ಸ್ಥೂಲಕಾಯತೆ ಎನ್ನುವುದು ಅನೇಕ ರೋಗಗಳಿಗೆ ಕಾರಣವಾಗುವ ಅಪಾಯವನ್ನು ಹೊಂದಿದೆ. ಅದರಲ್ಲಿ ಒಂದು ಕೊಲೊರೆಕ್ಟಲ್ ಕ್ಯಾನ್ಸರ್ ಸಹ ಒಂದು. ಇದನ್ನು ಇಲ್ಲಿಯವರೆಗೆ ಗಂಭೀರವಾಗಿ ಪರಿಗಣಿಸಿಲ್ಲ. ಆದರೆ, ಜರ್ಮನ್ ಕ್ಯಾನ್ಸರ್ ರಿಸರ್ಚ್ ಸೆಂಟರ್ (ಡಿಕೆಎಫ್ಜೆಡ್) ಸಂಶೋಧನೆ ಅನುಸಾರ, ಈ ಸಮಸ್ಯೆಯಿಂದಾಗಿ ಕ್ಯಾನ್ಸರ್ ಪತ್ತೆಯಾಗುವ ಮೊದಲೇ ಜನರು ದಿಢೀರ್ ಎಂದು ತೂಕ ನಷ್ಟಕ್ಕೆ ಒಳಗಾಗುತ್ತಾರೆ ಎಂಬ ಅಂಶವನ್ನು ಬಹಿರಂಗ ಪಡಿಸಿದ್ದಾರೆ.
ಅಪಾಯ ಹೊಂದಿರುವ ಸ್ಥೂಲಕಾಯತೆ: ಇನ್ನು ಈ ಕುರಿತು ಸರಳ ಅಧ್ಯಯನಕ್ಕೆ ಸಮಸ್ಯೆ ಪತ್ತಯಾಗುವ ಸಮಯದಲ್ಲಿ ದೇಹದ ತೂಕವನ್ನು ಗಣನೆಗೆ ತೆಗೆದುಕೊಂಡಿದ್ದಾರೆ. ಈ ವೇಳೆ, ಸ್ಥೂಲಕಾಯ ಮತ್ತು ಕೊಲರೆಕ್ಟಲ್ ಕ್ಯಾನ್ಸರ್ ನಡುವಿನ ಸಂಬಂಧ ಅಸ್ಪಷ್ಟವಾಗಿ ಗೋಚರಗೊಂಡಿದೆ. ಹೊಸ ಅಧ್ಯಯನ ಅಕಾಲಿಕವಾಗಿ ತತ್ಕ್ಷಣವೇ ದೇಹದ ತೂಕ ನಷ್ಟ ಅನುಭವಿಸುವಿಕೆ ಈ ಕೊಲೊರೆಕ್ಟಲ್ ಕ್ಯಾನ್ಸರ್ ಅಪಾಯದ ತೀವ್ರತೆ ಹೊಂದಿದೆ ಎಂಬುದನ್ನು ಕಂಡುಕೊಂಡಿದ್ದಾರೆ. ಸ್ಥೂಲಕಾಯ ಮಾರಾಣಾಂತಿಕ ಕಾಯಿಲೆಗಳ ಅಪಾಯವನ್ನು ಹೊಂದಿದೆ. ಅಲ್ಲದೇ ಈ ಸ್ಥೂಲಕಾಯ ಕೊಲೊರೆಕ್ಟಲ್, ಮೂತ್ರಪಿಂಡ, ಎಂಡೋಮೆಟಿರಿಯಲ್ ಕ್ಯಾನ್ಸರ್ಗಳಿಗೆ ಕಾರಣವಾಗುಬಹುದು ಎಂಬುದಕ್ಕೆ ಆಧಾರಗಳನ್ನು ಒದಗಿಸಿದೆ. ಈ ಕೊಲೊನೊ ಕ್ಯಾನ್ಸರ್ ಸಾಮಾನ್ಯ ತೂಕ ಹೊಂದಿರುವವರಿಗೆ ಹೋಲಿಕೆ ಮಾಡಿದರೆ, ಸ್ಥೂಲಕಾಯ ಹೊಂದಿರುವವರಲ್ಲಿ ಹೆಚ್ಚಿದೆ ಎಂಬುದನ್ನು ಈ ಹಿಂದಿನ ಅಂದಾಜುಗಳು ಅಧ್ಯಯನದಿಂದ ಸಾಬೀತು ಪಡಿಸಿವೆ.
ಆದಾಗ್ಯೂ ಈ ಅಧ್ಯಯನ ಹೆಚ್ಚಿನ ಗಣನೆಗೆ ತೆಗೆದುಕೊಳ್ಳಲಾಗದಿದ್ದರೂ, ಒಂದೇ ವರ್ಷದಲ್ಲಿ ದಿಢೀರ್ ತೂಕ ಕಳೆದುಕೊಂಡ ಅನೇಕ ಮಂದಿಯಲ್ಲಿ ಈ ಕೊಲೊರೆಕ್ಟಲ್ ಕ್ಯಾನ್ಸರ್ ಪತ್ತೆಯಾಗಿದೆ ಎನ್ನುತ್ತಾರೆ ಹರ್ಮನ್ ಬ್ರೆನ್ನರ್. ಇದು ಅನೇಕ ಮರೆಮಾಚಿದ ಸ್ಥೂಲಕಾಯದ ಅಪಾಯದಗಳ ಕುರಿತು ತಿಳಿಯಲು ಕೊಡುಗೆ ನೀಡಲಿದೆ ಎಂದಿದ್ದಾರೆ.