ಲಂಡನ್: ಬೆಳಗ್ಗೆ ಎದ್ದಾಕ್ಷಣ ಅಥವಾ ಮೂಡ್ ಕೆಟ್ಟಾಗ ಕಾಫಿ ಕುಡಿಯುವುದರಿಂದ ಒಂದು ರಿಫ್ರೆಶ್ಮೆಂಟ್ ಸಿಗುತ್ತದೆ. ಭಾರತೀಯರೂ ಸೇರಿದಂತೆ ಜಗತ್ತಿನೆಲ್ಲೆಡೆ ಕಾಫಿಪ್ರಿಯರ ಸಂಖ್ಯೆ ಕಡಿಮೆ ಏನಿಲ್ಲ. ಕಾಫಿಯಲ್ಲಿ ಕೆಫೀನ್ ಅಂಶ ಸಮೃದ್ದವಾಗಿದೆ. ಇದು ದೇಹದ ಬೊಜ್ಜು ನಿವಾರಣೆಗೆ ಸಹಾಯ ಮಾಡುತ್ತದೆ. ಟೈಪ್2 ಡಯಾಬೀಟಿಸ್ ಅಪಾಯವನ್ನೂ ತಡೆಯಲು ಸಹಾಯ ಮಾಡುತ್ತದೆ ಎಂಬುದನ್ನು ಸಂಶೋಧನೆ ತಿಳಿಸಿದೆ.
ಈ ಸಂಬಂಧ ಇಂಪೀರಿಯಲ್ ಕಾಲೇಜ್ ಲಂಡನ್ ಅಧ್ಯಯನ ನಡೆಸಿದ್ದು, ಬೇಗ ಜೀರ್ಣಕ್ರಿಯೆ ಹೊಂದಿರುವ ಜನರ ರಕ್ತದಲ್ಲಿ ಹೆಚ್ಚಿನ ಮಟ್ಟದ ಕೆಫೀನ್ ಹೊಂದಿರುತ್ತಾರೆ. ಇದರಿಂದ ಅವರು ಆರೋಗ್ಯ ಲಾಭ ಪಡೆಯಬಹುದು ಎಂದು ತಿಳಿಸಿದ್ದಾರೆ. ಬಿಎಂಜೆ ಮೆಡಿಸಿನ್ ಜರ್ನಲ್ನಲ್ಲಿ ವರದಿ ಪ್ರಕಟವಾಗಿದ್ದು, ದೇಹದಲ್ಲಿನ ಕಾಫಿ ಚಯಾಪಚಯಗೊಳ್ಳುವ ವೇಗವು ತೂಕದ ಮೇಲೂ ಪರಿಣಾಮ ಹೊಂದಿರುತ್ತದೆ. ಇದಕ್ಕಾಗಿ 10 ಸಾವಿರ ಯುರೋಪಿಯನ್ ಜನರ ಮೇಲೆ ಸಂಶೋಧನೆ ನಡೆಸಲಾಗಿದೆ. ಇಂಥ ಚಯಾಪಚಯ ಕ್ರಿಯೆಯ ವೇಗದಲ್ಲಿ ಸಿವೈಪಿ1ಎ2 ಮತ್ತು ಎಎಚ್ಆರ್ ಜೀನ್ಗಳನ್ನು ಪತ್ತೆ ಮಾಡಲಾಗಿದೆ. ವಂಶವಾಹಿನಿಗಳು ರಕ್ತದಲ್ಲಿನ ಕೆಫೀನ್ ಮಟ್ಟದಲ್ಲಿ ಹೇಗೆ ಕೆಲಸ ಮಾಡುತ್ತದೆ. ದೇಹದ ಬಿಎಂಐ ಮತ್ತು ದೇಹದ ಕೊಬ್ಬಿನೊಂದಿಗೆ ಸಂಬಂಧ ಹೊಂದಿದೆಯೇ ಎಂದು ಅಧ್ಯಯನದಲ್ಲಿ ಬಳಸಲಾಗಿದೆ.
ಕೆಫೀನ್ ಮೆಟಾಬಾಲಿಸಮ್ ವಿಚಾರದಲ್ಲಿ ಆನುವಂಶಿಕ ರೂಪಾಂತರಗಳನ್ನು ಹೊಂದಿರುವ ಜನರು ಸರಾಸರಿ ಕಡಿಮೆ ಕಾಫಿ ಕುಡಿಯುತ್ತಾರೆ. ಆದರೆ ತ್ವರಿತವಾಗಿ ಚಯಾಪಚಯಗೊಳ್ಳುವ ಜನರಿಗಿಂತ ಅವರ ರಕ್ತದಲ್ಲಿ ಹೆಚ್ಚಿನ ಮಟ್ಟದ ಕೆಫೀನ್ ಹೊಂದಿರುತ್ತಾರೆ. ಇದು ಟೈಪ್ 2 ಡಯಾಬೀಟಿಸ್ನ ಅಪಾಯದ ಅರ್ಧದಷ್ಟು ಕಡಿತವು ತೂಕ ನಷ್ಟದಿಂದ ನಡೆಸಲ್ಪಡುತ್ತದೆ ಎಂದು ಸಂಶೋಧಕರು ಪತ್ತೆ ಮಾಡಿದ್ದಾರೆ.