ಈಗಂತೂ ವಿವಾಹಕ್ಕೂ ಮುನ್ನ ಡೇಟಿಂಗ್ ಸಾಮಾನ್ಯವಾಗಿದೆ. ಆದರೆ, ಇದರಲ್ಲಿ ಕೆಲವರಿಗೆ ಗೆಲುವಾಗಬಹುದು, ಇನ್ನೂ ಕೆಲವರಿಗೆ ಸೋಲಾಗಬಹುದು. ಇದಕ್ಕೆ ಕಾರಣ ಸಂಗಾತಿ ಜೊತೆಗೆ ಕಳೆದ ಕ್ಷಣಗಳು. ಹೀಗಾಗಿ ಸಂಗಾತಿಯನ್ನು ಮೊದಲ ಬಾರಿಗೆ ಭೇಟಿಯಾಗುವಾಗ ಮನಸ್ಸಲ್ಲಿ ಏನೇನೋ ಆತಂಕ, ದುಗುಡ, ದುಮ್ಮಾನವೆಲ್ಲವೂ ಇರುತ್ತದೆ. ಹಾಗಾದರೆ ನೀವು ಡೇಟಿಂಗ್ನಲ್ಲಿ ಯಶಸ್ಸು ಪಡೆಯಬೇಕು ಎಂದರೆ ಈ ತಪ್ಪುಗಳನ್ನು ಎಂದಿಗೂ ಮಾಡಬೇಡಿ. ಈ ನಿಯಮಗಳನ್ನು ಅನುಸರಿಸುವುದರಿಂದ ನಿಮ್ಮ ಸಂಗಾತಿ ಮತ್ತೇ ನಿಮ್ಮನ್ನು ಭೇಟಿ ಮಾಡಲು ಹಾತೊರೆಯುತ್ತಿರುತ್ತಾರೆ.
ಈ ಸಲಹೆಗಳನ್ನು ಗಮನಿಸಿ:
ತಡವಾಗಿ ಬರುವುದು: ಸಮಯ ತುಂಬಾ ಅವಶ್ಯಕ. ಅದರಲ್ಲೂ ಸಂಗಾತಿ ಆಗಬೇಕಾದವರನ್ನು ಕಾಯಿಸುವುದು ನಾವು ಅವರಿಂದ ದೂರ ಆದಂತೆಯೇ ಸರಿ. ಸಮಯಕ್ಕೆ ಸರಿಯಾಗಿ ಆಗಮಿಸದಿರುವುದು ನೀವು ಅವರ ಸಮಯ ಗೌರವಿಸುವುದಿಲ್ಲ ಎಂಬ ಸಂದೇಶವನ್ನು ಈ ಮೂಲಕ ರವಾನೆ ಮಾಡುತ್ತದೆ. ನೀವು ತಡವಾಗಿ ಭೇಟಿಯಾದರೂ ಪರವಾಗಿಲ್ಲ ಅದರ ಬಗ್ಗೆ ಅವರಿಗೆ ಮಾಹಿತಿ ಇರಲಿ.
ಫೋನ್ ನಿರಂತರವಾಗಿ ಬಳಸುವುದು:ಡೇಟಿಂಗ್ನಲ್ಲಿ ಮಾಡುವ ಸಾಮಾನ್ಯ ತಪ್ಪು ಎಂದರೆ ಫೋನ್‌ಗಳನ್ನು ತುಂಬಾನೆ ಹೆಚ್ಚಾಗಿ ಬಳಕೆ ಮಾಡುವುದು. ಇದರಿಂದ ಸಂಗಾತಿ ಸಮಯವನ್ನು ಗೌರವಿಸುವುದಿಲ್ಲ ಎಂಬ ಸಂಕೇತವನ್ನು ಇದು ತಿಳಿಸುತ್ತದೆ. ಇದಕ್ಕೂ ಮೊದಲು ನೀವು ಪ್ರಮುಖ ಕರೆ ಅಥವಾ ಇ-ಮೇಲ್‌ಗಾಗಿ ಏನಾದರೂ ಕಾಯುತ್ತಿದ್ದರೆ ಅದರ ಬಗ್ಗೆ ಅವರಿಗೆ ತಿಳಿಸುವುದನ್ನು ಮರೆಯಬೇಡಿ.
ಅತಿಯಾಗಿ ಪಾನೀಯ ಸೇವನೆ: ಡೇಟಿಂಗ್ ವೇಳೆ ಪಾನೀಯಗಳನ್ನು ಸೇವಿಸುವುದು ಉತ್ತಮವಾದರೂ ಸಹ ಮಿತಿ ಮೀರಬಾರದು. ಇದು ಸಮಯವನ್ನಯ ವ್ಯರ್ಥ ಮಾಡುತ್ತದೆ.