿಸುವ ಉತ್ತಮ ಪರಿಸರ ಅಭಿವೃದ್ಧಿಪಡಿಸಿ.
ಇದನ್ನೂ ಓದಿ: ಶಿಶುಗಳನ್ನು ಕಾಡುವ ಮಲಬದ್ಧತೆ: ಈ ಸಲಹೆಗಳನ್ನು ಪಾಲಿಸಿ