ನವದೆಹಲಿ: ಸರಿಯಾದ ಆಹಾರವನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಯಾವ ಆಹಾರವನ್ನು ಸೇವಿಸುತ್ತೀರಾ ಅದೇ ನಿಮ್ಮ ದೇಹ ಹೀರಿಕೊಳ್ಳುತ್ತದೆ. ಸೇವಿಸುವ ಆಹಾರ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಕೂಡ ಪರಿಣಾಮ ಬೀರುತ್ತದೆ. ಪೌಷ್ಟಿಕಾಂಶ ಮತ್ತು ಸಮತೋಲಿತ ಡಯಟ್ ಆರೋಗ್ಯಯುತ ತೂಕ ನಿರ್ವಹಣೆ ಜೊತೆಗೆ ಡಯಾಬಿಟಿಸ್, ಕ್ಯಾನ್ಸರ್, ಆತಂಕ ಮತ್ತು ಹೃದಯ ಸಮಸ್ಯೆ ಅಪಾಯವನ್ನು ಕಡಿಮೆ ಮಾಡುತ್ತದೆ.
ಹೋಲಿಸ್ಟಿಕ್ ಹೆಲ್ತ್ ಕೋಚ್ನ ಅಜಾರ್ ಅಲಿ ಸಯ್ಯದ್ ಪ್ರಕಾರ, ಆಹಾರವನ್ನು ಪೌಷ್ಟಿಕಾಂಶ ಮತ್ತು ಟೇಸ್ಟಿ ಆಹಾರವನ್ನು ಆಯ್ಕೆ ಮಾಡಿಕೊಳ್ಳುವುದು ಅವಶ್ಯ. ಆಹಾರದಲ್ಲಿ ವರ್ಣರಂಜಿತವಾಗಿ ರೈನ್ಬೋ (ಕಾಮನ ಬಿಲ್ಲು) ಬಣ್ಣ ಬಳಕೆ ಮಾಡಬಹುದು. ರೈನ್ ಬೊ ಡಯಟ್ ಮೂಲಕ ತರಹೇವಾರಿ ಆಹಾರಗಳನ್ನು ಆಯ್ಕೆ ಮಾಡಿಕೊಳ್ಳಬಹುದು.
ಆರೋಗ್ಯಯುತ ಡಯಟ್ನಲ್ಲಿ ಹಣ್ಣು ಮತ್ತು ತರಕಾರಿ ಭಾಗವಾಗಿರಬೇಕು. ಇದು ಪೌಷ್ಟಿಕಾಂಶವನ್ನು ಯಥೇಚ್ಛವಾಗಿ ಹೊಂದಿರುತ್ತದೆ. ಫೈಬರ್, ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ ಇ, ಜಿಂಕ್, ಪ್ರಾಸ್ಪಾರಸ್, ಮೆಗ್ನಿಷಿಯಂ ಸೇರಿದಂತೆ ಹಲವು ಅಂಶಗಳು ಸೇರಿರಬೇಕು. ಹಣ್ಣು ಮತ್ತು ತರಕಾರಿಗಳನ್ನು ಹೆಚ್ಚಿನ ನೀರಿನ ಅಂಶವಿದ್ದು, ಇವು ದೇಹವನ್ನು ನಿರ್ಜಲೀಕರಣಗೊಳ್ಳದಂತೆ ತಡೆಯುತ್ತದೆ.
ಉತ್ಸಾಹಭರಿತ ಮತ್ತು ಆರೋಗ್ಯಕ್ಕಾಗಿ ವರ್ಣರಂಜಿತವಾಗಿ ಆಹಾರ ಸೇವನೆ ಮಾಡುವುದು ಅವಶ್ಯ. ನೈಸರ್ಗಿಕವಾಗಿರುವ ಬಣ್ಣ ಬಣ್ಣದ ತರಕಾರಿ, ಹಣ್ಣುಗಳು ದೇಹವನ್ನು ಪೋಷಿಸುವ ಜೊತೆಗೆ ರಕ್ಷಣೆಯನ್ನು ನೀಡುತ್ತದೆ. ಉದಾಹರಣೆಗೆ ಹಳದಿ ಮತ್ತು ಕಿತ್ತಾಳೆ ಹಣ್ಣುಗಳಲ್ಲಿ ಕೆರಾಟಿನ್ ಅಂಶವಿರುತ್ತದೆ. ಹಸಿರು ತರಕಾರಿಯನ್ನು ಕ್ಲೋರೊಫಿಲ್ ಮತ್ತು ಕೆಂಪು ಮತ್ತು ನೇರಳೆ ಆಹಾರದಲ್ಲಿ ಆಂಥೋಸಯಾನಿನಗಳು ಇರುತ್ತವೆ. ಬಣ್ಣಗಳು ದೇಹದಲ್ಲಿ ಕೆಲವು ನಿರ್ದಿಷ್ಟ ಪಾತ್ರಗಳನ್ನು ನಿರ್ವಹಿಸುತ್ತದೆ. ಈ ಹಿನ್ನೆಲೆ ಡಯಟ್ನಲ್ಲಿ ಅವುಗಳನ್ನು ಸೇರಿಸುವುದು ಅಗತ್ಯವಾಗಿದೆ ಎನ್ನುತ್ತಾರೆ ಅಜಾರ್ ಆಲಿ ಸಯ್ಯದ್
ತಜ್ಞರ ಪ್ರಕಾರ, ದಿನದಲ್ಲಿ ಕನಿಷ್ಠ ಪಕ್ಷ ಮೂರರಿಂದ ನಾಲ್ಕು ವಿಧದ ಹಣ್ಣು ಮತ್ತು ತರಕಾರಿಯನ್ನು ಸೇವನೆ ಮಾಡುವುದರಿಂದ ಕಡಿಮೆ ಕ್ಯಾಲೋರಿ, ಫ್ಯಾಟ್ ಮತ್ತು ಸಕ್ಕರೆ ಕಡಿಮೆ ಪ್ರಮಾಣದಲ್ಲಿ ದೊರಕುತ್ತದೆ. ಫೈಬರ್ ಅಂಶವೂ ಹೆಚ್ಚಿದ್ದು, ಆರೋಗ್ಯಯುತ ಪಾಲಿಫೆನೊಲಸ್ ಸಿಗುವುದರಿಂದ ತೂಕ ನಷ್ಟಕ್ಕೆ ಕಾರಣವಾಗುತ್ತದೆ. ಜೊತೆಗೆ ಸಿಹಿ ತಿನ್ನುವ ಬಯಕೆಯಾಗದಂತೆ ಕಾಪಾಡುತ್ತದೆ.