ನವದೆಹಲಿ: ಭಾರತದಲ್ಲಿನ ಕಳಪೆ ವಾಯು ಗುಣಮಟ್ಟ ಶಿಶು ಮತ್ತು ಮಕ್ಕಳಲ್ಲಿ ಅರಿವಿನ ಸಮಸ್ಯೆಗೆ ಕಾರಣವಾಗುವ ಸಾಧ್ಯತೆ ಇದೆ ಎಂದು ಹೊಸ ಸಂಶೋಧನೆಯೊಂದು ತಿಳಿಸಿದೆ. ಬ್ರಿಟನ್ನ ಈಸ್ಟ್ ಆಗ್ಲಿಯಾ ಯುನಿವರ್ಸಿಟಿ ಈ ಸಂಬಂಧ ಅಧ್ಯಯನ ನಡೆಸಿದೆ. ಈ ಅಧ್ಯಯನ ತಂಡ ಉತ್ತರ ಪ್ರದೇಶದ ಲಕ್ನೋದಲ್ಲಿರುವ ಸಮುದಾಯ ಸಬಲೀಕರಣದ ಕಾರ್ಯ ನಡೆಸಿದ್ದು, ವಾಯು ಗುಣಮಟ್ಟ ಹೇಗೆ ಮಕ್ಕಳ ಅರಿವಿನ ಕೊರತೆಗೆ ಕಾರಣವಾಗುತ್ತದೆ ಎಂಬುದರ ಬಗ್ಗೆ ಅಧ್ಯಯನ ನಡೆಸಿದೆ.
ಉತ್ತರ ಪ್ರದೇಶದಲ್ಲಿ ಅಧ್ಯುಯನ:ಭಾರತದ ಕಳಪೆ ವಾಯು ಗುಣಮಟ್ಟಕ್ಕೆ ಹೆಚ್ಚಿನ ಪರಿಣಾಮಕ್ಕೆ ಒಳಗಾಗುತ್ತಿರುವ ಪ್ರದೇಶ ಉತ್ತರ ಪ್ರದೇಶವಾಗಿದ್ದು, ಈ ಉತ್ತರ ಪ್ರದೇಶದ ಶಿವ್ಗ್ರಾಮ್ನ ಗ್ರಾಮಾಂತರ ಸಮುದಾದಯದ ವಿವಿಧ ಸಾಮಾಜಿಕ - ಆರ್ಥಿಕ ಹಿನ್ನಲೆಯುಳ್ಳ ಕುಟುಂಬದೊಂದಿಗೆ ಇವರು ಕಾರ್ಯ ನಿರ್ವಹಿಸಿದ್ದಾರೆ. ಈ ಅಧ್ಯಯನದಲ್ಲಿ ಮೊದಲ ಬಾರಿಗೆ ಕಳಪೆ ವಾಯು ಗುಣಮಟ್ಟ ಮತ್ತು ದುರ್ಬಲ ದೃಷ್ಟಿ ಅರಿವಿನ ನಡುವೆ ಸಂಬಂಧ ಹೊಂದಿದೆ ಎಂದು ತೋರಿಸಿದೆ ಎಂದು ಯುಇಎ ಸ್ಕೂಲ್ ಆಫ್ ಸೈಕಾಲಜಿಯ ಪ್ರಮುಖ ಸಂಶೋಧಕ ಪ್ರೊ ಜಾನ್ ಸ್ಪೆನ್ಸರ್ ತಿಳಿಸಿದ್ದಾರೆ.
ಮನೆಯ ಗಾಳಿಗುಣಮಟ್ಟದ ಅಧ್ಯಯನ: ಗಾಳಿಯ ಸಣ್ಣ ನಿರ್ಧಿಷ್ಟ ಕಣಗಳು ಉಸಿರಾಡದ ಮೂಲಕ ದೇಹ ಹೊಕ್ಕಿ ಇದು ನೇರವಾಗಿ ಮಿದುಳಿನ ಮೇಲೆ ಪರಿಣಾಮ ಹೊಂದಬಹುದು. ಈ ಸಂಬಂಧ ಗಾಳಿಯ ಹೊರಸೂಸುವಿಕೆಯ ಮಟ್ಟ ಮತ್ತು ಗಾಳಿಯ ಗುಣಮಟ್ಟವನ್ನು ಅಳೆಯಲು ತಂಡವು ಮಕ್ಕಳ ಮನೆಗಳಲ್ಲಿ ಗಾಳಿಯ ಗುಣಮಟ್ಟದ ಮಾಪನ ನಡೆಸಿದೆ. ಇದರ ಜೊತೆಗೆ ಸಾಮಾಜಿಕ ಆರ್ಥಿಕ ಕುಟುಂಬ ಸ್ಥಿತಿಯ ನಿಯಂತ್ರಣವನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ.