ಲಂಡನ್: ಧ್ಯಾನದಂತಹ ಸಾವಧಾನತೆ ಅಭ್ಯಾಸಗಳು ಜೊತೆಗೆ ವ್ಯಾಯಾಮವೂ ಮಾನಸಿಕ ಆರೋಗ್ಯವನ್ನು ಸುಧಾರಿಸುವಲ್ಲಿ ಪ್ರಮುಖವಾಗಿದೆ ಎಂದು ಹೊಸ ಅಧ್ಯಯನ ತಿಳಿಸುತ್ತದೆ.
ಜರ್ನಲ್ ಮೆಂಟಲ್ ಹೆಲ್ತ್ ಅಂಡ್ ಫಿಸಿಕಲ್ ಆ್ಯಕ್ಟಿವಿಟಿಯಲ್ಲಿ ಈ ಅಧ್ಯಯನವನ್ನು ಪ್ರಕಟಿಸಲಾಗಿದೆ. ಮನಸ್ಥಿತಿ ಬದಲಾವಣೆ ಮತ್ತು ಆರೋಗ್ಯ ಹಾಗೂ ಯೋಗ ಕ್ಷೇಮ ಸುಧಾರಣೆಯಲ್ಲಿ ಸಾವಧಾನತೆ ಮತ್ತು ದೈಹಿಕ ಚಟುವಟಿಕೆಗಳು ಪರಿಣಾಮಕಾರಿಯಾಗಿವೆ. ಇವರೆಡನ್ನು ಸಂಯೋಜಿಸಿದಾಗ ಜೀವನ ಬದಲಾವಣೆ ಕಾಣಬಹುದಾಗಿದೆ ಎಂದು ಸಲಹೆ ನೀಡಲಾಗಿದೆ.
ಸಾವಧಾನತೆ ಮತ್ತು ದೈಹಿಕ ಚಟುವಟಿಕೆಗಳ ಅಭ್ಯಾಸಗಳು ಮನೋವೈಜ್ಞಾನಿಕ ಪ್ರಯೋಜನವನ್ನು ನೀಡುತ್ತದೆ ಎಂಬುದನ್ನು ಸ್ಥಾಪಿಸಲಾಗಿದೆ. ಈ ಎರಡನ್ನು ಸಂಯೋಜಿಸಿದಾಗ ಹೇಗೆ ಸಕಾರಾತ್ಮಕ ಪರಿಣಾಮವನ್ನು ಹೆಚ್ಚಿಸಬಹುದು ಎಂಬುದನ್ನು ಮೊದಲ ಬಾರಿ ತೋರಿಸಲಾಗಿದೆ ಎಂದು ಯುಕೆಯ ಯುನಿವರ್ಸಿಟಿ ಆಫ್ ಬಾತ್ ಸಂಶೋಧಕರು ತಿಳಿಸಿದ್ದಾರೆ.
ಸಾವಧಾನತೆಯು ವ್ಯಾಯಾಮವನ್ನು ಅನ್ಲಾಕ್ ಮಾಡಲು ಸಹಾಯ ಮಾಡುವುದರ ಜೊತೆಗೆ ಮೊದಲ ಹಂತದಿಂದ ಆರಂಭಿಸಲು ಜನರಿಗೆ ಪ್ರೋತ್ಸಾಹ ನೀಡಲು ಸಹಾಯ ಮಾಡುತ್ತದೆ. ಇದು ಸಣ್ಣ ನೋವಿನಿಂದ, ಸೋಲಿನ ಮನಸ್ಥಿತಿಯಿಂದ ಹೊರ ಬರಲು ಹೆಚ್ಚಿನ ವ್ಯಾಯಾಮವೂ ಸಹಾಯ ಮಾಡುತ್ತದೆ. ವ್ಯಾಯಾಮವೂ ಸಕಾರಾತ್ಮಕ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಆದರೆ, ಇದನ್ನು ಆರಂಭಿಸುವುದು ಕಷ್ಟ ಸಾಧ್ಯ ಮತ್ತು ಇದಕ್ಕೆ ಕಾಲಾನಂತರದಲ್ಲಿ ಅಂಟಿಕೊಂಡಿರುವುದು ಕಷ್ಟ ಎಂದು ಯುನಿವರ್ಸಿಟಿ ಡಿಪಾರ್ಟ್ಮೆಂಟ್ ಆಫ್ ಹೆಲ್ತ್ನ ಬಿಹೇವಿಯರ್ ಚೇಂಜ್ನ ತಜ್ಞ ಮಾಶಾ ರೆಮಸ್ಕರ್ ತಿಳಿಸಿದ್ದಾರೆ.